ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಜಾರಕಿಹೊಳಿ ಸಹೋದರರ ನಡುವಿನ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದೆ
ಮಾಜಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿಯಲ್ಲಿ ಪರಸ್ಪರ ಭೇಟಿಯಾಗಿ ಎಪಿಎಂಸಿ ಚುನಾವಣೆ ಕುರಿತ ಮಾತುಕತೆ ನಡೆಸಿದ್ದು ರಾಜಿ ಸಂಧಾನ ಸಫಲವಾಗಿದೆ ಎಂದು ತಿಳಿದು ಬಂದಿದೆ
ಚುನಾವಣೆ ನಾಳೆ ನಡೆಯಲಿದ್ದು ನಾಲ್ಕು ಜನ ಆಕಾಂಕ್ಷೆಗಳು ರೇಸ್ ನಲ್ಲಿ ಇದ್ದಾರೆ ಹಿರಿಯ ಕಾಂಗ್ರೆಸ್ ಮುಖಂಡ ಯುವರಾಜ ಕದಂ ಸುಧೀರ ಗಡ್ಡೆ ನಡುವೆ ಪೈಪೋಟಿ ಶುರುವಾಗಿದ್ದು ಇಬ್ಬರು ಪ್ರಬಲ ರಾಜಕೀಯ ಕಡುವೈರಿಗಳು ಸೇರಿಕೊಂಡು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ
ಇಬ್ಬರು ಒಂದೇ ಸ್ಥಳದಲ್ಲಿ ಕುಳಿತುಕೊಂಡು ಚರ್ಚೆ ನಡೆಸಿದ್ದು ಅಂತೀಮ ತೀರ್ಮಾಣ ಏನಾಗುತ್ತದೆ ಕಾದು ನೋಡಬೇಕು
ಆದರೆ ಒಂದು ಬೆಳವಣಿಗೆ ಪ್ರಕಾರ ಯುವರಾಜ್ ಕದಂ ರೇಸ್ ನಿಂದ ಔಟ್ ಆಗಿದ್ದಾರೆ ಅವರನ್ನು ನಿಟ್ಟು ಬೇರೊಬ್ಬರೂ ಬೆಳಗಾವಿ ಎಪಿಎಂಸಿ ಅದ್ಯಕ್ಷ ಆಗೋದು ಗ್ಯಾರಂಟಿ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ