ಬೆಳಗಾವಿ-ಸಚಿವರಾದ ನಂತರ ಮೊದಲ ಭಾರಿ ಬೆಳಗಾವಿಗೆ ಸತೀಶ ಜಾರಕಿಹೊಳಿ ಭೇಟಿ ನೀಡಿ ಬೆಳಗಾವಿಯ
ಚನ್ನಮ್ಮ ಪ್ರತಿಮೆ, ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ, ಬಸವೇಶ್ವರ ಪ್ರತಿಮೆ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು
ಈ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳಿವೆ ಇವೆ.
ಹಂತ ಹಂತವಾಗಿ ಪರಿಹಾರ ಮಾಡಲು ಪ್ರಯತ್ನ ಮಾಡುತ್ತೇನೆ
ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ. ಜೊತೆಗೆ
ರಾಜಕೀಯ ಸಮಸ್ಯೆ ಇ್ಗದೆ ಮುಖಂಡರ ಜತೆಗೆ ಚರ್ಚಿಸಿ ಪರಿಹಾರ ಮಾಡುವದಾಗಿ ಸತೀಶ್ ಜಾರಕಿಹೊಳಿ ಹೇಳಿದರು
ಖಾತೆ ಹಂಚಿಕೆ ನಾಳೆ ಅಂತಿಮಗೊಳ್ಳಲಿದ್ದು, ಯಾವುದು ಕೊಟ್ಟರು ನಿಭಾಯಿಸಲು ಸಿದ್ಧ.
ಸಂಪುಟ ಪುನರ್ ರಚನೆ ನಂತರ ಅಸಮಾಧಾನ ಸಹಜ.
ಯಾರು ಕೂಡಾ ರಾಜೀನಾಮೆ ನೀಡಲ್ಲ.ರಮೇಶ ಜಾರಕಿಹೊಳಿ ನಾಲ್ಕು ದಿನಗಳ ಬಗ್ಗೆ ರಾಜೀನಾಮೆ ವಿಚಾರ.
ರಮೇಶ ಜಾರಕಿಹೊಳಿ ಜತಗೆ ಚರ್ಚೆ ಮಾಡುತ್ತೇವೆ.
ಪಕ್ಷ ವರಿಷ್ಠರು ಸಹ ರಮೇಶ ಜಾರಕಿಹೊಳಿ ಜತೆಗೆ ಮಾತನಾಡಿಲಿದ್ದಾರೆ ಎಂದರು
ಬಿಜೆಪಿಯವರು ಹೇಳಿದ ತಕ್ಷಣ ಸರ್ಕಾರ ಬಿಳಲ್ಲ. ರಮೇಶ ಜಾರಕಿಹೊಳಿ ಮನವೊಲಿಕೆ ವಿಚಾರ.
ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ, ನಾನು ಅವರ ಜತೆಗೆ ಮಾತನಾಡುತ್ತೇನೆ.ಎಂದು ಸತೀಶ್ ತಿಳಿಸಿದರು
ಸಚಿವರಾಗಿ ಮೊದಲ ಬಾರಿಗೆ ಆಗಮಿಸಿದ ಅವರನ್ನು ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಅವರನ್ನು ಬರಮಾಡಿಕೊಂಡರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ