ಬೆಳಗಾವಿ- ಬೆಳಗಾವಿಯ ರಾಜಕೀಯ ಇತಿಹಾಸದಲ್ಲಿಯೇ ಎಂದೆಂದಿಗೂ ಉಹಿಸಲಾಗದ ಕಂಪ್ರೋಮೈಸ್ ಪಾಲಿಟಿಕ್ಸ್ ನಡೆದಿದೆ. ಕನ್ನಡಿಗನಿಗೆ ಅಧಿಕಾರ ಕೊಡಿಸಲು ಎಂದಿಗೂ ಒಂದಾಗದ ಕಾಂಗ್ರೆಸ್ ಮತ್ತು ಬಿಜೆಪಿ ನಾಡವಿರೋಧಿ ಎಂಈಎಸ್ ಗೆ ಅಧಿಕಾರ ಕೊಡಿಸಲು ಒಂದಾಗಿರುವದಕ್ಕೆ ಡರ್ಟಿ ಪಾಲಿಟಿಕ್ಸ ಎನ್ನಬೇಕೋ ಮತ್ಯಾವ ಪಾಲಿಟಿಕ್ಸ್ ಎನ್ನಬೇಕೋ.? ತಿಳಿಯುತ್ತಿಲ್ಲ
ಬೆಳಗಾವಿ ಎಪಿಎಂಸಿ ಎಂಈಎಸ್ ನಿಂದ ಮುಕ್ತವಾಗಬಹುದು ಎನ್ನುವದು ಎಲ್ಲರ ನೀರಿಕ್ಷೆಯಾಗಿತ್ತು ಆದರೆ ಸೇಡಿನ ರಾಜಕಾರಣ ಅ ಪವಿತ್ರ ಮೈತ್ರಿಯ ಕಾರಣದಿಂದಾಗಿ ಅಂದುಕೊಂಡಂತೆ ಯಾವುದು ನಡೆಯಲಿಲ್ಲ
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಕಾರಣ ಬೆಳಗಾವಿ ಎಪಿಎಂಸಿಗೆ ಅಪ್ಪಳಿಸಿ ಕಾಂಗ್ರೆಸ್ ಪಕ್ಷದ ಆಂತರಿಕ ಜಗಳ ಬೀದಿಗೆ ಬಂದಂತಾಯಿತು ಸತೀಶ ಜಾರಕಿಹೊಳಿ ಅವರ ನಡೆ ಅನೇಕ ಅನುಮಾನ ಗಳಿಗೆ ಉತ್ತರ ನೀಡಿತು
ಸತೀಶ ಜಾರಕಿಹೊಳಿ ಅವರು ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಂಡಿಲ್ಲ ಎನ್ನುವದು ಖಾತ್ರಿಯಾಯಿತು ಎಂಈಎಸ್ ಗೆ ಅಧಿಕಾರ ಕೊಡಿಸಲು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿತೋ ಅಥವಾ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಎಂಈಎಸ್ ನ ಶಿವಾಜಿ ಸುಂಠಕರ ಅವರ ಜೊತೆ ಸೇರಿಕೊಳ್ಳುವಂತೆ ಶಾಸಕ ಸಂಜಯ ಪಾಟೀಲರಿಗೆ ಬಿಜೆಪಿ ಹೈಕಮಾಂಡ್ ಅನುಮತಿ ನೀಡಿತೋ ಎನ್ನುವದು ಕಾಲವೇ ಉತ್ತರಿಸಬೇಕು
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ,ಸಂಜಯ ಪಾಟೀಲ,ಮತ್ತು ಶಿವಾಜಿ ಸುಂಠಕರ ಅವರು ಸೇರಿಕೊಂಡು ರಾಜಕೀಯ ಬಲೆ ರಚಿಸಿ ಈ ಬಲೆಯಲ್ಲಿ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅತಾರಕಕ್ಕೇರಿದೆ
ವ ತಂತ್ರ ರೂಪುಸಿದ್ದಾರೆ ಎನ್ನುವದು ಬೆಳಗಾವಿ ಎಪಿಎಂಸಿ ಚುನಾವಣೆಯಲ್ಲಿ ಖಾತ್ರಿಯಾಗಿದೆ
ಬೆಳಗಾವಿ ಎಪಿಎಂಸಿ ಚನಾಣೆಯಲ್ಲಿ ಈ ತ್ರೀಮೂರ್ತಿಗಳು ಒಂದಾಗಿ ಹೋರಾಟ ನಡೆಸಿದರೂ ಇಲ್ಲಿ ಸಮಬಲದ ಹೋರಾಟ ನಡೆದಿದೆ ಅದೃಷ್ಠ ಸತೀಶ ಜಾರಕಿಹೊಳಿ ಅವರಿಗೆ ಅದೃಷ್ಟ ಒಲಿದಿದೆ ಜೊತೆಗೆ ಸತೀಶ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ನಡುವಿನ ರಾಜಕೀಯ ಗುದ್ದಾಟ ತಾರಕಕ್ಕೇರಿದೆ
ಸತೀಶ ಜಾರಕಿಹೊಳಿ ಅವರ ನಡೆ ಬೆಳಗಾವಿ ಜಿಲ್ಲೆಯ ರಾಜಕೀಯ ದಿಕ್ಸೂಚಿ ಬದಲಿಸುತ್ತದೆಯೋ ಅಥವಾ ಸತೀಶ ಅವರು ತಮ್ಮ ದಿಕ್ಸೂಚಿ ಬದಲುಸುತ್ತಾರೆಯೋ ಎನ್ನುವದನ್ನು ನಾವು ಕಾದು ನೋಡ ಬೇಕು