Breaking News

ಮೌಢ್ಯತೆ ವಿರುದ್ದ ಸತೀಶ ಜಾರಕಿಹೊಳಿ ಮುಖಾಮುಖಿ ಸಮರ

ಬೆಳಗಾವಿ ಸುದ್ಧಿ

ಜಾತ್ಯತೀತ, ಧರ್ಮಾತೀತ, ಸಮಾನತೆ, ವ್ಯಕ್ತಿಸ್ವಾತಂತ್ರ್ಯ, ಭಾತೃತ್ವದಂಥಹ ಮನುಷ್ಯ ಕುಲದ ಶ್ರೇಯೋಭಿವೃಧ್ಧಿಯ ಸಂಗತಿಗಳೆನ್ನಲ್ಲ ಹೊತ್ತಿರುವ ಭಾರತದ ಸಂವಿಧಾನದ ಗೌರವ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧ – ಸಂಸತ್ತನ್ನು ಪ್ರವೇಶಿಸುವ ಬಹುತೇಕ ರಾಜಕಾರಣಿಗಳು ಜಾತಿಯತೆ, ಕೋಮಭಾವ, ಧಾರ್ಮಿಕ ಮೌಢ್ಯಗಳನ್ನು ತಲೆಯಲ್ಲಿ ತುಂಬಿಕೊಂಡೇ ಭಾರವಾಗಿರುತ್ತಾರೆ. ಮನೆಯ ಜಗಲಿಗಳ ಮೇಲೆ, ದೇವಾಲಯಗಳಲ್ಲಿ ಪೂಜೆ ಮಾಡಿ ಭಕ್ತಿ ತೋರಿಸಬೇಕಾದ ಈಜನಪ್ರತಿನಿಧಿಗಳು ವಿಧಾನಸೌಧದಲ್ಲಿನ ತಮ್ಮ ಚೇಂಬರ್‍ಗಳಲ್ಲಿ ಹೋಮ ಹವನದ ಹೊಗೆ ಎಬ್ಬಿಸುವುದನ್ನು ನೋಡುತ್ತೇವೆ. ತೀರ ವೈಯಕ್ತಿಕ ಆಚಾರಣೆಗಳಾದ ಇವೆಲ್ಲವುಗಳನ್ನು ಸಂವಿಧಾನದ ಒಳಗಡೆ ತಂದುಕೊಳ್ಳುವುದರ ಮೂಲಕ ತಮ್ಮ ಮೌಢ್ಯತೆಯನ್ನು ಸಾಬೀತುಪಡೆಸುತ್ತಾರೆ. ಅದೆಷ್ಟೋ ಜನ ಪುಡಾರಿಗಳು ಮುಂಗೈಯಲ್ಲಿ ತೋಳಗಳಲ್ಲಿ ಮತ್ತೇಲ್ಲೆಲ್ಲೋ ಯಾರಾರೋ ಕೊಟ್ಟ ದಾರಗಳನ್ನು ಕಟ್ಟಿಕೊಂಡು ತಮ್ಮ ಧಾರ್ಮಿಕ ಮನೋಧರ್ಮವನ್ನು ಜೋಪಾನವಾಗಿ ಕಾಯ್ದುಕೊಳ್ಳುವುದು ಒಂದು ಸಾಮಾನ್ಯ ಪದ್ಧತಿಯನ್ನಾ ಮಾಡಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಜನರ ಅಮೂಲ್ಯವಾದ ಮತಗಳಿಂದ ಚುನಾಯಿತರಾಗುವ ಜನಪ್ರತಿನಿಧಿಗಳು ಜನತಾ ದೇವಾಲಯದತ್ತ ಬರದೇ ಕಣ್ಣಿಗೆ ಕಾಣದ ದೇವಾಲಯಗಳಿಗೆ ದವಡಾಯಿಸುವವರಿಗೇನೂ ಕಮ್ಮಿಯಿಲ್ಲ. ಮುಹೂರ್ಥ ನೋಡಿ ವಿಧಾನಸೌಧಕ್ಕೆ ಬರುವ, ಕಚೇರಿಯೊಳಗೆ ಕಾಲಿಡುವ, ರಾಹುಕಾಲ ಗುಳಿಕಾಲ ನೋಡಿ ಅಧಿವೇಶನಕ್ಕೆ ಬರುವ ಲಿಂಬೆಹಣ್ಣಿನ ರಾಜಕಾರಣಿಗಳು ಸಾಕಷ್ಟಿದ್ದಾರೆ. ಗಾಲಿಯ ಕೆಳಗೆ ಲಿಂಗೆಹಣ್ಣು ಇಟ್ಟು ಕರಿದಾರ ಕಟ್ಟಿ ಆಕಾಶಕ್ಕೆ ವಿಮಾನ ಹಾರಿಬಿಟ್ಟು ಪುಣ್ಯಾತ್ಮರೂ ಇದ್ದಾರೆ. ಜಾತ್ಯತೀತ, ಧರ್ಮಾತೀತವಾಗಿ ಜನಸೇವೆ ಮಾಡುವ ಇಂಥ ಜನಪ್ರತಿನಿಧಿಗಳೇ ತಮ್ಮ ವೈಯಕ್ತಿಕ ನಂಬಿಕೆಗಳನ್ನು ಈ ಬಗೆಯ ಮೌಢ್ಯಕ್ಕೆ ಇಷ್ಟೊಂದು ಪ್ರಧಾನ್ಯತೆ ನೀಡಿ, ಸಾರ್ವತ್ರಿಕರಣಗೊಳಿಸುವುದು ಮನೋದೌರ್ಬಲ್ಯವನ್ನು ಸೂಚಿಸುತ್ತದೆ. ಆ ಮೂಲಕ ಜನರ ಬದುಕಿನ ದಿಕ್ಕನ್ನೂ ದಿವಾಳಿ ಎಬ್ಬಿಸುತ್ತಾರೆ.

ಇಂಥ ಗೊಡ್ಡ ಆಚರಣೆಗಳಿಗೆಲ್ಲ ತಿಲಾಂಜಲಿ ಹೇಳಿ, ಇವುಗಳ ವಿರುದ್ದ ಪವಿತ್ರವಾದ ಸ್ಮಾಶಾನದಲ್ಲಿ ಸಡ್ಡುಹೊಡೆಯುತ್ತ ಬಂದ ಮೌಢ್ಯವಿರೋಧಿಗೆ ಮತ್ತೊಂದು ಹೆಸರಾದ ರಾಜಕಾರಣಿ ಶಾಸಕ ಸತೀಶ ಜಾರಕಿಹೊಳಿ ಅವರು, ಇಂಥ ಹೋರಾಟದ ಕುಸ್ತಿ ಆಡುವುದರಲ್ಲಿಯೇ ಖುಷಿಕಂಡವರು. ಜನ್ಮ ಆಕಸ್ಮಿಕ; ಸಾವು ಲೇಟಾದರೂ ಖಚಿತ. ಬರುವಾಗ ಬೆತ್ತಲೆಯಾಗಿ ಬಂದ ಮನುಷ್ಯ ಎಲ್ಲವೂ ಇಲ್ಲವೂ ಇಲ್ಲೇ ಬಿಟ್ಟುಹೋಗಬೇಕಾಗುತ್ತದೆ ಎಂದು ಗೋರಿಯಲ್ಲಿಯೂ ಚಡ್ಡಿಬಿಚ್ಚಿ ನಡದಲ್ಲಿ ಚಡ್ಡಿನಾಡಿಯೂ ಉಳಿಸದೇ ಮಣ್ಣಲ್ಲಿ ಮಣ್ಣು ಮಾಡಲಾಗುತ್ತದೆ. ಇಂಥ ಚಿರನಿದ್ರೆಯ ಮೂಲಕ ಬದುಕಿನ ವಾಸ್ತವತೆಯನ್ನು ತಿಳಿಸುವ ಸ್ಮಾಶಾನ ಮೂಲಭೂತವಾದಿಗಳಿಗೆ ಅಪವಿತ್ರ, ಮಡಿ ಎಂದು ಗುರುತಿಸಿಕೊಂಡರೆ, ಸತೀಶ ಜಾರಕಿಹೊಳಿಗೆ ಬದುಕಿನ ಸತ್ಯವನ್ನು ಹೊರಚಲ್ಲುವ ಪವಿತ್ರ, ಪುಣ್ಯದ ಸ್ಥಳವಾಗಿ ಕಂಡಿದೆ. ಹೀಗಾಗಿ, ಮೌಢ್ಯತೆಗಳನ್ನು ಭಸ್ಮಗೊಳಿಸುವ ಮನುಷ್ಯ ಬದುಕಿನ ಸತ್ಯವನ್ನು ಸಾರುವ ಸ್ಮಾಶನವನ್ನು ಜಾರಕಿಹೊಳಿ ಅವರು ವೈಚಾರಿಕೆ ವೇದಿಕೆಯನ್ನಾಗಿರಿಸಿಕೊಂಡ ಭಾರತದ ಏಕೈಕ ರಾಜಕಾರಣಿ! ಮಹಾ ಮಾನವತಾವಾದಿ ಡಾಕ್ಟರ್ ಬಾಬಾಸಾಹೇಬ ಅಂಬೇಡ್ಕರ ಅವರ ಪರಿನಿರ್ವಾಹಣದ ಡಿಸೆಂಬರ್ 6ರಂದು ಇದೇ ವೈಚಾರಿಕ ಭವ್ಯ ವೇದಿಕೆಯ ಮೇಲೆ ಮೌಢ್ಯತೆಯ ವಿರುದ್ದ ವಿಚಾರ ಮಂಥನದ ಸಮರ ಸಾರುತ್ತ ಬಂದಿದ್ದಾರೆ. ಶಾಸಕ ಸತೀಶ ಅವರದು ಕೇವಲ ಮಾತಿನ ಸಮರವಲ್ಲ. ಅದೂ ಕ್ರಿಯಾತ್ಮಕಗೊಳಿಸುವ ಅಂಹಿಸಾತ್ಮಕ ಯುದ್ಧವೂ ಹೌದು. ಸ್ಮಶಾನದ ವೈಚಾರಿಕೆ ವೇದಿಕೆಯ ಮೇಲೆ ನಡೆದ ಚಿಂತಗಳ ಮಂಥನದಲ್ಲಿ ಹೊರಬಂದ ಅಮೃತ್ತ ಕುಡಿದು ನಡೆದು ತೋರಿಸಿದವರು. ಅವರೊಂದಿಗೆ ಸಹಭಾಗೀತ್ವ ಹೊಂದಿದವರು ಎಷ್ಟರಮಟ್ಟಿದೆ ಇದನ್ನು ಅನುಸರಿಸುತ್ತಾರೆ ಗೊತ್ತಿಲ್ಲ ಆದರೆ, ಸತೀಶ ಜಾರಕಿಹೊಳಿ ಮಾತ್ರ ವೈಚಾರಿಕತೆ ನಡೆತೆ ತಮ್ಮ ಜೀವದ ಸಹಜಕ್ರಮವಾಗಿದೆ.

ಇದಕ್ಕೆ ಇನ್ನೊಂದು ಜೀವಂತ ಸಾಕ್ಷಿ ಎನ್ನುವುದಕ್ಕೆ ನಾಳೆ ದಿನಾಂಕ ಜುಲೈ 13ರಂದು ಅದೇ ಬೆಳಗಾವಿ ಸದಾಶಿವ ನಗರದ ರುದ್ರಭೂಮಿಯ ವೈಚಾರಿಕ ನೆಲದಿಂದ ತಮ್ಮ ಮೌಲ್ಯಯುಳ್ಳ ಹೊಸದಾದ ಕಾರಿನ ಪ್ರಯಾಣ ಆರಂಭಿಸಲಿದ್ದಾರೆ.

ಸಾಲಾಸೂಲಾ ಮಾಡಿ ತರುವ ಹೊಸದಾದ ವಾಹನಕ್ಕೆ ನಮ್ಮಲ್ಲಿ ಏನೆಲ್ಲ ಪೂಜೆ, ಪುನಸ್ಕಾರ, ಹಾರ ತುರಾಯಿ, ಗಾಲಿಕೆಳಗೆ ಲಿಂಬೆಹಣ್ಣ ಇಡುವುದು, ಕಾಯಿ ಒಡೆದು ಬೀದಿಗೆ ಚಲ್ಲುವುದು, ಕುಂಕುಮ ಭಂಡಾರ ಲೇಪಿಸುವುದು, ಸಾಲದಕ್ಕೆ ತಾ ತಂದ ಗಾಡಿ ಮಂದಿಗೆಲ್ಲ ಗೊತ್ತಾಲಿ ಎಂದು ಮಂದಿಮ ಹಣೆಗೂ ಖುಷಿಯಿಂದ ನಾಮಾ ಬಳೆಯುವುದು ಇನ್ನೂ ಏನೇನೋ ನಡೆಯುತ್ತವೆ. ಕೆಲವರು ಹೋಮ ಹವನದ ಹೊಗೆಯೂ ಎಬ್ಬಿಸುತ್ತಾರೆ.

ಜೀವನದಲ್ಲಿ ಮನುಷ್ಯನ ಜಾಗೃತಿ, ವಿಚಾರ, ಸಂಯಮತೆ, ತಿಳುವಳಿಕೆ, ವೈಚಾರಿಕ ಪ್ರಜ್ಞೆ ಮುಖ್ಯ ಎಂದು ಬಗೆದು ಅದನ್ನು ತಿಳಿಹೇಳುವ ಸಂದೇಶಕ್ಕಾಗಿ ಸತೀಶ ಜಾರಕಿಹೊಳಿ ಅವರು ತಮ್ಮ ವಾಹವನ್ನು ನಾಳೆ ಸ್ಮಾಶನದಲ್ಲಿ ಸ್ಟಾರ್ಟ್ ಮಾಡಿ ಪ್ರಯಾಣ ಬೆಳೆಸಲಿದ್ದಾರೆ.

ಸದಾಶಿವ ನಗರದ ರುದ್ರಭೂಮಿಯಿಂದ ಹೊರಡುವ ಈ ವೈಚಾರಿಕ ಪಯಣ ಎಲ್ಲಿವರೆಗೆ? ಎಂಬ ಪ್ರಶ್ನೆಯೊಂದು ಕಾಡುತ್ತದೆ. ಈ ಹೊಸ ಕಾರಿನ ಪಯಣ ಹನುಮಾನ ನಗರದ ತಮ್ಮ ಮನೆಯವರಿಗೆ ಅಲ್ಲ. ಅಥವಾ ಗೋಕಾಕ ಗುಡ್ಡದ ಮೇಲಿನ ಮನೆಯವರೆಗೂ ಅಲ್ಲ. ಕಾರಿನ ಪಯಣ ನೊಂದವರ, ಹಸಿದ ಹೊಟ್ಟೆ ಬೆನ್ನಿಗೆ ಮುಟ್ಟಿ ಭೂಮಿ ಮರೆತು ಆಕಾಶ ನೋಡುತ್ತಿರುವವರ ಕಡೆಗೆ.ಎನ್ನುವ ಮಹತ್ವದ ಸಂದೇಶ ಸಾರುವದಕ್ಕಾಗಿಯೇ ಸತೀಶ್ ಜಾರಕಿಹೊಳಿ ರುದ್ರಭೂಮಿಯಿಂದಲೇ ಜನ ಸಾಮಾನ್ಯರ ಕಡೆಗೆ ತಮ್ಮ ಪಯಣವನ್ನು ನಾಳೆಯಿಂದ ಶುರು ಮಾಡಲಿದ್ದಾರೆ.

ದಲಿತ, ಬಡವ, ಅಸಹಾಯಕರಿಗೆ ಇಂದು ಯಾರೂ ಇಲ್ಲದೆ ಅನಾಥರಾಗಿದ್ದಾರೆ. ಅಂಬೇಡ್ಕರ ನಂತರ ಈ ಸಮುದಾಯಕ್ಕೆ ಸಮರ್ಥ ನಾಯಕ ಇದುವರೆಗೆ ದಕ್ಕಿಲ್ಲ. ಅದೇನಾದರೂ ಅಷ್ಟಿಷ್ಟು ದಕ್ಕಿದ್ದರೆ ಡಾ. ಬಿ.ಆರ್. ಅಂಬೇಡ್ಕರ ಅವರು ಉಣದೇ ಬಿಟ್ಟುಹೋದ ತಟ್ಟೆಯೊಳಗಿನ ಅಣ್ಣ. ಇಂದು ಶೋಷಿತ ಸಮುದಾಯ ಮತ್ತೊಮ್ಮೆ ವ್ಯವಸ್ಥಿತವಾಗಿ ಶೋಷಣೆಗೆ ಗುರಿಯಾಗುತ್ತಿದೆ. ಜಾತಿಯತೆ, ಅಸ್ಪøಶ್ಯತೆಯ ಸಾಂಪ್ರದಾಯಿಕ ಶೋಷಣೆಯ ಜೊತೆಗೆ ವರ್ಗ ವ್ಯವಸ್ಥೆಯ ನೂತನ ಶೋಷಣೆಗೆ ಒಳಗಾಗಿ ಬದುಕು ಅನಾಥವಾಗಿ ಬಿದ್ದಿದೆ. ಹಸಿದ ಹೊಟ್ಟೆಗಳು ರೇಷನ್ ಅಕ್ಕಿಗಾಗಿ ಇನ್ನೂ ಭಿಕ್ಷೆ ಬೇಡುತ್ತಿವೆ. ದುಡಿಯುವ ಕೈಗಳಿಗೆ ಉದ್ಯೋಗಾವಕಾಶಗಳು ತಪ್ಪಿಹೋಗಿ ಸಮುದಾಯ ಭವನದ ಕಟ್ಟೆಗಳು ತಾಣಗಳಾಗುತ್ತಿವೆ. ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದರೆ ಬೀದಿ ಹೆಣಗಳಾಗುತ್ತಿದ್ದಾರೆ. ಮರ್ಯಾದೆಯಿಂದ, ಸ್ವಾಭಿಮಾನದಿಂದ ಬದುಕುವ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ ಮೆರವಣಿಗೆ ಮಾಡುವ ಅಮಾನವೀಯ ಕೃತ್ಯ ಇನ್ನೂ ನಿಂತಿಲ್ಲ. ಸತೀಶ ಜಾರಕಿಹೊಳಿ ಅವರು ಈ ಬಗೆಯ ಬದುಕನ್ನು ತೀರ ಹತ್ತಿರದಿಂದ ಕಂಡಿದವರು; ಅನುಭವಿಸಿದವರು. ಸ್ಮಶಾನದಿಂದ ಹೊರಟಿರುವ ಅವರ ಕಾರು ಈ ಸ್ಮಶಾನಮೌನದತ್ತ ಪ್ರಯಾಣ ಬೆಳೆಸುವಂತಾಗಲಿ ಎಂದು ಅವರ ವೈಚಾರಿಕೆ ಹೋರಾಟಕ್ಕೆ ಬೆಳಗಾವಿ ಸುದ್ಧಿ ಡಾಟ್ ಕಾಂ ಶುಭ ಕೋರುತ್ತದೆ.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *