ಶನಿವಾರ ರಂದು ಲಿಂಗರಾಜ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆಎಲ್‍ಇ ಶತಮಾನೋತ್ಸವ ಮ್ಯೂಜಿಯಂನ್ನು ಖ್ಯಾತ ನಟಿ, ಸಾಮಾಜಿಕ ಕಾರ್ಯಕರ್ತೆ ಹಾಗೂ ಪೂರ್ವ ರಾಜ್ಯಸಭಾ ಸದಸ್ಯೆ ಶಭಾನಾ ಆಜ್ಮೀ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಾಮಾಜಿಕ ಕ್ರಾಂತಿಯಲ್ಲಿ ಕೆಎಲ್‍ಇ ಕೊಡುಗೆಯನ್ನು ಕೇವಲ ಕೇಳಿ ತಿಳಿದಿದ್ದೆ ಆದರೆ ಇಲ್ಲಿಗೆ ಬಂದ ನೋಡಿದಾಗ ಅರಿವಾಯಿತು ಅದರ ವಿಸ್ತಾರ ವ್ಯಾಪ್ತಿ ಸಮಾಜ ಪರಿವರ್ತನೆಯಲ್ಲಿನ ಪರಿಶ್ರಮವನ್ನು ತಿಳಿದುಕೊಂಡೆ. ಅಗಧವಾದ ಜ್ಞಾನದಾಸೋಹವನ್ನು ಸಮಾಜಕ್ಕೆ ಧಾರೆಯೆರೆದ ಕೆಎಲ್‍ಇ ಸಂಸ್ಥೆಯನ್ನು ಬೆಳಗಾವಿ ಪಡೆದಿರುವುದೇ ಧನ್ಯ. ಬೆಳಗಾವಿ ವಿಶ್ವದಲ್ಲಿ ಗುರುತಿಸುವಂತೆ ಮಾಡಿದ್ದರೆ ಅಲ್ಲಿ ಕೆಎಲ್‍ಇ ಸಂಸ್ಥೆಯ ಪಾತ್ರ ಬಹುಮೌಲಿಕವಾಗಿದೆ. ಶಿಕ್ಷಣದೊಂದಿಗೆ ಆರೋಗ್ಯ ಕ್ರಾಂತಿಯನ್ನುಂಟು ಮಾಡಿರುವ ಕೆಎಲ್‍ಇ ಇಂದು ವಿಶ್ವದ ಗಮನವನ್ನು ಸೆಳೆದಿದೆ.
ಇಂದು ಕೆಎಲ್‍ಇ ವಸ್ತುಸಂಗ್ರಾಲಯವನ್ನು ಲೋಕಾರ್ಪಣೆ ಮಾಡುವ ಮೂಲಕ ಕೆಎಲ್‍ಇ ಸಂಸ್ಥೆ ದೇಶಕ್ಕೆ ಮೌಲಿಕ ಕೊಡುಗೆ ನೀಡಿದೆ. ಅತ್ಯಂತ ಸುಂದರವಾಗಿ ನಿರ್ಮಾಣಗೊಂಡಿರುವ ಈ ಮ್ಯೂಜಿಯಂ ಆಕರ್ಷಿನೀಯ ಕೇಂದ್ರವಾಗುವುದರಲ್ಲಿ ಎರಡು ಮಾತಿಲ್ಲ. ಕೆಎಲ್‍ಇ ಸಂಸ್ಥೆ ಇನ್ನಷ್ಟು ವಿಸ್ತರಿಸಲೆಂದು ಶುಭ ಹಾರೈಸಿದರು.
ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭೆಗಳಿದ್ದು ಅವರಿಗೆ ಅಲ್ಲಿಯೇ ಉದ್ಯೋಗ ನೀಡಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಬೇಕಾಗಿದೆ. ನಗರೀಕರಣದಿಂದ ಕೊಳಚೆ ಪ್ರದೇಶ ನಿರ್ಮಾಣವಾಗುತ್ತಿದೆ. ಅವುಗಳನ್ನು ನಾಶ ಮಾಡದೆ ಅಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ಅವರನ್ನೂ ಕೂಡ ಮುಖ್ಯವಾಹಿನಿಯಲ್ಲಿ ತರಬೇಕು. ಗುಡಿಕೈಗಾರಿಕೆಗಳಿಗೆ ಒತ್ತು ನೀಡಿ ಮಹಿಳಾ ಸಬಲೀಕರಣಕ್ಕೆ ಆಧ್ಯತೆ ನೀಡಿದಾಗ ನಗರೀಕರಣವು ನಿಲ್ಲುವುದರಲ್ಲಿ ಎರಡುಮಾತಿಲ್ಲವೆಂದು ಶಭಾನಾ ಆಜ್ಮೀಯವರು ನುಡಿದರು.
ಇದೇ ಸಂದರ್ಭದಲ್ಲಿ ಕೆಎಲ್‍ಇ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಿವಾನಂದ ಕೌಜಲಗಿ, ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹಾಗೂ ಕೆಎಲ್‍ಇ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …