ಊರ ಹೊರಗ ಪಾಯಿಖಾನೆ ಕಟ್ಟದ್ರಲ್ಲೋ…ಜೀವ ಹಿಂಡಿದ್ರಲ್ಲೋ….ಗೋಕಾಕಿನಲ್ಲಿ ಹೊಸ ಸಾಂಗ್ ಬಿಡುಗಡೆ…!!!
ಬೆಳಗಾವಿ- ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯುವ ಜೊತೆಗೆ ವಿಡಿಯೋ ಸಮರವೂ ನಡೆದಿದೆ ಅದ್ಯಾವ ವಿಡಿಯೋ ಸಮರ ಅಂತೀರಾ ಇಲ್ನೋಡಿ ವಿವಿರ ಹೀಗಿದೆ
ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ರಮೇಶ್ ಜಾರಕಿಹೊಳಿ ಅವರ ಕುರಿತು ಡ್ಯಾನ್ಸ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲಿಯೇ ಈಗ ಮತ್ತೊಂದು ವಿಡಿಯೋ ಮೂಲಕ ಅಂಕಲಗಿ ಪಂಚಾಯ್ತಿಯ ಕರ್ಮಕಾಂಡವನ್ನು ಬಯಲಿಗೆಳೆದಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಅಂಕಲಗಿ ಗ್ರಾಮ ಪಂಚಾಯ್ತಿಯವರು ಲಗಮೇಶ್ವರ ಗ್ರಾಮದಲ್ಲಿ ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿ 150 ಟಾಯ್ಲೆಟ್ ಗಳನ್ನು ನಿರ್ಮಿಸಿರುವ ಕುರಿತು ಅತ್ಯಂತ ಸ್ವಾರಸ್ಯಕರ ಸಾಂಗ್ ಬಿಡುಗಡೆ ಮಾಡಿದ್ದಾರೆ
ಊರ ಹೊರಗೆ ಪಾಯಿಖಾನೆ ಕಟ್ಟಿದ್ರಲ್ಲೋ …ಜೀವ ಹಿಂಡಿದ್ರಲ್ಲೋ ಎನ್ನುವ ಶಿರ್ಷಿಕೆಯ ಜೊತೆಗೆ ಆರಂಭವಾಗುವ ಈ ಸಾಂಗ್ ನಲ್ಲಿ ಲಗಮೇಶ್ವರ ಗ್ರಾಮದ ಅಳಲನ್ನು ಹೊರ ಹಾಕಲಾಗಿದೆ ಹಾಗಿದ್ರೆ ಈ ಸಾಂಗ್ ಹೇಗಿದೆ ನೋಡಲು ಈ ಕೆಳಗಿನ ಲಿಂಕ್ ಒತ್ತಿ ಗೋಕಾಕ್ ಪಾಲಿಟಿಕ್ಸ್ ಹೇಗಿದೆ ನೋಡಿ.
https://youtu.be/Vvz8XuDwuEs
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ