ಯಡವಣ್ಣವರ ಸಾವಿಗೆ ಕಾರಣ ಯಾರು ? ವ್ಯಾಟ್ಸಪ್ ಗ್ರೂಪ್ ನಲ್ಲಿ ಆತ ಮೆಸ್ಸೇಜ್ ಮಾಡಿದ್ದೇನು ???

ಬೆಳಗಾವಿ: ಬೆಳಗಾವಿ ತಹಶೀಲ್ದಾರ ಕಚೇರಿಯಲ್ಲಿ ಎಸ್.ಡಿ.ಎ. ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆಗೆ ಮೇಲಾಧಿಕಾರಿಗಳ ಕಿರುಕುಳ ಆರೋಪ ಕೇಳಿ ಬಂದಿದ್ದು, ವಾಟ್ಸಪ್ ಗ್ರುಪ್ ನಲ್ಲಿ ಈ ಬಗ್ಗೆ ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ರುದ್ರಣ್ಣ ಯಡವಣ್ಣವರ (35) ಆತ್ಮಹತ್ಯೆಗೆ ಶರಣಾದ ದ್ವಿತೀಯ ದರ್ಜೆ ನೌಕರ. ತಹಶೀಲ್ದಾರ ಬಸವರಾಜ ನಾಗರಾಳ ಅವರ ಕೊಠಡಿಯಲ್ಲೇ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಿನ್ನೆಯಷ್ಟೆ ಸವದತ್ತಿ ತಹಶೀಲ್ದಾರ ಕಚೇರಿಗೆ ರುದ್ರಣ್ಣ ಯಡವಣ್ಣವರ ವರ್ಗಾವಣೆಗೊಂಡಿದ್ದರು. ಇಂದು ಬೆಳಿಗ್ಗೆ ನೋಡಿದರೆ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ತಮ್ಮ ಸಿಬ್ಬಂದಿಗಳ ವಾಟ್ಸಪ್ ಗ್ರುಪ್ ನಲ್ಲಿ ನನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ಸೋಮು ಇವ್ರೆ ನೇರ ಕಾರಣ. ಅಶೋಕ ಕಬ್ಬಲಿಗಾರ್ ಆಲಸೋ ನನ್ನ ಸಾವಿಗೆ ಕಾರಣವಾಗಿದ್ದು ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಬರೆದಿದ್ದಾರೆ. ರುದ್ರಣ್ಣ ಯಡವಣ್ಣವರ ತಹಶೀಲ್ದಾರ್ ಕಚೇರಿಯ ಸಿಬ್ಬಂಧಿಗಳ ವ್ಯಾಟ್ಸಪ್ ಗ್ರೂಪ್ ನಲ್ಲಿ ಈ ರೀತಿಯ ಮೆಸ್ಸೆಜ್ ಹಾಕಿದ್ದಾನೆ. ಎನ್ನುವ ಸಂದೇಶವೊಂದು ಹರಿದಾಡುತ್ತಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರುದ್ರಣ್ಣ ತಹಶೀಲ್ದಾರ್ ನಾಗರಾಳ್ ಹೊರತುಪಡಿಸಿ ಇಬ್ಬರು ಪಿಎ ಗಳ ಹೆಸರು ಪ್ರಸ್ತಾಪ ಮಾಡಿದ್ದಾನೆ. ಒಬ್ಬ ಸೋಮು ಇನ್ನೊಬ್ಬ ಅಶೋಕ್ ಕಬ್ಬಲಿಗಾರ್ ಕೆಲವು ಮಾದ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಸೋಮು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪರ್ಸನಲ್ ಪಿ.ಎ ಅಶೋಕ್ ಕಬ್ಬಲಿಗಾರ್ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪಿ.ಎ ಆಗಿದ್ದ. ಎನ್ನುವ ಸುದ್ದಿ ಹರಿದಾಡುತ್ತಿದೆ.ಡೆತ್ ನೋಟ್ ಸಿಕ್ಕಿದ್ರೆ ಸತ್ಯಾಂಶ ಏನು ಎನ್ನುವದು ಗೊತ್ತಾಗುತ್ತದೆ.

ಇನ್ನು ಮೃತ ರುದ್ರಣ್ಣ ಯಡವಣ್ಣವರ ಪತ್ನಿ ಸೇರಿ ಕುಟುಂಬಸ್ಥರು ಸುದ್ದಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಕಚೇರಿಗೆ ದೌಡಾಯಿಸಿದರು. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ಸ್ಪಷ್ಟವಾಗಲಿದೆ.

ಡಿಸಿಪಿ ರೋಹಣ ಜಗದೀಶ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಒಂದು ವೇಲ್ ಮೂಲಕ ನೇಣು ಹಾಕಿಕೊಳ್ಳಲಾಗಿದೆ. ಇನ್ನು ತಹಶೀಲ್ದಾರ್ ಕೊಠಡಿಯಲ್ಲಿ ಸಿಸಿಟಿವಿ ಕಂಡು ಬಂದಿಲ್ಲ. ಹೊರಗಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ. ಇನ್ನು ಮೃತ ವ್ಯಕ್ತಿ ಕುಟುಂಬಸ್ಥರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳುತ್ತೇವೆ ಎಂದರು.

ಇನ್ನು ವಾಟ್ಸಪ್ ಗ್ರುಪ್ ನಲ್ಲಿ ಸಾವಿಗೆ ಕಾರಣ ಆದವರ ಹೆಸರನ್ನು ಬರೆದಿರುವ ಕುರಿತ ಮಾಧ್ಯಮಗಳ ಪ್ರಶ್ನೆಗೆ ಸೊಶಿಯಲ್ ಮಿಡಿಯಾ, ವಾಟ್ಸಪ್ ಗ್ರುಪ್ ನಲ್ಲಿ ಹಾಕಿರಬಹುದು. ಡೆತ್ ನೋಟ್ ಸಿಕ್ಕಿಲ್ಲ ಆದರೆ, ಸತ್ಯಾಸತ್ಯತೆ ಗೊತ್ತಾಗಬೇಕಾದರೆ ಕೂಲಂಕುಶವಾಗಿ ತನಿಖೆ ಆಗಬೇಕು. ಈ ಬಗ್ಗೆ ಪ್ರತ್ಯೇಕವಾಗಿ ಹೇಳಲು ಕಷ್ಟವಾಗುತ್ತದೆ ಎಂದು ರೋಹಣ ಜಗದೀಶ ತಿಳಿಸಿದ್ದಾರೆ.

Check Also

ಮರಳು ಮಾಫಿಯಾ ಸಂಘರ್ಷದ ಶಂಕೆ, ಗುಂಡಿನ ದಾಳಿಗೆ ಯುವಕ ಬಲಿ

ಬೆಳಗಾವಿ : ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಬೇಕವಾಡ …

Leave a Reply

Your email address will not be published. Required fields are marked *