ಬೆಳಗಾವಿ – ಬೆಳಗಾವಿ ಜಿಲ್ಲೆಯ ಯಮಕನಮರಡಿ ಯಲ್ಲಿ ಅರ್ಥಪೂರ್ಣವಾದ ಸೇವೆ ಆಂದೋಲನದ ರೂಪದಲ್ಲಿ ನಡೆಯುತ್ತಿದೆ.ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ ಜನಸೇವೆಯಲ್ಲಿ ತೊಡಗಿಸಿಕೊಂಡಿದೆ.
ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಫಸಲು ಹೊದಲ್ಲೇ ಕೊಳೆಯುವ ಪರಿಸ್ಥಿತಿ ಎದುರಾಗಿದೆ ,ಅನ್ನದಾತನ ಸಂಕಷ್ಟವನ್ನು ಅರ್ಥ ಮಾಡಿಕೊಂಡ ಸತೀಶ್ ಅಭಿಮಾನಿಗಳು ಊರೂರು ಸುತ್ತಾಡಿ ಯಾವ ಗದ್ದೆಯಲ್ಲಿ ಏನು ಬೆಳೆದಿದೆ ಅಂತಾ ಮಾಹಿತಿ ಪಡೆದು ತಕ್ಷಣ ಸತೀಶ್ ಸಾಹುಕಾರ್ ಗೆ ಮಾಹಿತಿ ತಿಳಿಸಿ ತೋಟದಲ್ಲಿ ಬೆಳೆದು ನಿಂತ ಎಲ್ಲ ಫಸಲನ್ನು ಖರೀಧಿ ಮಾಡಿ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚುತ್ತಿದ್ದಾರೆ.
ಯಮಕನಮರಡಿ ಹೆಬ್ಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪೂರದಲ್ಲಿ ಪೇರಲು ತೋಟದಲ್ಲಿ ಪೇರಲು ಹಣ್ಣು ಬೆಳೆದು ನಿಂತಿತ್ತು ,ಪಕ್ಕದ ಗದ್ದೆಯಲ್ಲಿ ಕಲ್ಲಂಗಡಿ ಕಟಾವ್ ಗೆ ಬಂದಿತ್ತು ಲಾಕ್ ಡೌನ್ ನಿಂದಾಗಿ ಕಟಾವ್ ಆಗಿರಲಿಲ್ಲ ಈ ಕುರಿತು ಸತೀಶ್ ಜಾರಕಿಹೊಳಿ ಸಾಹುಕಾರ್ ಗೆ ಮಾಹಿತಿ ಸಿಗುತ್ತಿದ್ದಂತೆಯೇ ಉಳ್ಳಾಗಡ್ಡಿ ಖಾನಾಪೂರಕ್ಕೆ ಧಾವಿಸಿ ತೋಟದಲ್ಲಿ ಹೊಕ್ಕು ಫಸಲು ನೋಡಿದ್ರು
ಬೆಳೆದು ನಿಂತ ಮೂರ್ನಾಲ್ಕು ಪೇರಲು ಕಟ್ ಮಾಡಿ ರುಚಿ ನೋಡಿದ್ರು ,ಪಕ್ಕ ದ ಗದ್ದೆಯ ರೈತ ಕಲ್ಲಂಗಡಿ ಕಟ್ ಮಾಡಿ ಸಾಹುಕಾರ್ ಗೆ ಕೊಟ್ಟ ,ಪೇರು ಮತ್ತು ಕಲ್ಲಂಗಡಿ ಯ ರುಚಿ ನೋಡಿದ ಸಾಹುಕಾರ್ ತೋಟದಲ್ಲಿದ್ದ ಎಲ್ಲ ಪೇರು ಮತ್ತು ಗದ್ದೆಯಲ್ಲಿದ್ದ ಎಲ್ಲ ಕಲ್ಲಂಗಡಿಗಳನ್ನು ಖರೀಧಿ ಮಾಡಿಯೇ ಬಿಟ್ಟರು.
ಕಲ್ಲಂಗಡಿ ಪೇರು,ಎರಡೂ ಸೇರಿ 30 ಟನ್ನ ಇದೆ.ಇದನ್ನು ಕಟಾವ್ ಮಾಡಿ ಯಮಕನಮರಡಿ ಸೇರಿದಂತೆ ಜಿಲ್ಲೆಯ ಇತರ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ,ವೈದ್ಯರಿಗೆ,ಪೋಲೀಸರಿಗೆ ಉಚಿತವಾಗಿ ಹಂಚಿಕೆ ಮಾಡಿ ಎಂದು ಸತೀಶ್ ಸಾಹುಕಾರ್ ತಮ್ಮ ಅಭಿಮಾನಿಗಳಿಗೆ ಫರ್ಮಾನು ಹೊರಡಿಸಿ ಗೋಕಾಕಿನತ್ತ ಪ್ರಯಾಣ ಬೆಳೆಸಿದರು.