ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿಕೊಂಡಿರುವ ಸಂಧರ್ಭದಲ್ಲಿ ಬೆಳಗಾವಿಯ ಸಾಂಬ್ರಾ ಏರ್ ಪೋರ್ಟ್ ಹೈಟೆಕ್ ಆಗಿದ್ದು ಬೆಳಗಾವಿ ಜಿಲ್ಲೆಯ ಜನತೆಯ ಬಹು ದಿನಗಳ ಕನಸು ನನಸಾಗಿದೆ ಎಂದು ಸಂಸದ ಸುರೇಶ ಅಂಗಡಿ ಹರ್ಷ ವ್ಯೆಕ್ತಪಡಿಸಿದ್ದಾರೆ
ಸಾಂಬ್ರಾ ಏರ್ ಪೋರ್ಟ್ ನಲ್ಲಿ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಮೇಲ್ದರ್ಜೆಗೇರಿರುವದರಿಂದ ಈ ಭಾಗದ ಜನರಿಗೆ ಮತ್ತಷ್ಟು ಅನಕೂಲ ವಾಗಲಿದೆ ಇಲ್ಲಿಯ ವಹಿವಾಟು ವೃದ್ಧಿಯಾಗುವ ಜೊತೆಗೆ ಇಲ್ಲಿಯ ಕೈಗಾರಿಕಾ ಬೆಳವಣಿಗೆಗೆ ಹೊಸ ಏರ್ ಪೋರ್ಟ್ ಪೂರಕವಾಗಲಿದೆ ಎಂದು ಸುರೇಶ ಅಂಗಡಿ ಹೇಳಿದರು
ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ಅಲ್ಲಿಗೆ ಧಾವಿಸಿದ ರೈತರು ಏರ್ ಪೋರ್ಟ್ ನಿರ್ಮಾಣಕ್ಕಾಗಿ ನಾವು ಜಮೀನು ಕೊಟ್ಟಿದ್ದೇವೆ ಇನ್ನುವರೆಗೆ ನಮಗೆ ಪರಿಹಾರ ಸಿಕ್ಕಿಲ್ಲ ಮೊದಲು ನಮಗೆ ಪರಿಹಾರ ಕೊಡಿ ಆಮೇಲೆ ವಿಮಾನ ಹಾರಿಸಿ ಎಂದು ರೈತರು ಸಂಸದ ಸುರೇಶ ಅಂಗಡಿ ಮತ್ತು ಪ್ರಭಾಕರ ಕೋರೆ ಎದುರು ತಮ್ಮ ಅಳಲು ತೋಡಿಕೊಂಡರು
ತಕ್ಷಣ ಬೆಳಗಾವಿ ಉಪ ವಿಭಾಗಾಧಿಕಾರಿಗಳನ್ನು ಸಾಂಬ್ರಾಗೆ ಕರೆಯಿಸಿಕೊಂಡ ಸುರೇಶ ಅಂಗಡಿ ರೈತರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು
ರೈತರ ಸಮಸ್ಯೆ ಕುರಿತು ಕೂಡಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸಿ ರೈತರಿಗೆ ಪರಿಹಾರ ಕೊಡುವಂತೆ ಮನವಿ ಮಾಡಿಕೊಳ್ಳಲಾಗುವದು ಎಂದು ಅಂಗಡಿ ಹೇಳಿದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ