ಲೀಡರ್ ಆಗಬೇಕಂದ್ರ ಜಿಂದಾಬಾದ್…ಮುರದಾಬಾದ್ ಎರಡೂ ಇರಬೇಕು – ಸತೀಶ ಜಾರಕಿಹೊಳಿ

ಬೆಳಗಾವಿ-

ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾದ್ಯಮಗಳ ಜೊತೆ ಮಾತನಾಡಿದ್ದಾರೆ ಇಂದು ವೇಣುಗೋಪಾಲ ಕರೆದಿದ್ದ ಸಭೆಗೆ ಹೋಗುವುದಿಲ್ಲ.ಎಂದು ಅವರು ತಿಳಿಸಿದ್ದಾರೆ
ಸಹೋದರ ಸಚಿವ ರಮೇಶ ಜಾರಕಿಹೊಳಿ ಹೊಗ್ತಾರೆ ಎಂದು ಮಾಹಿತಿ ನೀಡಿದ್ದಾರೆ

ಇವತ್ತಿನ ಸಭೆ ಬೆಳಗಾವಿ, ಚಿಕ್ಕೋಡಿ ಲೋಕಸಭೆ ಚುನಾವಣೆ ಕುರಿತ ಸಭೆಯಿದೆ ನನ್ನದು ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಹೋಗುತ್ತಿಲ್ಲಾ.ಸಮನ್ವಯ ಸಮಿತಿ ಸಭೆಯಲ್ಲಿ ಸರ್ಕಾರದ ಆಗು ಹೋಗು ಬಗ್ಗೆ ಚರ್ಚೆ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗಲಿದೆ ನಮ್ಮ ಸರ್ಕಾರ ಪಥನ ಆಗುದಿಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ

ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ.ರಾಜಕೀಯ ದಲ್ಲಿ ಒಳ್ಳೆಯದು ಹೇಳಿದ್ರು ವಿರೋಧ ಮಾಡ್ತಾರೆ ಕೆಟ್ಟದ್ದ ಹೇಳಿದ್ರು ವಿರೋಧ ಮಾಡ್ತಾರೆ.ರಾಜಕೀಯದಲ್ಲಿ ನಾಯಕತ್ವ ಬರಬೇಕೆಂದ್ರ ಜಿಂದಾಬಾದ್ ಇರುಬೇಕು.. ಮುರದಾಬಾದ್ ಇರಬೇಕು. ಅಂದ್ರೆ ನಾಯಕ ಲೀಡರ್ ಆಗ್ತಾನೆ.

ಸಚಿವ ರಮೇಶ ಜಾರಕಿಹೊಳಿ ಕಾಲಕಸ ಹೇಳಿಕೆ ಸಮರ್ಥನೆ ಮಾಡಿಕೊಳ್ಳುವುದಿಲ್ಲ.ಸಚಿವ ರಮೇಶ ಜಾರಕಿಹೊಳಿ ಹಾಗೇ ಇದ್ದಾನೆ
ರಮೇಶ ಜಾರಕಿಹೊಳಿ ಹೇಗೆ ಅನ್ನೊದು ನಿಮಗೆ ಗೊತ್ತಿದೆ.ನನಗು ಸಾಕಷ್ಟ ಸಲ ಬೈದಿದ್ದಾನೆ..ಅವನು ಯಾರನ್ನ ಬೈಯದೆ ಬಿಟ್ಟಲ್ಲ. ಈಗ ಲಕ್ಷ್ಮಿ ಹೆಬ್ಬಾಳಕರ ಸಿಕ್ಕಿದ್ದಾರೆ ಅವರನ್ನ ಬೈದಿದ್ದಾನೆ.ಇದೇನ ಹೊಸದೇನಲ್ಲಾಸಚಿವ ರಮೇಶ ಜಾರಕಿಹೊಳಿ ಭಾಷೆಯಲ್ಲಿ ಬದಲಾವಣೆ ಮಾಡಕೋಬೇಕು ಎಂದು ಸಹೋದರ ಸತೀಶ ರಮೇಶ ಜಾರಕಿಹೊಳಿಗೆ ಸಲಹೆ ನೀಡಿದ್ದಾರೆ

ಕೆಲವೊಂದ ಪದಗಳನ್ನ ಬಳಸಬಾರದು.ನನಗೆ ಸಾಕಷ್ಟ ಸರಿ ಬೈದರು ನಾನು ಸುಮ್ಮನಿದ್ದೆ.. ಲಕ್ಷ್ಮಿ ಹೆಬ್ಬಾಳಕರ ಅವರಂತೆ ಅದನ್ನ ದೊಡ್ಡದು ಮಾಡಿಲ್ಲಾ.ಸಚಿವ ರಮೇಶ ಜಾರಕಿಹೊಳಿ ಬೈದು ಸಮ್ಮನಾಗುತ್ತಾರೆ.ನನ್ನ 30 ವರ್ಷದ ರಾಜಕೀಯ ದಲ್ಲಿ ಯಾವುದನ್ನ ಪರ್ಸನಲ್ ಆಗಿ ತೆಗೆದುಕೊಳ್ಳುವುದಿಲ್ಲಾ.ಎಂದು ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಹೇಳಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *