ಗುಂಡಿನಿಂದ ಪ್ರಗತಿಪರರ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ..

ಗುಂಡಿನಿಂದ ಸಾಮಾಜಿಕ ನ್ಯಾಯದ ಪರ,ಕೋಮುವಾದದ ವಿರುದ್ದ ಹೋರಾಟ ನಿಲ್ಲಿಸಲು ಸಾದ್ಯವಿಲ್ಲ.ಗುಂಡಿನಿಂದ ಯಾರೊಬ್ಬರೂ ವಿಚಾರಗಳನ್ನು ಕೊಲ್ಲಲು ಸಾಧ್ಯವೇ ಇಲ್ಲ ಗೌರಿ ಲಂಕೇಶ ನಮ್ಮನ್ನು ಬಿಟ್ಟು ಅಗಲಿರಬಹುದು ಆದರೆ ಅವರ ವಿಚಾರಗಳು ನಮ್ಮ ಜೊತೆಗಿವೆ ಎಂದು
ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೋಳಿ ಹೇಳಿದ್ದಾರೆ

ಗೌರಿ ಲಂಕೇಶ ಹತ್ಯೆಯಿಂದ ಪ್ರಗತಿಪರ ಹೋರಾಟಕ್ಕೆ ನಷ್ಟವಾಗಿದೆ.
ಪ್ರಗತಿಪರ ಹೋರಾಟಗಾರನನ್ನ ಗುರಿಯಾಗಿಸಿ ಹತ್ಯೆಗಳು ನಡೆಯುತ್ತಿವೆ.
ಗೌರಿ ಲಂಕೇಶ ಅವರ ಸ್ಥಾನವನ್ನ ಬೇರೆಯವರು ತುಂಬುತ್ತಾರೆ.
ಮನುವಾದಿಗಳು ಈ ದೇಶದಲ್ಲಿ ಬಹಳಷ್ಟು ವಿಚಾರವಾದಿಗಳನ್ನ ಹತ್ಯೆ ಮಾಡಿದ್ದಾರೆ.
ಈ ಮೂಲಕ ಪ್ರಗತಿಪರ ದ್ವನಿ ಅಡಗಿಸಲು ಪ್ರಯತ್ನ ಮಾಡಿದ್ದಾರೆ.
ಗೌರಿ ಲಂಕೇಶ ಅವರ ಕುಟುಂಬದ ಜೊತೆ ನಾವಿದ್ದೇವೆ.
ಅವರು ನಮ್ಮ ಜೊತೆ ಇಲ್ಲದಿದ್ದರೂ ಅವರ ಹೋರಾಟ ಮುಂದುವರೆಯುತ್ತದೆ.
ಈ ನಾಡಿನ ಪ್ರಗತಿಪರ ಚಿಂತಕರು ಮುಂದುವರೆಸುತ್ತಾರೆ. ಎಂದು ಪ್ರಗತಿಪರ ಚಿಂತಕ ಸತೀಶ ಜಾರಕಿಹೊಳಿ ಹೇಳಿದ್ದಾರೆ
ಗೌರಿ ಲಂಕೇಶ ಹತ್ಯೆಯನ್ನ ನಾನು
ಖಂಡಿಸುತ್ತೇನೆ ಎಂದು ಸತೀಶ ಜಾರಕಿಹೋಳಿ ಹೇಳಿದ್ದಾರೆ

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *