Breaking News

ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರ ಸೇವೆಗೆ ಸಮರ್ಪಣೆ

 

ಬೆಳಗಾವಿ-ನಗರದ ಟ್ರಾಫಿಕ್ ಸಿಗ್ನಲ್ ಗಳು ಸೇರಿದಂತೆ ನಗರದ ಆಯಕಟ್ಟಿನ ಸ್ಥಳಗಳು ಮತ್ತು ಜನದಟ್ಟನೆ ಪ್ರದೇಶಗಳಲ್ಲಿ ಹಾಕಲಾಗಿರುವ ಕ್ಯಾಮರಾಗಳನ್ನು ನಿರ್ವಹಣೆ ಮಾಡುವ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರವನ್ನು ಪೋಲೀಸ್ ಮಹಾನಿರ್ದೇಶಕ ರೂಪಕುಮಾರ್ ದತ್ತಾ ಅವರು ಸೇವೆಗೆ ಸಮರ್ಪಿಸಿದರು
ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಮಾಡಲಾಗಿರುವ ಈ ಟ್ರಾಫಿಕ್ ಮ್ಯಾನೇಜ್ ಮೆಂಟ್ ಕೇಂದ್ರವನ್ನು ಪೋಲೀಸ್ ಮಹಾ ನಿರ್ದೇಶಕರು ಉದ್ಘಾಟಿಸಿದರು ಕೇಂದ್ರದಲ್ಲಿ ಅಳವಡಿಸಲಾಗಿರುವ ಹೈಟೆಕ್ ಸ್ಕ್ರೀನ್ ಮೂಲಕ ನಗರದ ವಿವಿಧ ಸಿಗ್ನಲ್ ಗಳ ಚಲನವಲನ ವೀಕ್ಷಿಸಿದ ರೂಪ ಕುಮಾರ ದತ್ತಾ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಯಾವ ರೀತಿಯಲ್ಲಿ ಕೇಸು ದಾಖಲಿಸಬಹುದು ಈ ಕೇಂದ್ರದ ಮೂಲಕ ನಗರದಲ್ಲಿ ನಡೆಯುತ್ತಿರು ಚಟುವಟಿಕೆಗಳ ಮೇಲೆ ಯಾವ ರೀತಿ ನಿಗಾ ವಹಿಸಬಹುದು ಅನ್ನೋದರ ಬಗ್ಗೆ ನಗರ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ರೂಪಕುಮಾರ್ ದತ್ತಾ ಅವರಿಗೆ ಮಾಹಿತಿ ನೀಡಿದರು
ಮ್ಯಾನೇಜ್ ಮೆಂಟ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ರೂಪಕುಮಾರ್ ದತ್ತಾ ಬೆಳಗಾವಿಯಲ್ಲಿ ಸ್ಥಾಪಿಸಲಾಗಿರುವ ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರ ಬೆಂಗಳೂರು ಕೇಂದ್ರಕ್ಕಿಂತ ಹೈಟೆಕ್ ಆಗಿದೆ ಈ ಕೇಂದ್ರ ಟ್ರಾಫಿಕ್ ಕಂಟ್ರೋಲ್ ಮಾಡುವದರ ಜೊತೆಗೆ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವದರ ಜೊತೆಗೆ ಕಾನೂನು ಸುವ್ಯೆವಸ್ಥೆ ಕಾಪಾಡಲು ಈ ಕೇಂದ್ರ ಅನಕೂಲವಾಗಲಿದೆ ಎಂದು ದತ್ತಾ ತಿಳಿಸಿದರು
ಹಲವಾರು ಜಿಲ್ಲೆಗಳಲ್ಲಿ ಹಾಕಲಾಗಿರುವ ಕ್ಯಾಮರಾಗಳ ಸ್ಥಿತಿಗತಿಗಳ ಬಗ್ಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ
ಎಂದು ತಿಳಿಸಿದರು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *