ಬೆಳಗಾವಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿ ಕಳೆದ ಎರಡು ತಿಂಗಳಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಇಟ್ಟಂಥ ಗ್ರಾಹಕರು ತಮ್ಮ ಹಣ ಮರಳಿಕೊಡಿಸುವಂತೆ ಆಗ್ರಹಿಸಿ ಡಿಸಿ ಕಚೇರಿಗೆ ಬುಧವಾರ ಮಧ್ಯಾಹ್ನ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ರಾಯಣ್ಣ ಸೊಸೈಟಿ ಆಡಳಿತ ಮಂಡಳಿಯು ಕಳೆದ ಎರಡು ತಿಂಗಳುಗಳಿಂದ ಠೇವಣಿ ಹಣವನ್ನು ಮರಳಿಸದೇ ನಮ್ಮನ್ನ ಸತಾಯಿಸುತ್ತಿದೆ. ಡಿಸಿ ಮಧ್ಯಸ್ಥಿಕೆ ವಹಿಸಿ ನಮ್ಮ ಹಣ ಮರಳಿಸಿಕೊಡಬೇಕು. ಅತಂತ್ರ ಸ್ಥಿತಿಗೆ ಸಿಲುಕಿರುವ ನಮ್ಮನ್ನು ಕಷ್ಟದಿಂದ ಪಾರುಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಬ್ಯಾಂಕ್.ಗಳಿಗೆ ಹೋಲಿಸಿದರೆ, ಸೊಸೈಟಿಯಲ್ಲಿ ಹೆಚ್ಚು ಬಡ್ಡಿಯ ಮೊತ್ತ ಬರಬಹುದೆಂಬ ಆಸೆ ಇಂದ 300 ಕೋಟಿ ರೂ.ಗಿಂತ ಹೆಚ್ಚಿನ ಹಣ ಹೂಡಿಕೆ ಮಾಡಿದ್ದೆವು. ಆದರೆ, ನಮಗೆ ಮೋಸವಾಗಿದೆ. ಬದುಕೇ ದುಸ್ಥರ ಸ್ಥಿತಿ ಬಂದುತಲುಪಿದೆ. ಡಿಸಿ ಸಾಹೇಬ್ರು, ನಮ್ಮ ಸಂಕಷ್ಟಕ್ಕೆ ಮಿಡಿತಾರೆಂದು ಇಲ್ಲಿಗೆ ಬಂದಿದ್ದೇವೆ ಎಂದರು.
ಮಕ್ಕಳ ಹೆಸರಲ್ಲಿ ಹಣ ಠೇವಣಿ ಇಟ್ಟ ಮಹಿಳಯರು ಇಲ್ಲಿಗೆ ಬಂದಿದ್ದು ವಿಶೇಷವಾಗಿ ಕಂಡು ಬಂತು.