ಬೆಳಗಾವಿ- ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸತೀಶ್ ಜಾರಿಕಿಹೋಳಿ ಲಕ್ಷ್ಮೀ ಹೇಬ್ಬಾಳ್ಕರ್ ವಿರುದ್ದ ವಾಗ್ದಾಳಿ ನಡೆಸಿದರು. ದೆಹಲಿಯಲ್ಲಿ ಒಬ್ಬ ನಾಯಕ ಬೆಂಗಳೂರಲ್ಲಿ ಒಬ್ಬ ನಾಯಕ, ಬೆಳಗಾವಿಯಲ್ಲಿ ಒಬ್ಬ ನಾಯಕನನ್ನು ಇಟ್ಟು ಕೊಂಡು ರಾಜಕೀಯ ಮಾಡಿದಂತೆ ಈ ಸಾರಿ ರಾಜಕೀಯ ಮಾಡಲು ಆಗಲ್ಲಾ. ನಿವು ನೂರು ರೂಪಾಯಿಯ ೨೦ ಸಾವಿರ ಸೀರೆಯನ್ನು ಹಂಚಿದರೆ ಜನರು ಮತ ಹಾಕಲ್ಲಾ . ನನ್ನಲ್ಲಿ ಎಲ್ಲವೂ ಇದೆ ನೀವು ನೂರು ರೂಪಾಯಿ ಸೀರೆ ಹಂಚಿದರೆ ನಾನು ಎರಡು ನೂರು ರೂಪಾಯಿ ಸೀರೆ ಹಂಚುತ್ತೆನೆ ನೋಡತಾ ಇರಿ ಎಂದು ಪರೋಕ್ಷವಾಗಿ ಲಕ್ಷ್ಮಿ ಹೇಬ್ಬಾಳ್ಕರ್ ಅವರಿಗೆ ಸತೀಶ್ ಜಾರಕಿಹೋಳಿ ಟಾಂಗ್ ಕೊಟ್ಟರು. ಎ.ಐ.ಸಿ.ಸಿ ಕಾರ್ಯದರ್ಶಿ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕಾಂಗ್ರೇಸ್ ಘಟಕ ಇಲ್ಲಿಯೂ ಒಂದು ಸಾರಿ ಸತೀಶ್ ಜಾರಕಿಹೋಳಿ ಅವರನ್ನು ಸನ್ಮಾನ ಮಾಡದ ಹಿನ್ನಲೆ ಇಂದು ಸತೀಶ್ ಜಾರಕಿಹೋಳಿ ಅವರ ಅಭಿಮಾನಿಳು ಸನ್ಮಾನ ಕಾರ್ಯಕ್ರಮ ಹಮ್ಮಕೊಂಡಿದ್ದರು ಇಲ್ಲಿ ಮಾತನಾಡಿದ ಸತೀಶ್ ಜಾರಕಿಹೋಳಿ ಲಕ್ಷ್ಮೀ ಹೇಬ್ಬಾಳ್ಕರ್ ವಿರುದ್ದ ಹರಿಹಾಯ್ದರು. ಇದರಿಂದ ಬೆಳಗಾವಿ ಕಾಂಗ್ರೇಸ್ ಅಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತಿ.
ನನ್ನ ಕೆಲಸ ನೋಡಿ ಕೇಂದ್ರದಲ್ಲಿ ಎ.ಐ ಸಿ.ಸಿ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಸ್ಥಾನ ಕೊಟ್ಟಿದ್ದಾರೆ.
ಅಲ್ಲಿಯೂ ಕೂಡಾ ಉತ್ತಮ ರೀತಿಯಾಗಿ ಕೆಲಸ ಮಾಡುತ್ತೇನೆ.
ಬೆಳಗಾವಿ ಹೆಸರು ತರುತ್ತೆನೆ. ಅಧಿಕಾರ ಶಾಶ್ವತವಾದುದಲ್ಲ ಜನರ ವಿಶ್ವಾಸ ಮುಖ್ಯ.
ಕಳೆದ ಇಪ್ಪತ್ತು ವರ್ಷಗಳಿಂದ ಡಾ. ಅಂಬೇಡ್ಕರ್ ವಿಚಾರ ತತ್ವಗಳನ್ನು ಸಿದ್ದಾಂತವನ್ನ ಹೇಳತ್ತಾ ಬಂದಿದ್ದೇನೆ. ೮೦೦ ನೂರು ವರುಷದ ನಂತರ ಲಿಂಗಾಯತರು ಕಾಂಗ್ರಸ್ ಕಡೆ ಬಂದಿದ್ದಾರೆ ಎಂದರು.
ಕಳೆದ ೨೦ ವರ್ಷಗಳಿಂದ. ಒಂದು ಲಕ್ಷ ರೂಪಾಯಿ ಅನಾಥ ಆಶ್ರಮಕ್ಕೆ ನೀಡುತ್ತಿದ್ದೆನೆ.ರಾಜಕೀಯ ಲಾಭಕ್ಕಾಗಿ ಈಗಾಲೇ ಸೀರೆ ಹಂಚಲು ಪ್ರವೃತ್ತಿ ಶುರುವಾಗಿದೆ .ಆದ್ರೆ ನಮ್ಮ ಹೂಡಿಕೆ ಸಮಾಜದ ಮೇಲೆ ಇದೆ. ನಾವು ಇದುವರೆಗೆ ಅನಾಥರಿಗೆ ಹಂಚಿದ ೨೦ ಲಕ್ಷ ರೂಪಾಯಿ ನೋಡಿದ್ರೆ
೨೦ ಸಾವಿರ ಸೀರೆ ಹಂಚಿದಂತಾಗುತ್ತದೆ ಎಂದ ಖಾರವಾಗಿ ಪ್ರತಿಕ್ರೀಸಿದರು.