ಬೆಳಗಾವಿ- ಸಚಿವ ಸಂಪುಟದ ವಿಸ್ತರಣೆ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ
ಸಂಪುಟ ಸೇರ್ಪಡೆ ಬಗ್ಗೆ ಈವರೆಗೂ ಪಕ್ಷದಿಂದ, ಸರ್ಕಾರದಿಂದ ಅಧಿಕೃತವಾಗಿ ಮಾಹಿತಿ ಬಂದಿಲ್ಲಾ.
ಆದ್ರೆ ಮಾಧ್ಯಮಗಳಿಂದ ಸಂಪುಟ ಸೇರ್ಪಡೆ ಬಗ್ಗೆ ಗೊತ್ತಾಗಿದೆ ಎಂದು ಸತೀಶ ಜಾರಕಿಹೊಳಿ ಹೇಳಿದ್ದಾರೆ
ಮಂತ್ರಿ ಆದ್ರೆ ಬೆಳಗಾವಿ ಜಿಲ್ಲೆಗೆ ಮತ್ತೆ ರಾಜಕೀಯ ವೈಭವೀಕರಣ ಬರಬೇಕಿದೆ. ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಆಗುತ್ತದೆ.
ನನ್ನನ್ನು ಈ ಹಿಂದೆ ಸಚಿವ ಸ್ಥಾನ ಕೈಬಿಟ್ಟಿದ್ದು ಅವಮಾನವಲ್ಲ.ನಮ್ಮ ಪಕ್ಷದ ಹಿಂದಿನ ತೀರ್ಮಾನವನ್ನು ಒಪ್ಪಿದ್ದೇವೆ.. ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ.
ನಾನಾಗಿರ ಬಹುದು ಬೇರೆಯವರು ಇರಬಹುದು ಅವರಿಂದ ತೊಂದರೆಯಿಲ್ಲ
ನಾನು ಎರಡು ವರ್ಷದ ನಂತರ ನಿರೀಕ್ಷೆ ಇಟ್ಟುಕೊಂಡಿದ್ದೆ ಆದರೆ ಕೊಟ್ಟಿದ್ದಾರೆ .. ಕೆಲಸ ಮಾಡ್ತಿನಿ..
ನಾವು ಜಿಲ್ಲೆಯ ಎಲ್ಲಾ ಶಾಸಕರು ಸೇರಿ ಕೆಲ್ಸಾ ಮಾಡ್ತಿವಿ. ಯಾವ ಖಾತೆ ನೀಡ್ತಾರೆ ಎನ್ನುವುದು ಗೊತ್ತಿಲ್ಲಾ.
ಯಾವುದೇ ಒಳ್ಳೆ ಖಾತೆ ನೀಡಿದ್ರು ಕೆಲಸ ಮಾಡುತ್ತೇವೆ… ಸಾರ್ವಜನಿಕವಾಗಿ ಒಳ್ಳೆ ಕೆಲ್ಸಾ ಮಾಡುವ ಖಾತೆ ನೀಡಿದ್ರೆ ಒಳ್ಳೆಯದು. ಈಗೀರುವ ಖಾಲಿ ಖಾತೆಯಲ್ಲಿ ಯಾವುದಾದರೂ ಒಂದು ಖಾತೆ ನೀಡ್ತಾರೆ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ವಿಶ್ವಾಸ ವ್ಯೆಕ್ತಪಡಿಸಿದ್ದಾರೆ
ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಯಾವುದೇ ಸ್ಥಾನ ಸಿಕ್ಕಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ