Breaking News

ಎಂಪಿ ಎಲೆಕ್ಷನ್ ಗೆ ಶಿವಕಾಂತ ಸಿಧ್ನಾಳ ಸೂಕ್ತ ಅಭ್ಯರ್ಥಿ. ಎಸ್ ಬಿ ಸಿದ್ನಾಳ ಸೆಲೆಕ್ಷನ್….!!!

ಬೆಳಗಾವಿ – ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕಾಂತ ಸಿದ್ನಾಳ ಸೂಕ್ತ ಅಭ್ಯರ್ಥಿಯಾಗಿದ್ದಾರೆ ಎಂದು ಎಸ್ ಬಿ ಸಿದ್ನಾಳ ತಿಳಿಸಿದ್ದಾರೆ

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಯವರು ಪ್ರಚಾರ ಪ್ರೀಯರು ಇವರ ಬಾಯಿ ಪಟಾಕಿ ಇವರಿಂದ ಅಭಿವೃದ್ಧಿ ಸಾಧ್ಯವಿಲ್ಲ ಇವರಿಂದ ಒಳ್ಳೆಯ ಭಾಷಣ ಮಾತ್ರ ನಿರೀಕ್ಷೆ ಮಾಡಬಹುದು ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಶಿವಕಾಂತ ಸಿದ್ನಾಳ ಸೂಕ್ತ ಅಭ್ಯರ್ಥಿ ಎಂದರು

ಇಂದಿನ‌ ರಾಜಕಾರಣದಲ್ಲಿ ಮಾನವಿಯ ಮೌಲ್ಯಗಳು ಕುಸಿಯುತ್ತಿವೆ ಹಣ ಜಾತಿ ಮಾತ್ರ ಕೆಲಸ ಮಾಡುತ್ತಿದೆ.ದೇವರಾಜ ಅರಸು ರಾಮಕೃಷ್ಣ ಹೆಗಡೆ ಅವರಿದ್ದಾಗ ರಾಜಕಾರಣದಲ್ಲಿ ಸ್ನೇಹಭಾವ ಇತ್ತು ಅದು ಈಗ ಮಾಯವಾಗಿದೆ ಎಂದು ಎಸ್ ಬಿ ಸಿಧ್ನಾಳ ಕಳವಳ ವ್ಯೆಕ್ತ ಪಡಿಸಿದರು
ಹಿಂದಿನ ಕಾಲದಲ್ಲಿ ದೇಶಾಭಿಮಾನ ಹೆಚ್ಚಿತ್ತು. ಆದರೆ ಜಾತಿ ಜಾತಿ ಎಂದು ಈಗ ದೇಶಾಭಿಮಾನವನ್ನೆ ಮರೆಯುವಂತಾಗಿದೆ. ನೋಟ ಬ್ಯಾನ್ ನಿಂದ ಸಾಕಷ್ಟು,ತೊಂದರೆಯಾಗಿದೆ. ಭ್ರಷ್ಟಾಚಾರ ಎಲ್ಲ ದೇಶದಲ್ಲಿಯೂ ಇದೆ.
ಪಂಚಾಯತಿಯಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಆತನ ವರ್ತನೆಯ ಬಗ್ಗೆ ತಿಳಿದುಕೊಂಡಿರಬೇಕು. ಆದರೆ ಇತ್ತೀಚಿನ ದಿನಮಾನದಲ್ಲಿ ಮಂತ್ರಿ ಹಿಂದೆ ತಿರುಗಾಡುವವರಿಗೆ ಟಿಕೆಟ್ ‌ನೀಡುತ್ತಿರುವುದು ವಿಷಾಧನೀಯ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಇದು ಸೂಕ್ತ ಸಮಯ ಅಲ್ಲ ಅಭಿವೃದ್ಧಿಯ ವಿಷಯದಲ್ಲಿ ಅನ್ಯಾಯವಾಗಿದ್ದು ನಿಜ ಇಲ್ಲಿಯ ಸಂಪನ್ಮೂಲಗಳ ಕ್ರೋಢಿಕರಣಕ್ಕಾಗಿ ಮಹತ್ವದ ಕಚೇರಿಗಳನ್ನು ಬೆಳಗಾವಿಗೆ ತರಬೇಕು ಫಿಲ್ಮ ಸಿಟಿ ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂತರಾಡುವದು ಸರಿಯಲ್ಲ ಬೆಳಗಾವಿಯಲ್ಲೂ ಉತ್ತಮ ವಾತಾವರಣವಿದ್ದು ಫಿಲ್ಮ ಸಿಟಿ ಬೆಳಗಾವಿಗೆ ಬರಬೇಕು.ಬೆಳಗಾವಿಯ ಕಚೇರಿಗಳನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುತ್ತಿರುವ ವಿಷಯ ಖಂಡನೀಯ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಅತ್ಯಂತ ಹಿಂದುಳಿದಿರುವ ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮಾಜಿ ಸಂಸದ ಎಸ್ ಬಿ ಸಿದ್ನಾಳ ಒತ್ತಾಯಿಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *