.ಬೆಳಗಾವಿ- ಉತ್ತರ ಕರ್ನಾಟಕದ ಪ್ರವಾಸದ ಬಳಿಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ಹೊಸ ಬಾಂಬ್. ಹಾಕಿದ್ದಾರೆ.
ಬೆಳಗಾವಿಯ ಗೃಹ ಕಚೇರಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಹಿರಿಯ ಶಾಸಕ ಉಮೇಶ ಕತ್ತಿ ಔತಣಕೂಟ ವಿಚಾರ. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರವಾಗಿದೆ. ವಲಸಿಗರಿಂದ ಮೂಲ ಬಿಜೆಪಿ ಅವ್ಯಾಯವಾಗಿದೆ,ಎಂದು ಸತೀಶ್ ಜಾರಕಿಹೊಳಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಬಿಜೆಪಿ ಹೈಕಮಾಂಡ್ ತೀರ್ಮಾನ,ಮಾಡುತ್ತದೆ. ಉತ್ತರ ಕರ್ನಾಟಕ ಭಾಗದ ಶಾಸಕರಿಂದ ಪ್ರಲ್ಹಾದ್ ಜೋಶಿ ಹೆಸರು ಪ್ರಸ್ತಾಪ ಆಗುತ್ತಿದೆ. ಕಾಂಗ್ರೆಸ್ ಟೀಂ ಸಹ ಜಗದೀಶ್ ಪರ ಬ್ಯಾಟಿಂಗ್ ಮಾಡುತ್ತಿದೆ,ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವ ರಮೇಶ ಜಾರಕಿಹೊಳಿ ಇನ್ನೂ 5 ಜನ ಶಾಸಕರ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,ಗೊಂದಲ ಮಾಡೊದು ರಮೇಶ ಜಾರಕಿಹೊಳಿ ಬಂಡವಾಳ. ಕಾಂಗ್ರೆಸ್ ಪಕ್ಷದಿಂದ ಯಾರೊಬ್ಬರು ಹೋಗಲ್ಲ. ನಾವು ಚುನಾವಣೆ ಎದುರಿಸಲು ಸಿದ್ದ.
ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಹತ್ನ ಮಾಡಿಲ್ಲ.
ಬಿಜೆಪಿ ಶಾಸಕರನ್ನು ಸೆಳೆಯಲು ದೊಡ್ಡ ಪ್ರಮಾಣದ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ ಎಂದು ಸತೀಶ್ ಜಾರಕಿಹೊಳಿ ಬಿಜೆಪಿ ವಿರುದ್ಧ ವ್ಯೆಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಭೇಟಿಗೆ ಉಮೇಶ ಕತ್ತಿ ಯತ್ನ ವಿಚಾರ. ರಾಜಕೀಯಲ್ಲಿ ಯಾರು ಯಾರನ್ನು ಬೇಕಾದ್ರು ಭೇಟಿ ಆಗಬಹುದು. ಧೈರ್ಯದ ಮೇಲೆ ಬಂಡಾಯದ ತೀವ್ರ ನಿರ್ಧಾರ ಆಗಲಿದೆ. ಬಿಜೆಪಿ ಆಂತರಿಕ ಕಲಹದ ತೀವ್ರತೆ ಮೇಲೆ ಮಧ್ಯಂತರ ಚುನಾವಣೆ ನಿರ್ಧಾರ ಆಗಲಿದೆ.
ಮಧ್ಯಂತರ ಚುನಾವಣೆ ಬಂಡಾಯದ ಕುಸ್ತಿಯ ಮೇಲೆ ನಿರ್ಧಾರ ಆಗಲಿದೆ. ಈಗ ಕುಸ್ತಿ ಆರಂಭವಾಗಿದ್ದು, ಕೇವಲ ಸೆಡ್ಡು ಹೊಡೆದು ಹೊರಗೆ ನಿಂತ್ರೆ ಪ್ರಯೋಜನ ಇಲ್ಲ. ಬಾಳಿಕಾಯಿ ತಗೊಂಡು ವಾಪಸ್ ಬಂದರೇ ಪ್ರಯೋಜನ ಇಲ್ಲ.ನಿಜವಾಗಿಯೂ ಕುಸ್ತಿ ಆದರೆ ನಾಯಕತ್ವ ಬದಲಾವಣೆಯಾಗಿ ಮಧ್ಯಂತರ ಚುನಾವಣೆ ಆಗಲಿದೆ. ಕುಸ್ತಿ ಹಿಡಿಯುವರ ಮೇಲೆ ಇದು ನಿರ್ಧಾರ ಅಗಲಿದೆ. ಎಂದು ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.
ಆಪರೇಷನ್ ಕಮಲ ಮೂಲಕ ಸರ್ಕಾರ ಮಾಡಿದ್ದು ತಪ್ಪು. ಹೊರಗಿನಿಂದ ಬಂದವರಿಗೆ ಪ್ರಾಮುಖ್ಯತೆ ಕೊಟ್ಟರೇ ಆಂತರಿಕ ಕಲಹ,ನಡೆಯುವದು ಸಹಜ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದುಬಿಜೆಪಿಯಲ್ಲಿ ಒಟ್ಟು ಮೂರು ಗುಂಪುಗಳು ಇವೆ. ಜನತಾ ಪರಿವಾರದಿಂದ ಬಂದವರು ಒಂದು ಗುಂಪು. ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರ ಒಂದು ಗುಂಪು. ಕಾಂಗ್ರೆಸ್ ನಿಂದ ಬಿಜೆಪಿ ಹೋಗಿರೋ ಒಂದು ಗಂಪು.ಹೀಗೆ ಬಿಜೆಪಿಯಲ್ಲಿ ಮೂರು ಗುಂಪು ಗಳಿವೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಷ್ಟಾಗಿ ಆಸಕ್ತಿ ಇಲ್ಲ. ನಮ್ಮ ಅಭ್ಯರ್ಥಿ ಆಯ್ಕೆಯಾದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಖುತ್ತೇವೆ ಎಂದರು ಸತೀಶ್.
ಕೊರೊನಾ ವೈರಸ್ ಮಹಾಮಾರಿ ಹಿನ್ನೆಲೆ.
ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಗೆಸ್ಟ್ ಹೌಸ್ ನಲ್ಲಿ ಆಶ್ರಯ ನೀಡಲಾಗಿತ್ತು ಆದರೆ ಸರ್ಕಾರ ದೊಡ್ಡ ತಪ್ಪು ನಿರ್ಧಾರ ಕೈಗೊಂಡಿದೆ.ರಿಪೋರ್ಟ್ ಬರೋ ಮೊದಲೇ ಬಿಡುಗಡೆ ಮಾಡಲಾಗಿದೆ. 600 ಜನರನ್ನು ವರದಿ ಬರೋ ಮೊದಲೆ ಬಿಟ್ಟು ಕಳುಹಿಸಲಾಗಿದೆ.ಇದು ದೊಡ್ಡ ಅನಾಹುತ ಆಗೋ ಮಾಡಿದೆ. ನಾವು ಎಲ್ಲಾ ಕೆಲಸ ಮಾಡಿದ್ದು ವ್ಯರ್ಥವಾಗಿದೆ.ಎಂದು ಸತೀಶ್ ಅಸಮಾಧಾನ ವ್ತೆಕ್ತ ಪಡಿಸಿದರು.