ಮಹಾತ್ಮಾ ಗಾಂಧಿ ಅಧಿವೇಶನ ನಡೆಸಿದ ನೆಲದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆಗೆ ಮಹೂರ್ತ ಫಿಕ್ಸ…..!!!
ಬೆಳಗಾವಿ – ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಕ್ಷ ನಿಷ್ಠೆ,ಕಾಳಜಿ,ಇಚ್ಛಾಶಕ್ತಿಯ ಕಾರಣದಿಂದಾಗಿ ಬೆಳಗಾವಿಯಲ್ಲಿ ಹಲವಾರು ದಶಕಗಳ ನಂತರ ಕಾಂಗ್ರೆಸ್ ಕಚೇರಿ ಕೊನೆಗೂ ನಿರ್ಮಾಣವಾಗಿದೆ.
ಮಾರ್ಚ್ ಹದಿನಾಲ್ಕರಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಳಗಾವಿಗೆ ಬರುತ್ತಿದ್ದು ಬೆಳಿಗ್ಗೆ 11-00 ಘಂಟೆಗೆ ಉದ್ಘಾಟನೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಂಬಲರ್ಹ ಮೂಲಗಳು ತಿಳಿಸಿವೆ .
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದಿಂದಾಗಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ಮಹಾನಗರ ಪಾಲಿಕೆಯಿಂದ ಜಾಗೆ ಪಡೆಯುವ ಪ್ರಸ್ತಾವನೆ ಸತೀಶ್ ಜಾರಕಿಹೊಳಿ ಅವರಿಗೆ ಸಲ್ಲಿಕೆ ಆಗಿತ್ತು
ಪ್ರಸ್ತಾವನೆ ಸ್ವೀಕರಿಸಿದ 24 ಘಂಟೆಯಲ್ಲಿಯೇ ಪಾಲಿಕೆಯಿಂದ ಕಾಂಗ್ರೆಸ್ ಕಚೇರಿಗೆ ಜಾಗ ಮಂಜೂರು ಮಾಡಿಸುವಲ್ಲಿ ಸತೀಶ್ ಜಾರಕಿಹೊಳಿ ಅವರು ಯಶಸ್ವಿಯಾಗಿದ್ದರು.
ಮಹಾನಗರ ಪಾಲಿಕೆಯಿಂದ ಕಾಂಗ್ರೆಸ್ ಕಚೇರಿಗೆ ಜಾಗೆ ಖರೀಧಿಸಲು ದಿವಂಗತ ಶಂಕರ ಮುನವಳ್ಳಿ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ,ಮಾಜಿ ಶಾಸಕರು ಧನ ಸಹಾಯ ಮಾಡಿದ್ದರು ಈ ಕಾರ್ಯದಲ್ಲಿ ಆಗಿನ ಕೆಪಿಸಿಸಿ ಮಹಿಳಾ ಅದ್ಯಕ್ಷರಾಗಿದ್ದ ಲಕ್ಷ್ಮೀ ಹೆಬ್ಬಾಳಕರ ಅವರು ಸಹಾಯ ಮಾಡಿದ್ದರು
ವಿನಯ ನಾವಲಗಟ್ಟಿ ಅವರು ಬೆಳಗಾವಿ ಜಿಲ್ಲಾದ್ಯಕ್ಷರಾದ ಬಳಿಕ ಕಾಂಗ್ರೆಸ್ ಕಚೇರಿ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭವಾಗಿ ಈಗ ಪೂರ್ಣ ಗೊಂಡಿದ್ದು ಈ ಕಟ್ಟಡ ನಿರ್ಮಾಣಕ್ಕಾಗಿ ಲಕ್ಷ್ಮೀ ಹೆಬ್ಬಾಳಕರ,ಸತೀಶ್ ಜಾರಕಿಹೊಳಿ,ಶಂಕರವಮುನವಳ್ಳಿ ಸೇರಿದಂತೆ ಯಾವ ,ಯಾವ ನಾಯಕರು ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಎಷ್ಟು ಧನ ಸಹಾಯ ಮಾಡಿದ್ದಾರೆ ಎನ್ನುವದನ್ನು ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಪಟ್ಟಿ ಬಿಡುಗಡೆ ಮಾಡಿ ಮಾಹಿತಿ ಒದಗಿಸಬೇಕಾಗಿದೆ
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರ ಪಕ್ಷ ಪರ ಕಾಳಜಿ, ಯಿಂದಾಗಿ ಕೊನೆಗೂ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣವಾಗಿ ಮಾರ್ಚ 14 ರಂದು ಉದ್ಘಾಟನೆ ಆಗಲಿದೆ