Breaking News

ಸ್ಮಶಾನದಲ್ಲಿ ಮದುವೆ …..ಮೌಡ್ಯದ ವಿರುದ್ಧ ಸತೀಶ್ ಜಾರಕಿಹೊಳಿ ಸೆಡ್ಡು…!!!!

ಬೆಳಗಾವಿ-ಮೌಢ್ಯವಿರೋಧಿ ದಿನಾಚರಣೆಯ ಪರಿವರ್ತನಾ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಸ್ಮಶಾನದಲ್ಲಿ ಮದುವೆಯೊಂದು ನೇರವೇರಿತು ಸ್ಮಶಾನದಲ್ಲಿ ಮದುವೆ ಮಾಡುವ ಮೂಲಕ ಸತೀಶ ಜಾರಕಿಹೊಳಿ ಮುಖಂಡತ್ವದ ಮಾನವ ಬಂಧುತ್ವ ವೇದಿಕೆ ಮೌಡ್ಯದ ವಿರುದ್ಧ ಸೆಡ್ಡು ಹೊಡೆದಿದೆ

ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸತೀಶ ಜಾರಕಿಹೊಳಿ ಡಾ,ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಒಂದು ಜೋಡಿಗೆ ಮದುವೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದ್ದೇವೆ. ದಲಿತರ ಮನೆಗಳಲ್ಲಿ ಸಂವಿಧಾನದ ಪುಸ್ತಕ ಸಿಗೋದಿಲ್ಲ. ಲಿಂಗಾಯತರ ಮನೆಯಲ್ಲಿ ಬಸವಣ್ಣನ ವಚನಗಳು ಸಿಗೋದಿಲ್ಲ, ವಾಲ್ಮೀಕಿ ಜನಾಂಗದ ಮನೆಯಲ್ಲಿ ರಾಮಾಯಣ ಸಿಗೋದಿಲ್ಲ. ಅವುಗಳನ್ನ ಬರೆದಿದ್ದು ನಾವು ಮಾರ್ಕೆಟಿಂಗ್ ಮಾಡುತ್ತಿರೋದು ಮಾತ್ರ ಬೇರೆಯವರು. ಎಂದು ಸತೀಶ ಜಾರಕಿಹೊಳಿ ಹೇಳಿದರು

ಕಳೆದ ಚುನಾವಣೆಯಲ್ಲಿ ನಾನು ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ್ದನ್ನ ಬೇರೆ ಬೇರೆ ತರ ವ್ಯಾಖ್ಯಾನಿಸಿದ್ದಾರೆ. ಆ ಕಾರಣಕ್ಕಾಗಿಯೇ ನನ್ನ ಲೀಡ್ ಕಡಿಮೆ ಆಯ್ತು ಅಂತಾರೆ. ಆದ್ರೆ ಕೆಲವರು ಕೇರಳ, ಶಿರಸಿ ಸುತ್ತಾಡಿ ಪೂಜೆ ಮಾಡಿಸಿದ್ರು ಅವರೇಕೆ ಗೆಲ್ಲಲಿಲ್ಲ. ಚುನಾವಣೆಯಲ್ಲಿ ನಾನು ಕಡಿಮೆ ಖರ್ಚು ಮಾಡಿದೆ.. ಎರಡು ಮೂರು ಕೋಟಿ ಖರ್ಚು ಮಾಡಿದ್ರೆ 20 ಸಾವಿರ ಲೀಡ್ ಬರುತ್ತಿದ್ದೆ. ಮುಂದಿನ ಭಾರೀ ಮತ್ತೇ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತೇನೆ. ಎಂದು ಸತೀಶ್ ವಿಶ್ವಾಸ ವ್ಯೆಕ್ತಪಡಿಸಿದರು

ವಾಮಮಾರ್ಗದಲ್ಲಿ ಚುನಾವಣೆ ಮಾಡಬಾರದು. ಜನರಿಗೆ ಹಣ,ಹೆಂಡ ಹಂಚಬಾರದು ಅಂತ ಚುನಾವಣೆಯಲ್ಲಿ ಹೊಸ ಪ್ರಯೋಗ ಮಾಡಿದೇವು. ಶಿವಾಜಿ ಮಹಾರಾಜರ ಹತ್ಯೆ ಯತ್ನ ನಡೆದಿತ್ತು ಅದನ್ನ ತಡೆದಿದ್ದು ಅವರ ಜೊತೆಗಿದ್ದ ಏಳೆಂಟು ಮುಸ್ಲಿಂಮರು ಎಂದರು

ಮೌಢ್ಯ ವಿರೋಧಿಯಾಗಿ ಬುದ್ದ,ಬಸವ,ಅಂಬೇಡ್ಕರ್ ತತ್ವಸಾರುವ ವಿಚಾರಗಳನ್ನ ಮಂಡಿಸಿದರೆ ಅಂತ ವಿದ್ಯಾರ್ಥಿಗಳನ್ನ ನನ್ನ ಹೆಲಿಕಾಪ್ಟರ್ ನಲ್ಲಿ ಸುತ್ತು ಹಾಕಿಸುತ್ತೇನೆ. ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ನಲ್ಲಿ ಸುತ್ತಾಡುವ ಆಫರ್ ನೀಡಿದ ಸತೀಶ್ ಜಾರಕಿಹೊಳಿ ಮಕ್ಕಳಲ್ಲಿ ಮೂಡನಂಬಿಕೆಯ ಬಗ್ಗೆ ತಾವು ರೂಪಿಸಿದ ಹೊಸ ಯೋಜನೆಯನ್ನು ಪ್ರಕಟಿಸಿದರು

ಅಂತರ್ಜಾತಿ ವಿವಾಹಿತರಿಗೆ ಸರಕಾರ 3 ಲಕ್ಷ ಧನಸಹಾಯ ಮಾಡುತ್ತೇ. ನಾನು ಸಿಎಂ ಕುಮಾರಸ್ವಾಮಿ ಯವರಿಗೆ ಮನವಿ ಮಾಡ್ತೀನಿ ಸ್ಮಶಾನದಲ್ಲಿ ವಿವಾಹವಾದವರಿಗೂ ಕೂಡ 2 ಲಕ್ಷ ನೀಡಬೇಕು ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *