ಬೆಳಗಾವಿ: ಮತ್ತೆ ಎಂಇಎಸ್ ಚುನಾಯಿತ ಪ್ರತಿನಿಧಿಗಳಿಂದ ಉದ್ಧಟತನ. ಪ್ರದರ್ಶನ ಆಗಿದೆ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿಪಂ ಸದಸ್ಯೆ ಸರಸ್ವತಿ ಪಾಟೀಲ ಇಬ್ಬರೂ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿ ರೋಷನ್ ಬೇಗ್ ಅವರು ಯಾವ ಕ್ರಮ ಕೈಗೊಳ್ಳುತ್ತಾರೆಯೋ ಕೈಗೊಳ್ಳಲಿ ಎಂದು ಬಹಿರಂಗ ಸವಾಲು ಎಸೆದಿದ್ದಾರೆ
ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಜಿಪಂ ಸದಸ್ಯೆ ಸರಸ್ವತಿಯಿಂದ ನಾಡವಿರೋಧಿ ಹೇಳಿಕೆ ನೀಡಿದ್ದು ರಾಜ್ಯ ಸರ್ಕಾರ ಸದಸ್ಯತ್ವ ರದ್ದು ಮಾಡಿದ್ರು ನಾವು ಜೈ ಮಹಾರಾಷ್ಟ್ರ ಹೇಳುತ್ತೇವೆ ಎಂದ ನಾಡದ್ರೋಹಿಗಳು. ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ
ನಾವು ಮಹಾರಾಷ್ಟ್ರದವರು ನಮ್ಮ ರಕ್ತ ಹರಿದ್ರು ಚಿಂತೆಯಿಲ್ಲ ಜೈ ಮಹಾರಾಷ್ಟ್ರ ಹೇಳುತ್ತೆವೆ ಎಂದ ಎಂಇಎಸ್ ಪುಂಡರು. ನಾಡದ್ರೋಹಿಗಳು ಜೈ ಮಹಾರಾಷ್ಟ್ರ ಎಂದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್. ಆಗಿದೆ ಈ ವಿಡಿಯೋವನ್ನು ತಾವು ಬೆಳಗಾವಿ ಸುದ್ಧಿ ಫೇಸ್ ಬುಕ್ ಪೇಜ್ ನಲ್ಲಿ ನೋಡಬಹುದಾಗಿದೆ
ನಿನ್ನೆ ಸಚಿವ ರೋಷನ ಬೇಗ್ ಹೇಳಿಕೆಗೆ ಎಂಇಎಸ್ ಪುಂಡಾಟಿಕೆ ಕುರಿತು ಪಾಲಿಕೆಯಲ್ಲಿ ನಾಡವಿರೋಧಿ ಚಟುವಟಿಕೆ ನಡೆಸಿದ್ರೆ ಸದಸ್ಯತ್ವ ರದ್ದು ಮಾಡುವುದಾಗಿ ಸಚಿವ ಬೇಗ ಹೇಳಿದ್ರು. ಇದಕ್ಕಾಗಿ ರಾಜ್ಯ ಸರ್ಕಾರ ಕಾನೂನು ಜಾರಿಗೊಳಿಸುತ್ತಿದೆ ಎಂದು ಹೇಳಿದ್ರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಮೇಯರ್ ಸರೀತಾ ಪಾಟೀಲ ಮತ್ತು ಸರಸ್ವತಿ ಪಾಟೀಲ ಇಬ್ಬರು ನಾವು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುತ್ತೇವೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ
ಸರ್ಕಾರ ಎಂಈಎಸ್ ಪುಂಡಾಟಿಕೆಗೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಇದು ನಪುಂಸಕ ಸರ್ಕಾರ ಎನ್ನುವದು ಸಾಭೀತಾಗುತ್ತದೆ