ಬೆಳಗಾವಿ-
ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕುರಿತು ಶಾಸಕ ಸತೀಶ್ ಜಾರಕಿಹೋಳಿ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ
ಅವರ ನಿವಾಸದಲ್ಲಿ ಭೇಟಿಯಾದ ಮಾದ್ಯಮಿತ್ರರ ಜೊತೆ ಮಾತನಾಡಿದ ಅವರು
ಸೋಮವಾರದಂದು ನಾನು ರಾಹುಲ್ ಗಾಂಧಿಗೆ ರಾಜೀನಾಮೆ ಸಲ್ಲಿಸಿದ್ದೇನೆ
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲಾ ಬೇರೆ ಶಾಸಕರನ್ನ ಸಚಿವರನ್ನ ಮಾಡುತ್ತೇವೆ ಎಂದಿದ್ದಾರೆ
ರಾಜೀನಾಮೆ ನೀಡಿದ ಮೇಲೆ ಜಿ.ಪರಮೇಶ್ವರ, ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಕುರಿತು ಮಾತನಾಡಿಲ್ಲ ಎಂದು ಸತೀಶ ಜಾರಕಿಹೊಳಿ ತಿಳಿಸಿದ್ದಾರೆ
ಆದಷ್ಟು ಬೇಗ ಅವರ ಜೊತೆಗೆ ಮಾತನಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ನಮ್ಮ ಅಸಮಾಧಾನದಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ, ಸರ್ಕಾರ ಉಳಿಯುತ್ತದೆ ಅತೃಪ್ತ ಶಾಸಕರು ಸಮಾಧಾನ ಆಗಿರುವ ಹಿನ್ನೆಲೆ ದೆಹಲಿಗೆ ಎಂಬಿ ಪಾಟೀಲ್ ಹೋಗಿ ಬಂದ ಮೇಲೆ ಸಭೆಗಳನ್ನ ಮಾಡಬೇಡಿ, ಗುಂಪುಗಾರಿಕೆ ಮಾಡಬೇಡಿ ಎಂದಿದ್ದಾರೆ ನಾವು ಪಕ್ಷಕ್ಕೆ ವಿರೋಧವಾಗಿ ಎನೂ ಮಾಡುತ್ತಿಲ್ಲ ನಮ್ಮಗೆ ಹಕ್ಕಿದೆ ನಾವು ಮಾಡುತ್ತಿದ್ದೇವೆ ಅಷ್ಟೇ ಎಂದಿದ್ದಾರೆ
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಚಿವ ಸ್ಥಾನ ತಪ್ಪಲು ಕೆಲವು ಮುಖಂಡರು ಕಾರಣ ಎಂಬ ಮಾತಿಗೆ ಸತೀಶ್ ತಿರುಗೇಟು ನೀಡಿದ್ದಾರೆ ಅವರಿಗೆ ಯಾರು ಸಚಿವ ಸ್ಥಾನ ತಪ್ಪಿಸಿದ್ದಾರೆ ಗೊತ್ತಿಲ್ಲ, ನನಗೂ ತಪ್ಪಿಸಿದ್ದಾರೆ ಹೀಗಾಗಿ ಇಬ್ಬರು ಕೂಡಿ ಸಚಿವ ಸ್ಥಾನ ತಪ್ಪಿಸಿದವರನ್ನ ಹುಡುಕಬೇಕಾಗಿದೆ ಅವಳ ಸಮಸ್ಯೆ ಒಂದೇ ನನ್ನ ಸಮಸ್ಯೆ ಒಂದೇ ಅವರು ಸ್ವಲ್ಪ ಅವರು ಕಣ್ಣೀರು ಹಾಕಿದ್ರೂ ನಾವು ಕಣ್ಣೀರು ಹಾಕಿಲ್ಲ ಎಂದು ಸತೀಶ್ ಜಾರಕಿಹೊಳಿ ಅವರು ಹಾಸ್ಯಚಟಾಕಿ ಹಾರಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ