ಮಾದ್ಯಮಗಳ ಹದ್ದಿನ ಕಣ್ಣು….ಸತೀಶ ಜಾರಕಿಹೊಳಿ ಕೈಯಲ್ಲಿ ನಿಂಬೆಹಣ್ಣು……!!!!!!

ಬೆಳಗಾವಿ-ಇತ್ತೀಚಿನ ದಿನಗಳಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಫುಲ್ ಚೇಂಜ್ ಆಗಿದ್ದಾರೆ ಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಸ್ವತಹ ಜನರ ಸಮಸ್ಯೆ ಆಲಿಸಿ ಅದಕ್ಕೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುತ್ತಿದ್ದಾರೆ
ಪ್ರತಿ ವರ್ಷ ಡಿಸೆಂಬರ 6 ರಂದು ಸ್ಮಶಾನದಲ್ಲಿ
ಮೂಢನಂಬಿಕೆ ವಿರೋಧಿಸಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ರಾಷ್ಟ್ರದ ಗಮನ ಸೆಳೆದಿದ್ದ
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಕೈಯಲ್ಲಿ ಇತ್ತೀಚಿನ ದಿನಗಳಲ್ಲಿ ಲಿಂಬೆಹಣ್ಣು ಕಾಣಿಸುತ್ತಿದೆ ಇದು ನಂಬಿಕೆಗೆ ದೂರವಾದರೂ ಸತ್ಯ

ಅವರು ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ತಿರುಗಾಡುತ್ತಿರುವದನ್ನು ದೃಶ್ಯ ಮಾದ್ಯಮದ ಕೆಲವು ಗೆಳೆಯರು ಶೂಟ್ ಮಾಡಿದ್ದಾರೆ ಪೋಟೋ ತೆಗೆದು ಮಾದ್ಯಮಗಳಲ್ಲಿ ಸುದ್ಧಿ ಮಾಡಿದ್ದಾರೆ

ಸಭೆ ಸಮಾರಂಭದಲ್ಲಿ, ಹಾಗೂ ಸಾರ್ವಜನಿಕರ ಭೇಟಿ ವೇಳೆಯೂ ಕೈಯಲ್ಲಿರುತ್ತೆ ನಿಂಬೆಹಣ್ಣು
ಕೈಯಲ್ಲಿ ನಿಂಬೆಹಣ್ಣು ನೋಡಿ ಅವರ ಅಭಿಮಾನಿಗಳೇ ತಬ್ಬಿಬ್ಬಾಗಿದ್ದಾರೆ

ಕಳೆದ ಅಮವಾಸ್ಯೆಯಿಂದ ಕೈಯಲ್ಲಿ ನಿಂಬೆಹಣ್ಣು ಕಾಣಿಸುತ್ತಿದೆ ಎನ್ನುವದು ನೋಡಿದವರು ಹೇಳ್ತಾರೆ
ನೆನ್ನೆ ನಡೆದ ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾ ಭವಣಲ್ಲಿ ಸಾರ್ವಜನಿಕರಿಗೆ ಭೇಟಿ ವೇಳೆ ಸತೀಶ ಜಾರಕಿಹೊಳಿ ಅವರ ಕೈಯಲ್ಲಿ ನಿಂಬೆ ನೋಡಿ ಮಾದ್ಯಮದ ಗೆಳೆಯರೇ ತಬ್ಬಿಬ್ಬಾಗಿದ್ದಾರೆ

ಪ್ರತಿ ವರ್ಷ ಡಿಸೆಂಬರ್ ೬ ರಂದು ಮೂಢನಂಬಿಕೆ ವಿರೋಧಿಸಿ ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಸತೀಶ್ ಜಾರಕಿಹೊಳಿ,ಇತ್ತೀಚಿನ ದಿನ ಕೈಯಲ್ಲಿ ನಿಂಬೆಹಣ್ಣು ಕಾಣುತ್ತಿರುವದು ಅಚ್ಚರಿಯಾಗಿದೆ

ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಕ್ಷೇತ್ರದ ಕಾರ್ಯ ವೈಖರಿಯಲ್ಲಿ ಅನೇಕ ಬದಲಾವಣೆಗಳ ಯನ್ನು ಮಾಡಿಕೊಂಡಿದ್ದಾರೆ ಪಿಎ ಗಳನ್ನು ಮನೆಗೆ ಕಳುಹಿಸಿ ಸ್ವತಹ ಹಳ್ಳಿಯ ಶಾಲೆಗಳಿಗೆ ಹಾಸ್ಟೇಲ್ ಗಳಿಗೆ ಭೇಟಿ ನೀಡಿ ಸಮಸ್ಯೆಗೆ ಸ್ಪಂದನೆ ಮಾಡುತ್ತಿದ್ದು ಸತೀಶ ಜಾರಕಿಹೊಳಿ ಈಗ ಫುಲ್ ಚೇಂಜ್ ಆಗಿದ್ದಂತೂ ಸತ್ಯ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *