ಬೆಳಗಾವಿ-ಯಾವಾಗ ಲಾಕ್‌ಡೌನ್ ಮಾಡಬೇಕಿತ್ತೋ ಆಗ ಮಾಡಲಿಲ್ಲ ನಿಜವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ಲಾಕ್‌ಡೌನ್ ಮಾಡಬೇಕಿತ್ತು,ಈಗ ಕೊರೊನಾ ಹರಡಿ ಬಿಟ್ಟಿದೆ ಈಗ ಲಾಕ್‌ಡೌನ್ ಮಾಡಿ ಏನು ಪ್ರಯೋಜನ? ಎಂದು ಗೋಕಾಕ್‌ನಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನೆ ಮಾಡಿದ್ದಾರೆ.
ಗೋಕಾಕಿನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಲಾಕ್‌ಡೌನ್ ನಿಂದ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ, ಈಗ ಮೂರು ತಿಂಗಳು ನೋಡಿದ್ದೀವಿ, ಈಗ ಮತ್ತೆ ಲಾಕ್‌ಡೌನ್ ಮಾಡುವುದರಿಂದ ಏನೂ ಪ್ರಯೋಜನ ಆಗಲ್ಲ, ಕೊರೊನಾ ನಿಯಂತ್ರಣ ಮಾಡೋದು ಯಾರ ಕೈಯಲ್ಲೂ ಇಲ್ಲ,ಅದು ಎಲ್ಲರಿಗೂ ಬರ್ತಾನೇ ಇದೆ,ಯಾರಿಗೆ ಸೋಂಕು ಬರುತ್ತೋ ಅವರನ್ನು ನಿಯಂತ್ರಣ ಮಾಡಬೇಕು, ಗೋಕಾಕ್ ತಾಲೂಕಿನ ಒಂದೊಂದು ಊರಲ್ಲಿ ಒಂದೊಂದು ಪ್ರಕರಣ ಇದೆ, ಗೋಕಾಕ್‌ನಂತಹ ದೊಡ್ಡ ತಾಲೂಕು ನಿಯಂತ್ರಣ ಮಾಡೋದು ತುಂಬಾ ಕಷ್ಟ, ಆದೇಶ ಮಾಡೋದು ತುಂಬಾ ಸುಲಭ, ವ್ಯತರಿಕ್ತ ಪರಿಣಾಮ ಬಹಳ ಆಗುತ್ತೆ ಎಂದು ಸತೀಶ್ ಜಾರಕಿಹೊಳಿ ಲಾಕ್ ಡೌನ್ ಹೇರಿಕೆಯನ್ನು ವಿರೋಧಿಸಿದ್ದಾರೆ.
ರಾಜ್ಯ ಸರ್ಕಾರ, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು,ಸಾಮಾಜಿಕ ಅಂತರ ಕಾಯ್ದುಕೊಳ್ಳೋ ಬಗ್ಗೆ ಜನರು ಮುಂಜಾಗ್ರತೆ ತಗೆದುಕೊಳ್ಳಬೇಕು,
ಬೆಳಗಾವಿ ಜಿಲ್ಲೆಯ ಸಚಿವರು ತಮ್ಮ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ ಹಿಂದಿನಿಂದಲೂ ಸಚಿವರು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತ ಆಗಿದ್ದಾರೆ,ಹೀಗಾಗಿ ಬೆಳಗಾವಿ ಜಿಲ್ಲಾಡಳಿತ ನಿಯಂತ್ರಣ ತಪ್ಪಿದೆ,ಅಧಿಕಾರಿಗಳದ್ದೊಂದು, ಮಂತ್ರಿಗಳದ್ದೊಂದು ನಿರ್ಧಾರ ಆಗಬಾರದು, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಕುಳಿತು ಸಚಿವರು ಸಭೆ ಮಾಡಬೇಕು, ಎಲ್ಲರೂ ಸೇರಿ ಸಾಮೂಹಿಕ ನಿರ್ಧಾರ ಕೈಗೊಂಡರೆ ಒಳ್ಳೆಯದಾಗುತ್ತದೆ ಎಂದು ಸತೀಶ್ ಜಾರಕಿಹೊಳಿ ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.
ಬಿಮ್ಸ್ ಆಸ್ಪತ್ರೆಯ ಒಂದೇ ಕಟ್ಟಡದಲ್ಲಿ ಕೋವಿಡ್, ಓಪಿಡಿ ವಾರ್ಡ್ ವಿಚಾರವಾಗಿ ಮಾತನಾಡಿದ ಅವರು ಬೇರೆ ಸರ್ಕಾರಿ ಕಟ್ಟಡದಲ್ಲಿ ಪರ್ಯಾಯವಾಗಿ ಆಸ್ಪತ್ರೆ ನಿರ್ಮಿಸಬೇಕು, ಕ್ವಾರಂಟೈನ್ ನಿಯಮ ಬಗ್ಗೆ ಮೊದಲಿನಿಂದಲೂ ಗೊಂದಲವಿದೆ, ಕ್ವಾರಂಟೈನ್ ನಿಯಮ ಒಂದು ದಿನ 7 ದಿನ ಅಂತಾರೆ, 14 ದಿನ ಅಂತಾರೆ, ಒಂದು ದಿವಸ ನೇರವಾಗಿ ಬಿಡಿ ಅಂತಾರೆ, ಪಾಸಿಟಿವ್ ಬಂದ ಮೇಲೆ ಮನೆಯವರನ್ನೆಲ್ಲಾ ಒಂದೆಡೆ ಕೂಡಿ ಹಾಕ್ತಾರೆ,ಮೊದಲಿನಿಂದಲೂ ಕ್ವಾರಂಟೈನ್ ನಿಯಮ ಬಗ್ಗೆ ಗೊಂದಲ ಇದ್ದೇ ಇದೆ ಎಂದು ಜಾರಕಿಹೊಳಿ ಅಸಮಾಧಾನ ವ್ಯೆಕ್ತ ಪಡಿಸಿದರು. ಕೋವಿಡ್ ವಿಚಾರದಲ್ಲಿ ಭ್ರಷ್ಟಾಚಾರ ಆದ ಬಗ್ಗೆ ದಾಖಲೆ ಸಮೇತ ಕಾಂಗ್ರೆಸ್ ಬಿಡುಗಡೆ ಮಾಡಿದೆ.ಮಾರ್ಕೇಟ್‌ನಲ್ಲಿ ಹತ್ತು ರೂಪಾಯಿ ಇದ್ದದ್ದು 100, 200, 300 ರೂಗೆ ಖರೀದಿ ಮಾಡಲಾಗಿದೆ. ಆಶಾ ಕಾರ್ಯಕರ್ತರಿಗೆ ಅಗತ್ಯವಸ್ತು ಪೂರೈಕೆ ಮಾಡಬೇಕು, ಸಿಎಂ ಬಿಎಸ್‌ವೈ ಬಳಿ 300 ಕೋಟಿ ರೂಪಾಯಿ ಡೊನೇಷನ್ ಕಲೆಕ್ಟ್ ಆಗಿದೆ,ಆ ದುಡ್ಡಿನಲ್ಲಿ ಅಗತ್ಯ ಸಾಮಗ್ರಿ ಖರೀದಿ ಮಾಡಿ ವಿತರಿಸಬೇಕು, ಕೋವಿಡ್ ನಿಯಂತ್ರಣ ಬಗ್ಗೆ ಕಾಂಗ್ರೆಸ್ ಪಕ್ಷ ಸಲಹೆ ಕೊಡುತ್ತ ಬಂದಿದೆ, ಆದರೂ ಸಹ ಸರ್ಕಾರ ತಪ್ಪು ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡ್ತಿಲ್ಲ, ಹೀಗಾಗಿ ವ್ಯತರಿಕ್ತ ಪರಿಣಾಮ ನೋಡುತ್ತಿದ್ದೇವೆ ಎಂದ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯೆಕ್ತ ಪಡಿಸಿದರು.