ಬೆಳಗಾವಿ- ಬೆಂಗಳೂರಿನಿಂದ ಮರಳಿದ ಬಳಿಕ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ನನಗು ಈಗಿನ ರಾಜಕೀಯ ಬಿಕ್ಕಟ್ಟಿಗು ಸಂಬಂಧವಿಲ್ಲ ನಾನು ಅಸಮಾಧಾನ ಆಗಿಲ್ಲ. ಹೀಗಾಗಿ ವಾರ್ನಿಂಗ್ ಮಾಡುವ ಅವಶ್ಯಕತೆ ಇಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ
ಅವರ ನಿವಾಸದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ಮೊದಲಿನಿಂದ ಹೇಳುತ್ತಲೇ ಬಂದಿದ್ದೇನೆ ಈ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ಪಾತ್ರವಿಲ್ಲ 4 ತಿಂಗಳಿಂದ ಆಪರೇಷನ ಕಮಲ ಚರ್ಚೆ ನಡೆಯುತ್ತಲೇ ಇದೆ ಸದ್ಯದ ವಾತಾವರಣದಲ್ಲಿ ಕಾಂಗ್ರೆಸ್ ಬಿಟ್ಟು ಯಾರು ಹೋಗಲ್ಲ
ಅಸಮಾಧನ ಇರೋದು ನಿಜ ಕಾಂಗ್ರೆಸ್ ಅಷ್ಟೆ ಅಲ್ಲ ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧ ಇದೆ ಎಂದರು
ಕೆಪಿಸಿಸಿ ಅಧ್ಯಕ್ಷರನ್ನು 2 ಭಾರಿ ಭೇಟಿ ಮಾಡಿ ಮಾತನಾಡಿದ್ದೇನೆಗಣೇಶ ಹಬ್ಬ ಮುಗಿದ ಬಳಿಕ ಮತ್ತೊಮ್ಮೆ ಭೇಟಿ ಮಾಡಿ ಚರ್ಚೆ ಮಾಡುತ್ತೇನೆ
ಸಚಿವ ಡಿ.ಕೆ. ಶಿವಕುಮಾರ್ ನನ್ನ ಭೇಟಿ ಮಾಡಿಲ್ಲ
ಅತೃಪ್ತ ನೇತೃತ್ವ ಯಾರು ವಹಿಸಿದ್ದಾರೆ ಎಂಬುದು ಗೊತ್ತಿಲ್ಲ ರಮೇಶ ಜಾರಕಿಹೊಳಿ ಹಲವು ಭಾರೀ ಚರ್ಚೆ ಮಾಡಿದ್ದೇನೆ ಜಿಲ್ಲೆಯ ವಿಚಾರದಲ್ಲಿ ಪದೇ ಪದೇ ಬೇರೆ ನಾಯಕರ ಹಸ್ತಕ್ಷೇಪ ಈ ಹಿನ್ನೆಲೆಯಲ್ಲಿ ಸಮಸ್ಯೆ ಉಲ್ಭಣವಾಗಿದೆ ಹಿರಿಯ ಕಾಂಗ್ರೆಸ್ ನಾಯಕರು ಇದನ್ನು ಸರಿ ಮಾಡುತ್ತಾರೆ ಎಂದು ಸತೀಶ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ
ಬೆಳಗಾವಿ ಜಿಲ್ಲೆಯ ವಿಭಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರುಕಳೆದ 20 ವರ್ಷಗಳಿಂದ ಜಿಲ್ಲೆ ವಿಭಜನೆಯ ಪ್ರಸ್ತಾಪ ಇದೆ ನಾನು ಕೂಡಾ ಈ ಬಗ್ಗೆ ಅನೇಕ ಭಾರೀ ಪ್ರಸ್ತಾಪ ಮಾಡಿದ್ದೇನೆ ಜಿಲ್ಲೆ ವಿಭಜನೆ ಆಗಲೇಬೇಕು ಈ ಬಗ್ಗೆ ವಿಧಾನಸಭೆಯಲ್ಲಿ ನಾನೇ ಪ್ರಸ್ತಾಪ ಮಾಡಿದ್ದೇನೆ
ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಲೇ ಬೇಕು ಜಿಲ್ಲಾ ವಿಭಜನೆ ವಿಚಾರ ಸಮನ್ವಯ ಸಮಿತಿಯಲ್ಲಿ ಚರ್ಚೆ ಆಗಬೇಕು ಎಂದು ಸತೀಶ ಜಾರಕಿಹೊಳಿ ಒತ್ತಾಯಿಸಿದರು
ಸೆಪ್ಟೆರಂಬರ್ 16 ರ ಬಗ್ಗೆ ರಾಜಕೀಯಲ್ಲಿ ವಿಭಿನ್ನ ವಿಶ್ಲೇಷಣೆ ಹಿನ್ನೆಲೆ ಸೆಪ್ಟೆರಂಬರ್ 16ರ ಬಗ್ಗೆ ನನಗೆ ಏನುಗೊತ್ತಿಲ್ಲ ಈ ತಿಂಗಳ ಕೊನೆಯಲ್ಲಿ ಮಂತ್ರಿ ಮಂಡಳ ವಿಸ್ತರಣೆ ನಡೆಯಲಿದೆ ಬೆಂಬಲಿಗರಿಗೆ ಸಚಿವ ಸ್ಥಾನ ಸಿಗೋ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದರು