ಬೆಂಗಳೂರು- ರಾಜ್ಯದಲ್ಲಿ ಮಿಂಚಿನ ರಾಜಕೀಯ ನಡೆದಿದೆ,ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದು ಬೆಳಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನಿಡಿದ ವಿಜಯೇಂದ್ರ ಸುಮಾರು ಒಂದು ಘಂಟೆಗೂ ಹೆಚ್ವು ಕಾಲ ಚರ್ಚೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾದ ಬೆನ್ನಲ್ಲಿಯೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸತೀಶ್ ಅವರನ್ನು ಭೇಟಿ ಮಾಡಿರುವ ವಿಚಾರ ಚರ್ಚೆಗೆ ಕಾರಣವಾಗಿದ್ದು ರಾಜ್ಯರಾಜಕರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಸಿಎಂ ಸಿದ್ರಾಮಯ್ಯ ರಾಜೀನಾಮೆ ಕೊಡ್ತಾರೆ, ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗ್ತಾರೆ,ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಸೋಶಿಯಲ್ ಮೀಡಿಯಾ ಇಂತಹ ಚರ್ಚೆಗಳಿಗೆ ವೇದಿಕೆಯಾಗಿದೆ. ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿಯಾಗಿದ್ದು ಇಂದು ವಿಜಯೇಂದ್ರ ಸತೀಶ್ ಅವರನ್ನು ಭೇಟಿಯಾಗಿದ್ದು ಇವೆಲ್ಲ ಬೆಳವಣಿಗೆಗಳು ಸತೀಶ್ ಸಿಎಂ ಆಗ್ತಾರೆ ಎನ್ನುವ ಚರ್ಚೆಗಳಿಗೆ ರೆಕ್ಕೆ,ಪುಕ್ಕೆ ಕಟ್ಟಿದಂತಾಗಿದೆ.
ರಾಜ್ಯರಾಜಕಾರಣದಲ್ಲಿ ಮಿಂಚಿನ ಬೆಳವಣಿಗೆಗಳು ನಡೆಯುತ್ತಿರುವದು ಸತ್ಯ ಈ ಸತ್ಯ ಸತೀಶ್ ಅವರನ್ನು ಸಿಎಂ ಮಾಡುವ ಹಂತಕ್ಕೆ ತಲುಪಿದೆ. ಇಂದು ವಿಜಯೇಂದ್ರ ಅವರೇ ಸತೀಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ಮಾಡಿದ ವಿಚಾರ ಬದಲಾವಣೆ ಎಂಬ ಸಿನಿಮಾದ ಟ್ರೇಲರ್ ಇದ್ದಂಗೆ ಇದೆ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ