ಬೆಳಗಾವಿ-ವಿಧಾನಸಭೆ ಚುನಾವಣೆ ಮುಗಿಯುವ ವರೆಗೂ ಬೆಳಗಾವಿ ಮಹಾಪೌರ,ಉಪಮಹಾಪೌರ ಚುನಾವಣೆ ನಡೆಯೋದಿಲ್ಲ ಅಲ್ಲಿಯವರೆಗೂ ಸ್ಥಳೀಯ ಇಬ್ಬರು ಶಾಸಕರು ಆ ಸ್ಥಾನದ ಜವಾಬ್ದಾರಿ ನಿರ್ವಹಿಸುತ್ತಾರೆ.ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ,ಪಕ್ಕದ ಹುಬ್ಬಳ್ಳಿಯಲ್ಲಿ ಮೇಯರ್ ಉಪ ಮೇಯರ್ ಚುನಾವಣೆ ಆಗಿದೆ.ನಮ್ಮಲ್ಲಿ ಏಕೆ ಆಗುತ್ತಿಲ್ಲ,ಎನ್ನುವ ಚರ್ಚೆ ಬಿಜೆಪಿಯಲ್ಲೇ ಶುರುವಾಗಿದೆ.ಎಂಎಲ್ಎ ಇಲೆಕ್ಷನ್ ಆಗುವವರೆಗೂ ಬಹುಶ ಬೆಳಗಾವಿ ಮೇಯರ್ ಉಪ ಮೇಯರ್ ಚುನಾವಣೆ ಆಗೋದಿಲ್ಲ,ಅಲ್ಲಿಯವರೆಗೂ ಇಬ್ಬರು ಶಾಸಕರು ಸಿಂಗಲ್ ಹ್ಯಾಂಡೇಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಗಸ್ಟ್ 9 ರಂದು ಅವರಿಗೆ ಅಧಿಕೃತವಾಗಿ ಗೌವ್ನ ಕೊಟ್ಟು ಬಿಡ್ತೀವಿ, 15 ಕ್ಕೆ ಅವರೇ ಧ್ವಜ ಹಾರಿಸಲಿ ಎಂದು ಸತೀಶ್ ಜಾರಕಿಹೊಳಿ ಲೇವಡಿ ಮಾಡಿದ್ರು.
ಪಕ್ಕದಲ್ಲೇ ಕುಳಿತಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಕೂಡಲೇ ಎರಡು ಗೌವ್ನ ವ್ಯವಸ್ಥೆ ಮಾಡಿ ಬಿಡಿ, 9 ರಂದು ಎರಡೂ ಗೌವ್ನ ಗಳನ್ನು ಅವರಿಗೆ ಕಳಿಸೋಣ,ಎಂದು ಸೂಚನೆ ನೀಡಿದ ಅವರು,ಬೆಳಗಾವಿ ಮೇಯರ್ ಉಪ ಮೇಯರ್ ಚುನಾವಣೆಯ ವಿಳಂಭ ಧೋರಣೆಯನ್ನು ಟೀಕಿಸಿದರು.