ಬೆಳಗಾವಿ- ಭುತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸಂಪೂರ್ಣವಾಗಿ ಹಿರೇಬಾಗೇವಾಡಿ ಗ್ರಾಮಕ್ಕೆ ಶಿಪ್ಟ್ ಆಗುವದಿಲ್ಲ ಮೂಲ ವಿಶ್ವ ವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆ ಆಗುವದಿಲ್ಲ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಭೂತರಾಮನಹಟ್ಟಿ ಯಲ್ಲಿರುವ ವಿಶ್ವ ವಿದ್ಯಾಲಯ ಅರಣ್ಯ ಇಲಾಖೆಯ ಜಾಗೆಯಲ್ಲಿರುವದರಿಂದ ವಿಶ್ವ ವಿದ್ಯಾಲಯದ ಕಟ್ಟಡ ವಿಸ್ತರಣೆ,ಹಾಗು ಇನ್ನಿತರ ಹೆಚ್ವುವರಿ ಕಾರ್ಯಚಟುವಟೆಕೆಗಳನ್ನು ನಡೆಸಲು ಸಾಧ್ಯವಾಗಿರಲ್ಲಿಲ್ಲ,ಜಾಗೆಯ ಸಮಸ್ಯೆ ಇರುವದರಿಂದ ವಿಶ್ವ ವಿದ್ಯಾಲಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ಹಿರೇಬಾಗೇವಾಡಿ ಯಲ್ಲಿ ಜಾಗೆ ನೀಡಲಾಗಿದೆ,ಆದ್ರೆ ಭೂತರಾಮನಹಟ್ಟಿಯ ವಿಶ್ವ ವಿದ್ಯಾಲಯದಲ್ಲಿ ಈ ಮೊದಲು ಯಾವ ರೀತಿಯ ಕಾರ್ಯ ಚಟುವಟೆಕೆಗಳು ನಡೆಯುತ್ತ ಬಂದಿದೆಯೋ ಅದು ಮುಂದುವರೆಯುತ್ತದೆ,ಹಿರೇಬಾಗೇವಾಡಿಗೆ ವಿಶ್ವ ವಿದ್ಯಾಲಯ ಸಂಪೂರ್ಣವಾಗಿ ಶಿಪ್ಟ್ ಆಗೋದಿಲ್ಲ,ಈ ಕುರಿತು ಯಾವುದೇ ರೀತಿಯ ಆತಂಕ ಬೇಡ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ,ಸರ್ಕಾರ ಸಾಕಷ್ಟು ಅನುದಾನ ಕೊಟ್ಟಿದೆ,ಜಾಗೆಯ ಸಮಸ್ಯೆ ಇರುವದರಿಂದ ಅದನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ,ಈ ಕುರಿತು ಸುಧೀರ್ಘ ಸಮಾಲೋಚನೆ ಮಾಡಿ ಸರ್ಕಾರದ ಅನುದಾನ ಲ್ಯಾಪ್ಸ್ ಆಗಬಾರದು ಎನ್ನುವ ಕಾರಣಕ್ಕೆ ಹಿರೇಬಾಗಿವಾಡಿಯಲ್ಲಿ ಹೆಚ್ವುವರಿ ಕಟ್ಟಡ ನಿರ್ಮಿಸಲು ಸಹಕಾರ ನೀಡಿದ್ದೇವೆ.ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.