ಬೆಳಗಾವಿ-ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಸಾಧಿಸುವ ಛಲ ಇದ್ದರೆ ಕಂಡ ಕನಸುಗಳನೆಲ್ಲ ನನಸು ಮಾಡಬಹುದು. ಮನುಷ್ಯನ ಬುದ್ಧಿವಂತಿಕೆಯ ಮುಂದೆ ಅಸಾಧ್ಯವಾದದ್ದು ಯಾವುದೂ ಇಲ್ಲ ಅನ್ನೋದು ಯಾವತ್ತೋ ಸಾಬೀತಾಗಿದೆ.
ಸದ್ಯ ಎಂಟನೇ ತರಗತಿ ಓದುವ ಈ ಛಲಗಾರ ಹುಡುಗ ಕಸದ ಕಂಟೇನರ್ ತುಂಬಿದಾಗ ಸ್ವಯಂ ಪ್ರೇರಿತವಾಗಿ ಕರೆಗಂಟೆ ನೀಡುವ ಆವಿಷ್ಕಾರವನ್ನ ಅಭಿವೃದ್ಧಿಪಡಿಸಿದ್ದಾನೆ. ಈ ಹುಡುಗನ ಸಾಧನೆ ಬಗ್ಗೆ ಒಂದಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ.
ನಮ್ ಏರಿಯಾದಲ್ಲಿ ಕಸದ ಕಂಟೇನರ್ ತುಂಬಿ ಹೋಗಿದೆ ಇದರ ವಿಪರೀತ ವಾಸನೆ ಸಹಿಸಿಕೊಳ್ಳೋಕೆ ಆಗ್ತಾ ಇಲ್ಲ. ದಯವಿಟ್ಟು ಬಂದು ಕಸ ವಿಲೇವಾರಿ ಮಾಡಿ ಎಂದು ಸಾರ್ವಜನಿಕರು ಪಾಲಿಕೆ ಕಚೇರಿ ಫೋನ್ ಮಾಡಿ ಅಂಗಲಾಚುತ್ತಾರೆ. ಈ ಸಮಸ್ಯೆಯನ್ನು ಕಂಡ ಬಾಲಕನೊಬ್ಬ ಇದಕ್ಕೆ ಒಂದು ಸೊಲ್ಯೂಷನ್ ಕಂಡು ಹಿಡಿಯಲೇಬೇಕೆಂಬ ಸಂಕಲ್ಪ ಮಾಡ್ತಾನೆ. ಬೆಳಗಾವಿಯ ಕೇಂದ್ರೀಯ ವಿದ್ಯಾಲಯ ನಂ-2 ರಲ್ಲಿ 8 ನೇ ತರಗತಿ ವಿದ್ಯಾರ್ಥಿಯಾದ ಆಯುಷ್ ತಮ್ಮಣ್ಣವರ್ ಎಂಬ ಈ ಹುಡುಗ ಮಾಡಿದ ಸಾಧನೆ ಇದು.
ಮನೆಯಲ್ಲಿ ಅಳಿದುಳಿದ ಮತ್ತು ಉಪಯೋಗಿಸಿ ಬಿಸಾಕಿದ ವಸ್ತುಗಳನ್ನು ಸಂಗ್ರಹಿಸಿ ತಾನು ಅಂದುಕೊಂಡಿದ್ದ ಆವಿಷ್ಕಾರವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತಾನೆ. ಹಲವು ದಿನಗಳ ನಂತರ ಈ ಪ್ರಯೋಗದಲ್ಲಿ ಆತ ಯಶಸ್ಸನ್ನೂ ಕಾಣುತ್ತಾನೆ. ಲೇಸರ್ ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗಿದೆ. ಕಸದ ಕಂಟೇನರ್ ನ ಮೇಲ್ಭಾಗದಲ್ಲಿ ಈ ಆವಿಷ್ಕಾರವನ್ನು ಅಳವಡಿಸಬೇಕು. ಕಸ ತುಂಬಿದಾಗ ಕೇವಲ ಸೆನ್ಸರ್ ಮೂಲಕ ಬಝರ್ ಶಬ್ದ ಮಾಡಲಾರಂಭಿಸುತ್ತೆ. ಈ ಶಬ್ದ ನೇರವಾಗಿ ಪಾಲಿಕೆ ಕಚೇರಿಯಲ್ಲಿಯೇ ಕೇಳಿಸುತ್ತೆ. ನಂತರ ಪೌರ ಕಾರ್ಮಿಕರು ತ್ವರಿತವಾಗಿ ಬಂದು ಕಸ ವಿಲೇವಾರಿ ಮಾಡಬಹುದಾಗಿದೆ. ಈ ಪ್ರಯೋಗದ ಡೆಮೋ ತಯಾರಿಕೆಗೆ ಈ ಹುಡುಗ ಮಾಡಿದ ಖರ್ಚು ಕೇವಲ 300 ರೂ. ಇದೇ ಆವಿಷ್ಕಾರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಾವು ಕಸದ ದೊಡ್ಡ ಕಂಟೇನರ್ ಗಳಿಗೂ ಅಳವಡಿಸಬಹುದು. ಆದರೆ ಮಹಾನಗರ ಪಾಲಿಕೆ ಇದರಲ್ಲಿ ಆಸಕ್ತಿ ತೋರಬೇಕು ಅಷ್ಟೇ ಎನ್ನುತ್ತಾನೆ ಈ ಬಾಲ ವಿಜ್ಞಾನಿ
ಕಂಟೇನರ್ ಗಳಲ್ಲಿ ಕಸ ತುಂಬಿ ಕೆಲ ದಿನಗಳ ನಂತರ ದುರ್ವಾಸನೆ ಬೀರುತ್ತೆ ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಅದರ ಗಂಭೀರತೆಯನ್ನು ಅರಿತು ಮಹಾನಗರ ಪಾಲಿಕೆ ಈ ಆವಿಷ್ಕಾರವನ್ನು ಕಸದ ಕಂಟೇನರ್ವ ಗಳಿಗೆ ಅಳವಡಿಸುವ ಕುರಿತು ಚಿಂತಿಸಬೇಕಿದೆ.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …