Breaking News

ಕೊಚ್ಚಿ ಹೋದ ರಸ್ತೆ…! ರೊಚಿಗೆದ್ದ ರೈತರು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ರೈತರಿಂದ ರಸ್ತೆ ತಡೆ

ಬೆಳಗಾವಿ- 53 ಲಕ್ಷ ರುಪಾಯಿ ಖರ್ಚುಮಾಡಿ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾದ ರಸ್ತೆಯು ಆರು ತಿಂಗಳಲ್ಲಿ ಕೊಚ್ಚಿ ಹೋಗಿದ್ದು ರಸ್ತೆ ದುರಸ್ತಿಗೆ ಆಗ್ರಹಿಸಿ ಸಾಂಬ್ರಾ ಗ್ರಾಮದ ರೈತರು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು
ಸಾಂಬ್ರಾ ವಿಮಾಣ ನಿಲ್ದಾಣದ ಬಳಿ ರೈತರಿಗೆ ಹೊಲಗದ್ದೆಗಳಿಗೆ ಹೋಗಲು ಅನಕೂಲವಾಗುವಂತೆ 53 ಲಕ್ಷ ರುಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಗಿತ್ತು ಆದರೆ ಈ ರಸ್ತೆ ಆರು ತಿಂಗಳಲ್ಲಿಯೇ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವದರಿಂದ ರೈತರು ಅಕ್ರೋಶ ವ್ಯೆಕ್ತಪಡಿಸಿ ಸಾಂಬ್ರಾ ಗ್ರಾಮದಲ್ಲಿ ರಸ್ತೆ ತಡೆ ನಡಿಸಿ ಪ್ರತಿಭಟಿಸಿದರು
ರಸ್ತೆ ನಿರ್ಮಾಣದ ಕಾಮಗಾರಿಯಲ್ಲಿ ಭಾರೀ ಅವ್ಯೆವಹಾರ ನಡೆದಿದ್ದು ಜಿಲ್ಲಾದಿಕಾರಿಗಳು ತನಿಖೆ ನಡೆಸಿ ಗುತ್ತಗೆದಾರನ ವಿರುದ್ಧ ಕ್ರಮಕೈಗೊಂಡು ರಸ್ತೆಯನ್ನು ಮರು ನಿರ್ಮಾಣ ಮಾಡಬೇಕೆಂದು ರೈತರು ಒತ್ತಾಯಿಸಿದರು.
ಸುಮಾರು ಎರಡು ಘಂಟೆಗಳ ಕಾಲ ರೈತರು ರಸ್ತೆ ತಡೆ ನಡೆಸಿದ್ದರಿಂದ ಬೆಳಗಾವಿ ಬಾಗಲಕೋಟೆ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.ಈ ಸಂಧರ್ಬದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಾಗೇಶ ದೇಸಾಯಿ ಕಳಪೆ ಕಾಮಗಾರಿ ನಡೆದಿರುವದರಿಂದ 53 ಲಕ್ಷರುಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಆರು ತಿಂಗಳಲ್ಲಿಯೇ ಕೊಚ್ಚಿಹೋಗಿದೆ.ಇದರಿಂದ ಸಾಂಬ್ರಾ ಗ್ರಾಮದ ರೈತರಿಗೆ ಹೊಲಗದ್ದೆಗಲಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದೆ.ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಂಡು ರಸ್ತೆ ಮರುನಿರ್ಮಾಣ ಮಾಡದಿದ್ದರೆ ರೈತರು ಊಗ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವಿಕರಿಸುವವರೆಗೂ ರಸ್ತೆ ತಡೆ ನಿಲ್ಲಿಸುವದಿಲ್ಲ ಎಂದು ರೈತರು ಪಟ್ಟು ಹಿಡಿದಾಗ ಅಪರ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸಿಕರಿಸಿ ರಸ್ತೆ ದುರಸ್ಥಿ ಮಾಡುವ ಭರವಸೆ ನೀಡಿದರು.
ಶಿವಾಜಿ ಜೋಯಿ,ಜ್ಯೋತಿ ಜೋಯಿ,ಮಾರುತಿ ಜತ್ರಾಟಿ,ಗಜಾನನ ಜೋಗಾನಿ,ಕೇದಾರಿ ಜೋಯಿ,ಪ್ರಕಾಶ ಜತ್ರಾಟಿ,ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡಾ ಪಾಟೀಲ,ಜಿಪಂ ಸದಸ್ಯ ಕೃಷ್ಣಾ ಅನಗೋಳಕರ,ಲಕ್ಷ್ಮಣ ತಿಪನ್ನಾಚೆ, ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಹೆಬ್ಬಾಳಕರ ಬೆಂಬಲ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆ ಅಲ್ಪಾವಧಿಯಲ್ಲಿಯೇ ಹದಗೆಟ್ಟು ಹೋಗಿರುವದರಿಂದ ಸಾಂಬ್ರಾ ಹಾಗು ಸುತ್ತ ಮುತ್ತಲಿನ ಗ್ರಾಮಗಳ ರೈತರಿಗೆ ತುಂಬಾ ತೊಂದರೆ ಆಗುತ್ತಿದೆ ಈ ಕುರಿತು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೆಕೆಂದು ಹೆಬ್ಬಾಳಕರ ಒತ್ತಾಯಿಸಿದರು

Check Also

ನೌಕರಿಯಿಂದ ವಜಾ, ಯುವಕನ ಆತ್ಮಹತ್ಯೆ

ಬೆಳಗಾವಿ-ಕೆಲಸದಿಂದ ವಜಾ ಮಾಡಿದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲ್ಲೂಕಿನಲ್ಲಿ ನಡೆದಿದೆ. ರವಿ ವೀರನಗೌಡ ಹಟ್ಟಿಹೊಳಿ (24) …

Leave a Reply

Your email address will not be published. Required fields are marked *