Breaking News

ಪ್ಲೇ ಗ್ರೌಂಡ್ ನಲ್ಲಿ ಪಾಲಿಟಿಕ್ಸ್ ಆಟ…ಕ್ರೀಡೆಗೆ ಕಾಟ……!!

ಬೆಳಗಾವಿ- ಬೆಳಗಾವಿಯ ಹೃದಯಭಾಗದಲ್ಲಿರುವ ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗೆ ಮಾತ್ರ ಬಳಕೆ ಆಗಬೇಕು ಎಂದು ನಿಯಮ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆ ತಾನು ಮಾಡಿದ ನಿಯಮವನ್ನು ತಾನೇ ಗಾಳಿಗೆ ತೂರುತ್ತಿದೆ.

ಬೆಳಗಾವಿಯ ಸರ್ದಾರ್ ಮೈದಾನ,ಶಿಕ್ಷಣ ಇಲಾಖೆಯ ಆಸ್ತಿ,ಈ ಮೈದಾನವವನ್ನು ಪಾಲಿಕೆಯ ವಿಶೇಷ ಅನುದಾನದಲ್ಲಿ ಒಂದು ಕೋಟಿಗೂ ಹೆಚ್ಚು ಖರ್ಚು ಮಾಡಿ,ಅಭಿವೃದ್ಧಿ ಪಡಿಸಿದೆ. ಮೈದಾನದಲ್ಲಿ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಿದೆ,ಈ ಸಂಕೀರ್ಣ ಈಗ ಕ್ರೀಡಾ ಚಟುವಟಿಕೆಗೆ ಬಳಕೆಯಾಗದೇ,ರಾಜಕೀಯ ಚಟುವಟಿಕೆಗಳ ಪಾಲಾಗಲಿದೆ.

ಸರ್ದಾರ್ ಮೈದಾನದ ಕ್ರೀಡಾ ಸಂಕೀರ್ಣದಲ್ಲಿ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲರ ಕಚೇರಿ ಸಿದ್ಧವಾಗುತ್ತಿದೆ.ಈ ಕಚೇರಿಯನ್ನು ಮಹಾನಗರ ಪಾಲಿಕೆಯೇ ಹಣ ಖರ್ಚು ಮಾಡಿ,ಕಚೇರಿಯನ್ನು ಸಿದ್ಧಡಿಸುತ್ತಿದೆ.

ಸರ್ದಾರ್ ಮೈದಾನ ಕ್ರೀಡಾ ಚಟುವಟಿಕೆಗೆ ಮಾತ್ರ ಸೀಮೀತವಾಗಬೇಕು,ಎಂದು 2010 ರಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ನಿರ್ಧರಿಸಿತ್ತು,ಆಗಿನ ಪಾಲಿಕೆ ಆಡಳಿತಾಧಿಕಾರಿಯೂ ಆಗಿದ್ದ ಆಗಿನ ಜಿಲ್ಲಾಧಿಕಾರಿ ,ಜೆ ರವಿಶಂಕರ ಅವರು ಸರ್ದಾರ್ ಮೈದಾನ ಕೇವಲ ಕ್ರೀಡಾ ಚಟುವಟಿಕೆಗೆ ಮಾತ್ರ ಸೀಮೀತ ಎಂದು ಆದೇಶ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಆದರೆ ಮಹಾನಗರ ಪಾಲಿಕೆಗೆ ಶಂಕರಗೌಡ ಪಾಟೀಲರ ಕಚೇರಿ ಮಾಡಲು ಬೇರೆ ಸ್ಥಳ ಸಿಗಲಿಲ್ಲವೇ,ಎನ್ನುವದು ಕ್ರೀಡಾಭಿಮಾನಿಗಳ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲರಿಗೆ,ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮಾಡಿ ಕೊಡುವದಾದರೆ,ಪಾಲಿಕೆ ಅಧಿಕಾರಿಗಳು ಈ ಮೈದಾನದಲ್ಲಿ ಕ್ರೀಡಾ ಚಟುವಟಿಕೆ ಬಂದ್ ಮಾಡಿ ಇದನ್ನು ರಾಜಕೀಯ ನಾಯಕರಿಗೆ ಸಮರ್ಪಿಸಲಿ

ಇವತ್ತು ಶಂಕರಗೌಡ ಪಾಟೀಲರಿಗೆ ಸರ್ದಾರ್ ಮೈದಾನದಲ್ಲಿ ಕಚೇರಿ ಮಾಡಿಕೊಟ್ಟರೆ ,ನಾಳೆ ಇತರ ರಾಜಕೀಯ ನಾಯಕರು ಸರ್ದಾರ್ ಮೈದಾನದಲ್ಲಿ ಠಾಖಾಣಿ ಹೂಡುತ್ತಾರೆ,ಸರ್ದಾರ್ ಎಂಬ ಪ್ಲೇ ಗ್ರಾಂಡ್ ನಲ್ಲಿ ಪಾಲಿಟಿಕ್ಸ್ ಆಟ ನಡೆಯೋದರಲ್ಲಿ ಸಂಶಯವೇ ಇಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *