ಬೆಳಗಾವಿ- ಬೆಳಗಾವಿ ಸಾಂಬ್ರಾ ವಿಮಾನ ನಿಲ್ಧಾಣದ ರನ್ ವೇ ಅಗಲೀಕರಣ ಗೊಂಡನಂತರ ಮೊಟ್ಟ ಮೊದಲ ಬಾರಿಗೆ 140 ಪ್ರಯಾಣಿಕರ ಸಾಮರ್ಥ್ಯ ದ ಏರ್ ಬಸ್ ಇಂದು ಬೆಳಿಗ್ಗೆ ಸಾಂಬ್ರಾ ವಿಮಾನ ನಿಲ್ಧಾನದಲ್ಲಿ ಲ್ಯಾಂಡಿಂಗ್ ಆಯ್ತು
ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಏರ್ ಬಸ್ ನ್ನು ಸಂಸದ ಪ್ರಕಾಶ ಹುಕ್ಕೇರಿ ಅದ್ಧೂರಿಯಿಂದ ಬರಮಾಡಿಕೊಂಡರು 140 ಸೀಟು ಸಾಮರ್ಥ್ಯ ದ ಏರ್ ಬಸ್ ನಲ್ಲಿ 110 ಜನ ಪ್ರಯಾಣಿಕರಿದ್ದರು
ವಾರದ ಏಳು ದಿನವೂ ಬೆಳಗಾವಿಯಿಂದ ಬೆಂಗಳೂರಿಗೆ ,ಬೆಂಗಳೂರಿನಿಂದ ಬೆಳಗಾವಿಗೆ ಈ ಏರ್ ಬಸ್ ಹಾರಾಡಲಿದೆ ಬೆಳಗಾವಿಯ ಪ್ರಯಾಣಿಕರು ಹುಬ್ಬಳ್ಳಿಗೆ ಹೋಗಿ ವಿಮಾನ ಹತ್ತುವದು ತಪ್ಪಿದಂತಾಗಿದೆ
ಇಂದು ಬೆಳಿಗ್ಗೆ ಎಂಟು ಘಂಟೆಗೆ ಮೊದಲ ಬಾರಿಗೆ ಏರ್ ಬಸ್ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದಂತೆಯೇ ಸಂಸದ ಪ್ರಕಾಶ ಹುಕ್ಕೇರಿ ಸೇರಿದಂತೆ ಏರ್ ಇಂಡಿಯಾ ಅಧಿಕಾರಿಗಳು ಕೇಕ್ ಕತ್ತರಿಸಿ ಸಂಬ್ರಮಿಸಿದರು
ನಗರ ಪೋಲೀಸ್ ಆಯುಕ್ತ ಡಿಸಿ ರಾಜಪ್ಪ,ಡಿಸಿಪಿ ಸೀಮಾ ಲಾಟ್ಕರ್ ಸೇರಿಂತೆ ಚೇಂಬರ್ ಆಫ್ ಕಾಮರ್ಸ ಅಧ್ಯಕ್ಷ ಉಮೇಶ ಶರ್ಮಾ ವಿಕಾಸ ಕಲಘಟಗಿ ಬಸವರಾಜ ಜವಳಿ ಚೈತನ್ಯ ಕುಲಕರ್ಣಿ ಸೇರಿದಂತೆ ಹಲವಾರು ಜನ ಗಣ್ಯರು ಹಾಜರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ