- ಬೆಳಗಾವಿ ಸುದ್ದಿ:-
ಬೆಳಗಾವಿ:- ಬೆಳಗಾವಿ ಜಿಲ್ಲೇಯಲ್ಲಿ ಜಾರಕಿಹೋಳಿ ಸಾಹುಕಾರರ ರಾಜಕಾರಣ ಗರಿಗೆದರಿದೆ ಒಬ್ಬ ಸಾಹುಕಾರ ಕಾಂಗ್ರೆಸ್ ನಲ್ಲಿದ್ದುಕೋಂಡೆ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಣ ತೋಟ್ಟರೆ,ಇನ್ನೋಬ್ಬರ ಸಹೋದರ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕದನ ಆರಂಭಿಸಿದ್ದಾರೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೋಳಿ ಕಾಂಗ್ರೆಸ್ ಜೋತೆ ಸಂಬಂಧ ಇಟ್ಟುಕೋಳ್ಳದಿದ್ದರು ಕಾಂಗ್ರೆಸ್ ನಲ್ಲೆ ಇದ್ದುಕೋಂಡು ಕಾಂಗ್ರೆಸ್ಸಿನ ನಾಗಾಲೋಟಕ್ಕೆ ಅಡ್ಡಗಾಲು ಹಾಕುತ್ತಿರುವುದು ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವಾಗಿ ಪರಿಣಮಿಸಿದೆ.
ಹೈಕಮಾಂಡ್ ಸತೀಶ ಜಾರಕಿಹೋಳಿ ಅವರಿಗೆ ಹೇಗಾದರು ಮಾಡಿ ರಮೇಶ್ ನನ್ನು ಮನವೋಲಿಸಿ,ನಿಮ್ಮ ನಡುವಿನ ಜಗಳ ಪಕ್ಷಕ್ಕೆ ಧಕ್ಕೆ ಮಾಡಬಾರದು ಸತೀಶ ನೀವೂ ನಿಮ್ಮಣ್ಣ ರಮೇಶ್ ನನ್ನು ಮನವೋಲಿಸಿ ಎಂದು ಫರಮಾಣು ಹೋರಡಿಸಿರುವುದರಿಂದ ಸತೀಶ ಜಾರಕಿಹೋಳಿ ಈಗ ಅಣ್ಣನನ್ನು ಮನವೋಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಸತೀಶ ಜಾರಕಿಹೋಳಿ ನಾಳೆ ಗೋಕಾಕಿಗೆ ಭೇಟಿನೀಡಲಿದ್ದು ಅಣ್ಣ ರಮೇಶ್ ರನ್ನು ಭೇಟಿಯಾಗುತ್ತಾರೆ ಎನ್ನುವ ಸುದ್ದಿ ಈಗ ಬೆಳಗಾವಿ ಜಿಲ್ಲಾದ್ಯಂತ ಹರದಾಡಿದೆ.
ಬೆಳಗಾವಿ ಜಿಲ್ಲೇಯಲ್ಲಿ ಸಾಹುಕಾರ ಸಹೋದರರ ನಡುವಿನ ಮುಸುಕಿನ ಗುದ್ದಾಟ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸಿದೆ.
ನಾಳೆ ಸತೀಶ ಅವರು ರಮೇಶ್ ಅವರನ್ನು ಭೇಟಿಯಾಗಿ ಮವವೋಲಿಸುತ್ತಾರಾ…ಅಥವಾ ಸಹೋದರರ ನಡುವಿನ ಕದನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ವರದಾನವಾಗುತ್ತಾ…?ಎಂಬುವುದನ್ನು ಕಾದು ನೋಡಬೇಕಿದೆ.
ಆದರೆ ಸತೀಶ್ ಜಾರಕಿಹೊಳಿ ಪ್ರಾಮಾಣಿಕವಾಗಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತಿರುವದು ಸತ್ಯ ತಮ್ಮನ ಗೌರವ ಉಳಿಸಲು ಅಣ್ಣ ರಮೇಶ್ ಸಾಥ್ ಕೊಡ್ತಾರಾ…? ಅಥವಾ ಕಾಂಗ್ರೆಸ್ಸಿಗೆ ಕೈ ಕೊಡ್ತಾರಾ ಕಾದು ನೋಡಬೇಕು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ