ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಮೇಯರ್ ಮಾಡಲು ನಾವು ಈಗಲೂ ಬದ್ಧರಾಗಿದ್ದೇವೆ ಈ ವಿಚಾರದಲ್ಲಿ ಜಿಲ್ಲಾ ಮಂತ್ರಿಗಳು ಸಭೆ ಕರೆದರೆ ಸಭೆಗೆ ತಮ್ಮನ್ನು ಅಹ್ವಾನಿಸಿದರೆ ಖಂಡಿತವಾಗಿ ಆ ಸಭೆಗೆ ಹೋಗುವೆ ಎಂದು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ
ಶಾಸಕ ಸೇಠ ಅವರ ನಿವಾಸದಲ್ಲಿ ಕನ್ನಡ ನಗರ ಸೇವಕರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು ಪ್ರಾಥಮಿಕವಾಗಿ ಆಪ್ತ ನಗರ ಸೇವಕರ ಜೊತೆ ಸಮಾಲೋಚನೆ ನಡೆಸಿದ್ದೇವೆ ಕನ್ನಡ ಮೇಯರ್ ಮಾಡುವ ವಿಚಾರದಲ್ಲಿ ಇಂದಿನಿಂದ ಹೋರಾಟ ಆರಂಭವಾಗಿದೆ ಎಂದರು
ಕನ್ನಡ ಮೇಯರ್ ವಿಚಾರದಲ್ಲಿ ಜಿಲ್ಲಾ ಮಂತ್ರಿಗಳು ಸಭೆ ಕರೆದಿದ್ದರು ಆದರೆ ತಮ್ಮನ್ನು ಅಹ್ವಾನಿಸಿರಲಿಲ್ಲ ಅವರೂ ಕೂಡಾ ಕನ್ನಡ ಮೇಯರ್ ಮಾಡಲು ಪ್ರಯತ್ನ ನಡೆಸಿದ್ದಾರೆ ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಶಾಸಕ ಸೇಠ ಮತ್ತು ತಾವು ಕನ್ನಡ ಮೇಯರ್ ಮಾಡುವ ವಿಚಾರದಲ್ಲಿ ಈಗಲೂ ಬಧ್ಧರಾಗಿದ್ದೇವೆ ಎಂದರು
ಶಾಸಕ ಫಿರೋಜ್ ಸೇಠ ಮಾತನಾಡಿ ಪಾಲಿಕೆಯಲ್ಲಿ ೨೬ ಜನ ಕನ್ನಡ ನಗರ ಸೇವಕರು ಒಗ್ಗಟ್ಟಾಗಿದ್ದಾರೆ ಶಾಸಕರು ಮತ್ತು ಸಂಸದರು ಮತ ಚಲಾಯಿಸಿದರೆ ಕನ್ನಡ ಮೇಯರ್ ಆಗ್ತಾರೆ ಈ ವಿಷಯದಲ್ಲಿ ಪ್ರಯತ್ನಗಳು ನಡೆಯಬೇಕು ಮೀನಾ ವಾಜ್ ಅವರನ್ನು ಕನ್ನಡ ಗುಂಪಿನತ್ತ ಸಳೆಯುವ ಪ್ರಯತ್ನ ನಡೆದಿದೆ ಈ ಬಾರಿ ಕನ್ನಡದ ಮೇಯರ್ ಆಗ್ತಾರೆ ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು
ಶಾಸಕ ಸೇಠ ಅವರ ಮನೆಯಲ್ಲಿ ಕರೆದ ಸಭೆಗೆ ಐದು ಜನ ನಗರ ಸೇವಕರು ಭಾಗವಹಿಸಿದ್ದರು