ಬೆಳಗಾವಿ- ರಾಜ್ಯದಲ್ಲಿ ಕೆಲವು ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಅವಧಿ ಮುಗಿದಿದೆ.ಪ್ರತಿಜ್ಞಾವಿಧಿ ಕಾರ್ಯಕ್ರಮ ಮುಗಿದ ಬಳಿಕ,ಅವಧಿ ಮುಗಿದ ಬಳಿಕ ಜಿಲ್ಲಾ ಕಾಂಗ್ರೆಸ್ ಸಮೀತಿಗಳ ಪುನರ್ರಚನೆ ಮಾಡುತ್ತೇವೆ,ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲಾ ಪಕ್ಷಗಳಲ್ಲೂ ಕ್ರೆಡಿಟ್ ವಾರ್ ಇದ್ದೇ ಇರುತ್ತೆ, ಇದು ಸಾಮಾನ್ಯ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಕೆಪಿಸಿಸಿ ನೂತನ ಕಚೇರಿ ಪೂಜಾ ಕಾರ್ಯಕ್ರಮಕ್ಕೆ ಹೋಗದ ವಿಚಾರವನ್ನು ಮಾದ್ಯಮಗಳು ಪ್ರಸ್ತಾಪಿಸಿದಾಗ, ಬೆಳಗಾವಿ ಎಪಿಎಂಸಿ ಚುನಾವಣೆ ಇದ್ದ ಕಾರಣ ಹೋಗಲಾಗಲಿಲ್ಲ,
ಹೋಮ ಹವನ ಮಾಡಿದ್ದಕ್ಕೆ ಹೋಗಲಿಲ್ವಾ ಅಂತಾ ತಿಳಿಯಬಾರದು, ಹಾಗೇನಿಲ್ಲ ಬೆಂಗಳೂರಲ್ಲಿದ್ರೆ ಕೆಲವು ನಿಮಿಷಗಳ ಕಾಲ ಹೋಗಿ ಬರುತ್ತಿದ್ದೆ ಎಂದ ಸತೀಶ್ ಜಾರಕಿಹೊಳಿ ಹೇಳಿದರು.
ಜುಲೈ 2ರ ಕೆಪಿಸಿಸಿ ಅಧ್ಯಕ್ಷರ ಪದ ಗ್ರಹಣಕ್ಕೆ ಸಿದ್ಧತೆ ನಡೆಸಲಾಗುತ್ತಿದೆ, ಲೈವ್‌ನಲ್ಲಿ 10 ಲಕ್ಷ ಕಾರ್ಯಕರ್ತರು ಪದಗ್ರಹಣ ವೀಕ್ಷಣೆಗೆ ಸಿದ್ದತೆ ಮಾಡಲಾಗಿದೆ. ರಾಜಕೀಯ ಇತಿಹಾಸದಲ್ಲಿ ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಪಕ್ಷ ಸಂಘಟನೆಗೆ ಈ ಶಕ್ತಿಯನ್ನು ಬಳಸಿಕೊಳ್ಳಲಾಗುವುದು. ಮೂವರು ಕೆಪಿಸಿಸಿ ಕಾರ್ಯಾಧ್ಯಕ್ಷರು ರಾಜ್ಯ ಪ್ರವಾಸ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ,ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ, ಈಗಾಗಲೇ ಮೂರು ತಿಂಗಳ ಲಾಕ್‌ಡೌನ್ ಮಾಡಲಾಗಿದೆ ಈಗ ಮತ್ತೆ ಲಾಕ್ ಡೌನ್ ಅವಶ್ಯಕತೆ ಇಲ್ಲ ಜನರಲ್ಲಿ ಜಾಗೃತಿ ಮೂಡಿಸುವುದೊಂದೇ ದಾರಿ,ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು