
ಬೆಳಗಾವಿ ಮಹಾರಾಷ್ಟ್ರದ ಮುಖಂಡ ಸಂಭಾಜಿರಾವ್ ಬಿಡೆಗೆ ಮತ್ತೆ ಕರ್ನಾಟಕ ಪ್ರವೇಶ ನಿರ್ಬಂಧ.ಮಾಡಿ ಜಿಲ್ಲಾಧಿಕಾರಿ ಜಿಯಾವುಲ್ಲಾ ಆದೇಶ ಹೊರಡಿಸಿದ್ದಾರೆ
ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಬೆಳಗಾವಿ ಜಿಲ್ಲಾಧಿಕಾರಿಗಳು
ಇದೇ ತಿಂಗಳು 21ರ ಮಧ್ಯರಾತ್ರಿ 12 ಗಂಟೆಯಿಂದ 11 ದಿನಗಳ ಕಾಲ್ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿಷೇಧ.ಮಾಡಿದ್ದಾರೆ
ಜುಲೈ 31 ರ ಮಧ್ಯಾಹ್ನ 12 ಗಂಟೆಯ ವರೆಗೂ ಮಹಾ ಮುಖಂಡ ಸಂಭಾಜಿರಾವ್ ಗೆ ನಿರ್ಬಂಧ.ವಿಧಿಸಲಾಗಿದೆ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಆಗಮಿಸಲಿದ್ದ ಸಂಭಾಜಿರಾವ್ ಬಿಡೆ.ಶಿವ ಪ್ರತಿಷ್ಠಾನ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು
ಮಹಾರಾಷ್ಟ್ರದಲ್ಲಿ ಬೀಮಾಕೋರೆಗಾಂವ ಗಲಭೆಗೆ ಬಿಡೆ ಪ್ರಚೋದನಕಾರಿ ಭಾಷಣವೇ ಕಾರಣವಾಗಿತ್ತು.
ಸಂಭಾಜಿರಾವ್ ಗೆ ಆಹ್ವಾನಿಸಿದ್ದ ಸಂಕೇಶ್ವರದ ಶ್ರೀ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ಸಂಘಟನೆ.
ಈ ಕಾರ್ಯಕ್ರಮದಲ್ಲಿ ದಿ ಹಿಸ್ಟರಿ ಆಫ್ ರಾಯಘಡ ಸುವರ್ಣ ಸಿಂಹಾಸನ ವಿಷಯ ಕುರಿತು ಭಾಷಣ ಮಾಡಲಿದ್ದ ಸಂಭಾಜಿರಾವ್ ಬಿಡೆಗೆ ಈಗ ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರವೇಶ ನಿಷೇಧಿಸಿದ್ದಾರೆ
ಸಂಭಾಜಿರಾವ್ ಪ್ರಚೋದನಕಾರಿ ಭಾಷಣದಿಂದ ಸಮಾಜದ ಶಾಂತಿ ಕಡದಬಾರದು ಮತ್ತು ಯಾವುದೇ ಜನಾಂಗದ ಭಾವನೆಗೆ ಧಕ್ಕೆ ಆಗಬಾರದೆಂದು ಮುನ್ನಜಾಗೃತ ಕ್ರಮವಾಗಿ ಕರ್ನಾಟಕ ಪ್ರವೇಶ ನಿಷೇಧಿಸಲಾಗಿದೆ.ಎಂದು ಜಿಲ್ಲಾಧಿಕಾರಿಗಳ ಆದೇಶ ಪತ್ರದಲ್ಲಿ ತಿಳಿಸಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ