ಪತ್ರಕರ್ತರು,ಪೋಲೀಸರ ಬಗ್ಗೆ ಸತೀಶ್ ಜಾರಕಿಹೊಳಿ ಕಳಕಳಿ

 

ಬೆಳಗಾವಿ- ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ,ಪ್ಯಾರಾಮೆಡಿಕಲ್ ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವವೆಮೆ ಮಾಡಿಸಿದಂತೆ,ಪತ್ರಕರ್ತರಿಗೆ, ಪೋಲೀಸರಿಗೆ ವಿಮೆ ಮಾಡಿಸಬೇಕೆಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.

ಗೋಕಾಕಿನ ಹಿಲ್ ಗಾರ್ಡನ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸತೀಶ್ ಜಾರಕಿಹೊಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾರ್ವಜನಿಕರು ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು,ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿದ್ದು ಸೋಸಿಯಲ್ ಡಿಸ್ಟನ್ಸ್ ಕಾಪಾಡಬೇಕು ಎಂದು ಸತೀಶ್ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *