ಬೆಳಗಾವಿ- ಟೀಕೆಗಳು ಸಾಯುತ್ತವೆ ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ,ಮಾಡಿದ ಕೆಲಸಗಳೇ ಸಾಧಕನ ಸಾಧನೆಯ ಪಾಠ ಹೇಳುತ್ತವೆ ,ಎನ್ನುವದಕ್ಕೆ ಗೋಕಾಕ ತಾಲ್ಲೂಕಿನ ಅರಭಾಂವಿಯಲ್ಲಿ ಸ್ಥಾಪನೆಗೊಂಡು ಉದ್ಘಾಟನೆಗೆ ರೆಡಿಯಾಗಿರುವ ಜಿಟಿಟಿಸಿ ಕೇಂದ್ರವೇ ಅದಕ್ಕೆ ಸಾಕ್ಷಿಯಾಗಿದೆ. Govt tools room and training centre
ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸಣ್ಣ ಕೈಗಾರಿಕಾ ಸಚಿವರಾಗಿದ್ದಾಗ ರಾಜ್ಯದ,ಕೊಪ್ಪಳ ಉಡುಪಿ ಸೇರಿದಂತೆ ನಾಲ್ಕು ಜಿಟಿಟಿಸಿ ಕೇಂದ್ರಗಳನ್ನು ಮಂಜೂರು ಮಾಡಿದ್ದರು,ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿಯ ವಿದ್ಯಾರ್ಥಿಗಳಿಗೆ ಅನಕೂಲವಾಗಲೆಂದು ಬೆಳಗಾವಿ ಜಿಲ್ಲೆಗೆ ಹೆಚ್ಚುವರಿಯಾಗಿ ಅರಬಾಂವಿಯಲ್ಲಿ ಜಿಟಿಟಿಸಿ ಕೇಂದ್ರವನ್ನು ಮಂಜೂರು ಮಾಡಿ 20 ಕೋಟಿ ರೂ ಅನುದಾನ ಕಲ್ಪಿಸಿದ್ದರು .
ಅವರು ಮಂತ್ರಿಯಾಗಿದ್ದಾಗ ಮಂಜೂರು ಮಾಡಿದ ಹೈಟೆಕ್ ಜಿಟಿಟಿಸಿ ಕೇಂದ್ರ ಈಗ ರೆಡಿಯಾಗಿದ್ದು ಲೋಕಾರ್ಪಣೆಗೆ ಸಜ್ಜಾಗಿದೆ.
ಸತೀಶ್ ಜಾರಕಿಹೊಳಿ ಅವರು ಇಂದು ಅರಭಾಂವಿಯಲ್ಲಿ ಸ್ಥಾಪನೆಗೊಂಡಿರುವ ಜಿಟಿಟಿಸಿ ಕೇಂದ್ರಕ್ಕೆ ಭೇಟಿ ನೀಡಿ,ಕಾಮಗಾರಿಯನ್ನು ಪರಶೀಲಿಸಿ ಸಂತಸ ವ್ಯೆಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿಯ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಅವರ ಮನೆ ಬಾಗಿಲಿಗೆ ಜಿಟಿಟಿಸಿ ಕೇಂದ್ರವನ್ನು ಸ್ಥಾಪಿಸಿದ್ದೇವೆ,ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಸತೀಶ್ ಜಾರಕಿಹೊಳಿ ಕರೆ ನೀಡಿದರು.