ಬೆಳಗಾವಿ-ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಿರೀಯಸ್ ರಾಜಕಾರಣಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಖಾಸಗಿ ಸುದ್ಧಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಹುಕ್ಕೇರಿ ವಿರುದ್ಧ ವಾಗ್ದಾಳಿ ಮಾಡಿದ ಅವರು, ಕಾಂಗ್ರೆಸ್ ನಲ್ಲಿ ಇದ್ರೂ ಒಳ್ಳೆಯದು ಹೋದ್ರೂ ಒಳ್ಳೆಯದು,ನಾವೇನು ಕಾಂಗ್ರೆಸ್ ಹೈಕಮಾಂಡ ಮುಂದೆ ಹೊರಹಾಕಿ, ಇಟ್ಟುಕೊಳ್ಳಿ ಅಂತ ಹೇಳುವುದಿಲ್ಲ. ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ಪ್ರಕಾಶ ಹುಕ್ಕೇರಿ ಹೇಳಿಕೆ ವಿಚಾರ
ಈ ಹೇಳಿಕೆ ಪ್ರಕಾಶ ಹುಕ್ಮೇರಿ ಅವರ ವ್ಯಕ್ತಿತ್ವ ಪಕ್ಷ ನಿಷ್ಠೆ ತೋರಿಸುತ್ತದೆ ಅಧಿಕಾರದಿಂದ ವಂಚಿತರಾಗಿ ಹತಾಶಯರಾಗಿ ಈ ರೀತಿ ಹೇಳಿಕೆ ನೀಡರಬಹುದು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಿಜೆಪಿಗೆ ಹೋಗಲು ಮುಕ್ತ ಅವಕಾಶವಿದೆ.ಇದೇ ಕಾರಣಕ್ಕಾಗಿ ಬೇರೆಯವರ ಮೇಲೆ ಆರೋಪ ಮಾಡುವ ಅವಶ್ಯಕತೆಯಿಲ್ಲ ಸ್ವಂತ ನಿರ್ಣಯ ತೆಗೆದುಕೊಳ್ಳಬೇಕು.
ಅನುದಾನ ಬಂದಿಲ್ಲ ಅಂತ ಯಾರಾದ್ರೂ ಪಕ್ಷ ಬಿಡ್ತಾರಾ..? ಬಿಜೆಪಿ-ಜೆಡಿಎಸ್ ಶಾಸಕರ ಅನುದಾನ ಬಂದಿಲ್ಲ. ಕೆಲವರು ತಮ್ಮ ಪ್ರಭಾವ ಬೆಳಸಿ ಅನುದಾನ ತಂದಿದ್ದಾರೆ.ಪ್ರಭಾವ ಬೆಳೆಸುವುದರಲ್ಲಿ ರಾಜ್ಯದಲ್ಲಿಯೇ ನಂ.1ಆಗಿರುವ ಪ್ರಕಾಶ ಹುಕ್ಕೇರಿ ಸುಮ್ಮನಾಗಿರುವುದೇಕೆ? ಪ್ರಕಾಶ ಹುಕ್ಕೇರಿ ಕಳೆದ 30ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಈಗ ಇದ್ದಕ್ಕಿದ್ದಂತೆ ಬಿಜೆಪಿ ಮೇಲೆ ಪ್ರೀತಿ ಬಂದಿದೆ ಎಂದು ಸತೀಶ್ ಪ್ರಕಾಶ್ ಹುಕ್ಕೇರಿ ವಿರುದ್ಧ ಕಿಡಿಕಾರಿದ್ದಾರೆ.
ಪ್ರಕಾಶ ಹುಕ್ಕೇರಿ ಪಕ್ಷದಿಂದ ಒಂದು ಹೆಜ್ಜೆ ಹೊರಗೆ ಇಟ್ಟಿರುವಾಗ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ
ಪ್ರಕಾಶ ಹುಕ್ಕೇರಿ ವಿಚಾರದಲ್ಲಿ ಪಕ್ಷದ ಹೈಕಮಾಂಡ ತೀರ್ಮಾಣ ಮಾಡುತ್ತದೆ.ನಾವು ಪ್ರಕಾಶ ಹುಕ್ಕೇರಿ ಅವರನ್ನು ಇಟ್ಟುಕೊಳ್ಳಿ, ಹೊರಹಾಕಿ ಅಂತ ನಾವು ಹೇಳುವುದಿಲ್ಲ ಈ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು.