ಬೆಳಗಾವಿ-ಇತ್ತೀಚಿಗೆ ಹೈದ್ರಾಬಾದ ನಲ್ಲಿ ನಡೆದ ಹ್ಯಾಂಡಿಕ್ಯಾಪ್ಟ ಫಿಜಿಕಲಿ ಚಾಲೇಂಜ್ ಅಥ್ಲೆಟಿಕ್ ಗೇಮ್ಸ ನಲ್ಲಿ ಬೆಳಗಾವಿಯ ಈ ವಿಕಲಚೇತನ ಎರಡು ಗೋಲ್ಡ ಮೆಡಲ್ ಗಳನ್ನು ಗಿಟ್ಟಿಸಿಕೊಂಡಿದೆ
ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿರುವ 31 ವರ್ಷ ವಯಸ್ಸಿನ ರಿಜ್ವಾನಾ ಆರ್ ಜಮಾದಾರ ಶಾಟ್ ಪೂಟ್ ಮತ್ತು ಡಿಸ್ಕ ನಲ್ಲಿ ಚಿನ್ನದ ಪದಕ,ಜಾವಲಿಂಗ್ ನಲ್ಲಿ ಬೆಳ್ಳಿ ಪದಕ ವ್ಹೀಲ್ ಚೇರ್ ರೇಸ್ ನಲ್ಲಿ ಕಂಚಿನ ಪದಕ ಪಡೆದು ಬೆಳಗಾವಿಗೆ ಕೀರ್ತಿ ತಂದಿದ್ದಾಳೆ
ಇದರ ಜೊತೆಗೆ ಮೈಸೂರಿನಲ್ಲಿ ನಡೆದ ಫಿಜಿಕಲ್ ಟೆಸ್ಡ ನಲ್ಲಿ ಪಾಸ್ ಆಗಿ ಜೈಪೂರಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಫಿಜಿಕಲ್ ಅಥ್ಲೆಟಿಕ್ ನಲ್ಲಿ ಭಾಗ ವಹಿಸುವ ಅರ್ಹತೆ ಪಡೆದಿದ್ದಾಳೆ
ಅತ್ಯಂತ ಬಡ ಕುಟುಂಬದಿಂದ ಬಂದಿರುವ ರಿಜ್ವಾನಾ ಜೈಪೂರದಲ್ಲಿ ನಡೆಯುವ ಗೇಮ್ಸನಲ್ಲಿ ಭಾಗ ವಹಿಸಲು ತಮಗೆ ಧನ ಸಹಾಯ ಮಾಡಿ ಎಂದು ಸ್ಥಳೀಯ ಜನ ಪ್ರತಿನಿಧಿಗಳ ಹತ್ತಿರ ಅಂಗಲಾಚಿದರೂ ಬೆಳಗಾವಿಯ ಚಿನ್ನದ ಹುಡುಗಿಗೆ ಯಾರೊಬ್ಬರೂ ಧನ ಸಹಾಯ ಮಾಡಿಲ್ಲ
ವೀರಭದ್ರ ನಗರದ ನಿವಾಸಿ ಆಗಿರುವ ಚಿನ್ನದ ಹುಡಗಿ ರಿಜ್ವಾನಾ ಜಮಾದಾರ ಗೆ ಜೈಪೂರಕ್ಕೆ ಹೋಗಲು ಆರ್ಥಿಕ ಸಹಾಯ ಬೇಕಾಗಿದೆ ಬಡ ಕುಟುಂಬದ ಈ ಪ್ರತಿಭೆಗೆ ಆಸಕ್ತಿ ಇದ್ದವರು ಧನ ಸಹಾಯ ಮಾಡಬಹುದಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ