Breaking News

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!!

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!!

ಬೆಳಗಾವಿ- ಎಂಎಲ್ಸಿ ಚುನಾವಣೆಯ ಪ್ರಚಾರಕ್ಕೆ ಬೆಳಗಾವಿಗೆ ಬರುವ ಪ್ರತಿಯೊಬ್ಬ ನಾಯಕರು ಚಡ್ಡಿ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇವತ್ತು ಮಾದ್ಯಮ ಪ್ರತಿನಿಧಿಗಳು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲರಿಗೆ ,ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನ ಶುರು ಮಾಡಲಿದೆ ಎಂದು ಪ್ರಶ್ನಿಸಿದಾಗ ಅವರಿಗೆ ಚಡ್ಡಿ ಬೇಕಾದ್ರೆ ನಂದೇ ಕೊಡ್ತೀನಿ ಎಂದು ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟಿದ್ದು,ಆರ್ ಎಸ್ ಎಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.

ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕಾಂಗ್ರೆಸ್ ವತಿಯಿಂದ ಚಡ್ಡಿ ಸುಡುವ ಅಭಿಯಾನ ವಿಚಾರ ಸಂಜಯ ಪಾಟೀಲ ಎದುರು ಪ್ರಸ್ತಾಪವಾದಾಗ,ನಂದೂ ಚಡ್ಡಿ ಕೊಡ್ತೀನಿ ಹೇಳ್ರಿ ಸುಡಾಕ್, ಏನ್ ಮಾಡೋದೈತಿ?*ಅವರಿಗೆ ಸುಡೋದೇ ಅಭ್ಯಾಸ ಇದ್ರೆ ಏನೂ ಮಾಡಕ್ಕಾಗಲ್ಲ, ಅವರಿಗೆ ಚಡ್ಡಿ ಸುಡೋ ಆತುರ ಇದ್ರೆ ಏನು ಮಾಡಕ್ಕಾಗುತ್ತೆ,ಅವರಿಗೆ ಕಡಿಮೆ ಬಿದ್ರೆ ನಂದೂ ಚಡ್ಡಿ ಕೊಡ್ತೀನಿ, ಎಂದು ಸಂಜಯ ಪಾಟೀಲ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಡ್ಡಿ ಮೇಲೆ ಕಾಂಗ್ರೆಸ್ ನವರಿಗೆ ಏಕೆ ಪ್ರೀತಿ ಬಂದಿದೆ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಪ್ರೀತಿ ಅಲ್ಲ, ಅವರು ಫ್ರಸ್ಟರೇಟ್ ಆಗಿದಾರೆ,ಏಕಂದ್ರೆ RSS ನೇತೃತ್ವದಲ್ಲಿ ದೇಶದ ಪ್ರತಿಯೊಂದು ರಾಜ್ಯದಲ್ಲಿ ಸ್ಥಾನಮಾನ ಗಳಿಸಿದ್ದೇವೆ.
ಸಿಎಂ ನಮ್ಮವರೇ ಇದ್ದಾರೆ, ಪ್ರಧಾನಿ ನಮ್ಮವರೇ ಇದ್ದಾರೆ, ರಾಷ್ಟ್ರಪತಿ ನಮ್ಮವರೇ ಇದ್ದಾರೆ.ಯಾವ ಕಾಂಗ್ರೆಸ್ ಒಂದ್ ಕಾಲದಲ್ಲಿ ದೇಶ ಆಳಿತ್ತು ಇಂದು ವಿರೋಧ ಪಕ್ಷ ಸ್ಥಾನವೂ ಸಿಗ್ತಿಲ್ಲಹೀಗಾಗಿ ಫ್ರಸ್ಟ್‌ರೇಷನ್‌ನಲ್ಲಿ ಅವರು ಆ ತರಹ ಮಾಡ್ತಿದ್ದಾರೆ,ಎಂದು ಸಂಜಯ ಪಾಟೀಲ ಟೀಕೆ ಮಾಡಿದ್ರು.

ಬಿಜೆಪಿ ಅಧಿಕಾರಕ್ಕೆ ಬರಲು RSSದ್ದು ದೊಡ್ಡ ಪಾತ್ರ ಅಂತಾ ನಾವು ಒಪ್ಪಿಕೊಳ್ಳುತ್ತೇವೆ.RSS ಆಶೀರ್ವಾದ ಮಾರ್ಗದರ್ಶನದಿಂದ ಬಿಜೆಪಿ ಅಧಿಕಾರದಲ್ಲಿ ಇದೆ. ಕಾಂಗ್ರೆಸ್‌‌ಗೆ ಯಾವಾಗ ಚಡ್ಡಿ ಕಳಿಸ್ತೀರಾ ಅಂತಾ ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಸಂಜಯ,ಅವರಿಗೆ ನನ್ನ ಫೋನ್ ನಂಬರ್ ಕೊಡಿ, ಅವರಿಗೆ ಯಾವಾಗ ಬೇಕೋ ನಾನು ಕಳಿಸುವ ವ್ಯವಸ್ಥೆ ಮಾಡ್ತೀನಿ,ಕೋರಿಯರ್ ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪರ್ಸನಲ್ ಕೊಟ್ಟಿ ಕಳಿಸುವೆ ಎಂದರು.

*ನಮ್ಮವರು ಇದಾರೆ ಪಾಪ, ಕೋರಿಯರ್ ಏಕೆ ಮಾಡೋದು?*ನಮ್ಮವರ ಇದಾರೆ ಪಾಪ, ಅವರೇನು ಪಾಕಿಸ್ತಾನದವರಿದಾರಾ?ನಮ್ಮ ದೇಶದವರಿದಾರೆ, ಅವರಿಗೇನಾದರೂ ಅವಶ್ಯಕತೆ ಬಿದ್ರೆ ಫೋನ್ ಮಾಡಲಿ ಕಳಿಸಿಕೊಡುವೆ*ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನಕ್ಕೆ ಸಂಜಯ್ ಪಾಟೀಲ್ ವ್ಯಂಗ್ಯವಾಡಿದರು.

ಕಾಂಗ್ರೆಸ್‌ನವರಿಗೆ ಆರ್‌ಎಸ್ಎಸ್ ಸಂಘಟನೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.RSS ದೇಶಭಕ್ತ ಸಮಾಜಸೇವಾ ಸಂಘಟನೆ.ನಮಗೆ RSS ಮಾರ್ಗದರ್ಶನ ಮಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ.ಕಾಂಗ್ರೆಸ್ ನವರು ಸೂರ್ಯನ ಮೇಲೆ ಉಗುಳಲು ಯತ್ನಿಸುತ್ತಿದ್ದು ಅವರ ಮುಖದ ಮೇಲೆ ಬೀಳೋದು ಗ್ಯಾರಂಟಿ,ಅದಕ್ಕಾಗಿ ಅದನ್ನೇನೂ ತಲೆ ಕೆಡಿಸಿಕೊಳ್ಳಲ್ಲ ಎಂದು
ಬೆಳಗಾವಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳಿದ್ರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *