ಬೆಳಗಾವಿ-. ಖರ್ಗೆ ಸಿಎಂ ಆಗಬೇಕೆಂಬ ಮಾಜಿ ಪ್ರಧಾನಿ ದೇವೆಗೌಡರ ಹೇಳಿದ್ದು ದೇವೆಗೌಡರ ರಾಜಕೀಯ ನೆಲೆಯನ್ನ ಈ ವರೆಗೂ ರಾಜ್ಯದಲ್ಲಿ ಯಾರಿಗೂ ಕಂಡು ಹಿಡಿಯಲು ಆಗಿಲ್ಲ. ನಾವು ಆಶಯ ಮಾಡುತ್ತೇವೆ ದೇವೆಗೌಡರು ಯಾವಾಗಲೂ ಬಿಜೆಪಿಗೆ ವಿರೋಧವಾಗಿರುತ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಈಗಲೇ ಹೇಳಲು ಆಗುವುದಿಲ್ಲ.
ರಮೇಶ್ ಜಾರಕಿಹೊಳಿ ವೈಯಕ್ತಿಕವಾಗಿ ಟೀಕಿಸುತ್ತಿರುವ ವಿಚಾರ. ರಮೇಶ್ ತನ್ನ ನೆಲೆ ಬಿಟ್ಟು ಬೇರೆಯವರಿಗೆ ಹೇಳುತ್ತಾನೆ.ರಮೇಶ್ ಜಾರಕಿಹೊಳಿ ಮೆಂಟಲ್ ಗಿರಾಕಿ ಸತೀಶ್ ಹೇಳಿದ್ದಾರೆ.
ಸಿದ್ದರಾಮಯ್ಯ ಬಿಜೆಪಿಗೆ ತರ್ತೇನಿ ಅಂತಾನೆ.
ದಿನಾ ಒಂದು ಹೇಳಿಕೆ ಕೊಡ್ತಾನೆ ಅವನ ತಲೆ ಸರಿಯಿಲ್ಲ ಯಾರಿಗೂ ಒಳ್ಳೆಯದು ಕೆಟ್ಟದು ನೋಡಲ್ಲ ಮಾತನಾಡುತ್ತಾನೆ ಅಷ್ಟೇ. ರಮೇಶ್ ನ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು
ಬಿಜೆಪಿ ಅಂದ್ರೆ ಗರ್ಭಗುಡಿ ಇದ್ದ ಹಾಗೇ
ರಮೇಶ್ ಹೊರಗೆ ಮಂಗಳಾರತಿ ತೆಗೆದುಕೊಳ್ಳಲು ನಿಂತವ ಒಳಗೆ ಪೂಜಾರಿ ಬೇರೆಯವರೇ ಇರ್ತಾರೆ.ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ಮೂರನೇ ಸ್ಥಾನದಲ್ಲಿರುತ್ತಾನೆ ಎಂದು ಸತೀಶ್ ಹೇಳಿದರು.
ಮತದಾರರ ಪ್ರೀತಿ ಯಾವ ರೀತಿ ಇದೆ ಎಂಬುದನ್ನು ಕಾದುನೋಡಬೇಕಿದೆ. ಸಮೀಕ್ಷೆ ಪ್ರಕಾರ ಗೋಕಾಕ್ ನಲ್ಲಿ ಬಿಜೆಪಿ ಮುನ್ನಡೆ ತೋರಿಸಿದ್ದಾರೆ.
ನಮ್ಮ ಸರ್ವೆ ಪ್ರಕಾರ ನಾವು ಸೋಲುವುದಿಲ್ಲ.
ಬಿಜೆಪಿ ಅತೀ ಹೆಚ್ಚು ಸ್ಥಾನ ಗೆಲ್ಲುತ್ತೆ ತೋರಿಸಿದ್ದು ಸಮೀಕ್ಷೆಗಳು ಕೆಲವೊಮ್ಮೆ ಬೇರೆಯಾಗಬಹುದು.
ಗೋಕಾಕ್ ನಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಪೈಟ್ ಇದ್ದು ಪಿಪ್ಟಿ ಪಿಪ್ಟಿ ಇದೆ ಆದರೆ ಉಪಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರುವುದು ಕಡಿಮೆ. ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆ ಆಗುವುದು ಕಷ್ಟ
ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಿಟ್ ಗೆಲ್ಲಲು ಬಿಜೆಪಿ ವಿರುದ್ಧ ಪೈಟ್ ಮಾಡಿದ್ದೇವೆ.ಫಲಿತಾಂಶ ಎನಾಗುತ್ತದೆ ಕಾದು ನೋಡಬೇಕು ಎಂದರು