Breaking News

ಸಮ್ಮಿಶ್ರ ಸರ್ಕಾರ ಅಂದ್ರೆ ಲಾಯಿನ್ ಆಫ್ ಕಂಟ್ರೋಲ್ ಇದ್ದಂಗೆ- ಸತೀಶ್ ಜಾರಕಿಹೊಳಿ

ಬೆಳಗಾವಿ

ಸಮ್ಮಿಶ್ರ ಸರಕಾರ ಎಂದರೆ ಎಲ್ಓಸಿ ಇದ್ದ ಹಾಗೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರಕಾರದಲ್ಲಿ ನಾವೇಲ್ಲ. ಕಾಶ್ಮೀರದ ಎಲ್ಓಸಿಯಲ್ಲಿ ಇದ್ದ ಹಾಗೆ ಇದ್ದೇವೆ. ಸದಾ ಎಚ್ಚರಿಕೆಯಲ್ಲಿ ಇರಬೇಕು.
ಒಂದು ಸಾರಿ ಬಿಜೆಪಿಯಿಂದ ದಾಳಿಯಾಗುತ್ತದೆ‌‌. ಇನ್ನೊಂದು ಸಾರಿ ನಮ್ಮಿಂದ ದಾಳಿಯಾಗುತ್ತಿರುತ್ತದೆ. ಈ ಸಾರಿ ನಾವು ಗೆದ್ದಿದ್ದೇವೆ.
ಆಪರೇಷನ್ ಕಮಲ ಕಳೆದ ಏಳು ತಿಂಗಳಿನಿಂದ‌ ನಡೆಸುವ ಪ್ರಯತ್ನ‌‌ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಭದ್ರವಾಗಿದೆ ಎಂದು ಹೇಳಿದರು.
ಸಮ್ಮಿಶ್ರ ಸರಕಾರದಲ್ಲಿ ಒಪ್ಪಂದವಾಗಿದೆ. ಹಿಂದಿನ ಸರಕಾರದ ಯೋಜನೆಗಳನ್ನೇ ಮುಂದುವರೆಸಲಾಗುತ್ತಿದೆ. ಜನಪರ ಯೋಜನೆಗಳನ್ನು ನೀಡಿ ರಾಜ್ಯವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ರೆಸಾರ್ಟ್ ರಾಜಕಾರಣದ ಗಲಾಟೆಯ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ ಎಂದರು.
ಇಗಲಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ ಸಿಂಗ ಹಾಗೂ ಜೆ.ಎನ್.ಗಣೇಶ ಪರಸ್ಪರ ಗಲಾಟೆ ಮಾಡಿದ‌ ವೇಳೆ ನಾನು ಅಲ್ಲಿ ಇರಲಿಲ್ಲ. ಯಾವ ಕಾರಣಕ್ಕೆ ಜಗಳವಾಡಿದ್ದಾರೆ ಎಂದು ಇನ್ನೂ ತಿಳಿದು‌ ಬಂದಿಲ್ಲ. ಪೊಲೀಸ್ ರು ತನಿಖೆ ನಡೆಸಿದ್ದಾರೆ. ನಂತರ ತಿಳಿದು ಬರುತ್ತದೆ ಎಂದರು.
ರಮೇಶ ಜಾರಕಿಹೊಳಿ ಅವರು ಇನ್ನೂ ಸಿಕ್ಕಿಲ್ಲ. ಅವರನ್ನು‌ ಭೇಟಿ ಮಾಡಿ ಎಂದು ವರಿಷ್ಠರು ಹೇಳಿದ್ದಾರೆ. ಸಮಯ ನೋಡಿ ಮಾತನಾಡುತ್ತೇನೆ ಎಂದು ಹೇಳಿದರು.
ಬೆಳಗಾವಿ ಪ್ರಾಣಿ ಸಂಗ್ರಹಾಲಯದಲ್ಲಿ ಸಫಾರಿ ಆರಂಭಿಸಲು ಈಗಾಗಲೇ ಎರಡು ಹುಲಿಗಳನ್ನು ಕಾಯ್ದಿರಿಸಲಾಗಿದೆ. ಆರು ತಿಂಗಳಲ್ಲಿ ಆ ಹುಲಿಗಳನ್ನು ತಂದು ಬಿಡುತ್ತೇವೆ. ಇದಕ್ಕಾಗಿಯೇ 10 ಕೋಟಿ ರು. ವೆಚ್ಚ ಮಾಡುತ್ತಿದ್ದೇವೆ ಎಂದರು.
ಭೀಮಗಡ ಅರಣ್ಯ ಪ್ರದೇಶದ ಗ್ರಾಮ ಕುಟುಂಬಗಳ ಸ್ಥಳಾಂತರ ಸದ್ಯಕ್ಕೆ ಇಲ್ಲ. ಅರಣ್ಯ ಸಮಿತಿಯ ಸಭೆಯ ಬಳಿಕ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *