ಬೆಳಗಾವಿ- ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅವರ ಬಬಲಿಗ ಜಿಲ್ಲಾ ಪಂಚಾಯ್ತಿ ಸದಸ್ಯರು ತಾಪಂ ಸದಸ್ಯರು ಎಪಿಎಂಸಿ ಸದಸ್ಯರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ್ ಕಟಾಂಬ್ಳೆ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಬೆಂಬಲಿಗರು ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತೇವೆ ಎಂದು ವಿವಿಧ ಸಂಸ್ಥೆಗಳ ಸದಸ್ಯರು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರ
ರಾಜ್ಯದಲ್ಲಿ ನಡೆದ ಸಂಪುಟ ರಚನೆ ವೇಳೆ ಪ್ರಭಾವಿ ರಾಜ್ಯ ಮುಖಂಡ ಸತೀಶ ಜಾರಕಿಹೊಳಿ ಅವರನ್ನು ಕೊನೆ ಕ್ಷಣದಲ್ಲಿ ವಂಚಿಸಲಾಗಿದೆ ಎಂದು ಜಿಪಂ. ಉಪಾಧ್ಯಕ್ಷ ಅರುಣ ಕಟಾಂಬಳೆ ಆರೋಪಿಸಿದರು
ರಾಜ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ಶಾಸಕ ಸ್ಥಾನ ಆಯ್ಕೆಯಾಗಲು ಕಾರಣರಾದ ಸತೀಶ ಜಾರಕಿಹೊಳಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸದೇ ಮೋಸ ಮಾಡಲಾಗಿದೆ. ಈ ಅವಮಾನಕ್ಕೆ ನಾವು ತೀವ್ರ ಖಂಡಿಸುತ್ತೇವೆ ಎಂದರು
.15 ಜನ ಜಿಪಂ ಸದಸ್ಯರು, 28 ಜನ ತಾಪಂ. ಸದಸ್ಯರು, ಎಪಿಎಂಸಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ಇಂದು ಕೊಡುತ್ತಿದ್ದೇವೆ ಎಂದು ಎಚ್ಚರಿಸಿದರು.
ಮಾತಿಗೆ ಮರ್ಯಾದೆ ಕೊಡದ ಕಾಂಗ್ರೆಸ್ ಹೈಕಮಾಂಡ ನೀತಿಗೆ ಬೆಳಗಾವಿಯಲ್ಲಿ ನಮ್ಮ ವಿರೋಧ ಇದೆ ಎಂದರು.
ಪಕ್ಷದ ಅಧ್ಯಕ್ಷರ ಜತೆಗೆ ಆಯಾ ಅಥಾರಿಟಿಗಳಿಗೆ ರಾಜೀನಾಮೆ ಸಲ್ಲಿಸುತ್ತೇವೆ ಎಂದರು.
ಜಿಪಂ. ಉಪಾಧ್ಯಕ್ಷ ಅರುಣ ಅಣ್ಣು ಕಟಾಂಬಳೆ ಪ್ರಾದೇಶಿಕ ಆಯುಕ್ತರಿಗೆ ಇಂದು ರಾಜೀನಾಮೆ ಸಲ್ಲಿಸುತ್ತಾರೆ ಎಂದು ಘೋಷಿಸಿದರು.
ಸತೀಶ ಜಾರಕಿಹೊಳಿ ಅಭಿಮಾನಿಗಳು ಮತ್ತು ಅವರ ಕ್ಷೇತ್ರದ ಜನಪ್ರತಿನಿಧಿಗಳು ಆಗಿದ್ದರಿಂದ ಅವರ ಹಿಂಬಾಲಕರಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಜತೆಗೆ ಹಲವು ಶಾಸಕರಿಗೂ ರಾಜೀನಾಮೆ ಸಲ್ಲಿಸಲು ಒತ್ತಾಯ ಮಾಡುತ್ತೇವೆ ಎಂದರು.
ಕಾಣದ ಕೈಗಳು ಸತೀಶ ಅವರಿಗೆ ಸಚಿವ ಸ್ಥಾನ ತಪ್ಪಿಸಿವೆ. ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ, ಅಹ್ಮದ್ ಪಟೇಲ್, ಕೆ. ಸಿ. ವೇಣುಗೋಪಾಲ ಅವರೇ ಸಚಿವ ಸ್ಥಾನ ತಪ್ಪಲು ಮುಖ್ಯ ಕಾರಣ ಎಂದು ಎಲ್ಲ ಜನಪ್ರತಿನಿಧಿಗಳು ಆರೋಪಿಸಿದರು.
ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಬಬಲಿಗರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯೆಕ್ತಪಡಿಸಿದರು
ಸಿದ್ದನಗೌಡ ಸುಣಗಾರ, ಜಯಶ್ರೀ ಮಾಳಗಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು