Breaking News

ಎಂ ಡಿ ಲಕ್ಷ್ಮೀ ನಾರಾಯಣ ಆರ್ ಎಸ್ ಎಸ್ ಮೆಸ್ಸೇಂಜರ್- ಮುನವಳ್ಳಿ ಆರೋಪ

ಬೆಳಗಾವಿ- ಆರ್ ಎಸ್ ಎಸ್ ಮತ್ತು ಬಿಜೆಪಿ ಪಕ್ಷದಲ್ಲಿದ್ದ ಎಂಡಿ ಲಕ್ಷ್ಮೀ ನಾರಾಯಣ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಚೆ ಅವರ ಸಂಪರ್ಕದಲ್ಲಿ ಇದ್ದುಕೊಂಡು ಬಿಜೆಪಿ ಮತ್ತು ಆರ್ ಎಸ್ ಎಸ್ ಮೆಸೆಂಜರಗ ಆಗಿ ಕಾರ್ಯನಿರ್ವಹಿಸುತ್ತಿದ್ದು ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ರಿಮೂವ್ ಮಾಡಬೇಕು ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ

ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ದುಡಿದವರು ಹಲವಾರು ಜನ ಕಾರ್ಯಕರ್ತರಿದ್ದು ಅವರಿಗೆ ಸ್ಥಾನ ನೀಡುವ ಬದಲು ಎಂಡಿ ಲಕ್ಷ್ಮೀ ನಾರಾಯಣ ಅವರಿಗೆ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷ ರನ್ನಾಗಿ ಮಾಡಿದ್ದು ಸರಿಯಲ್ಲ ತೂಮಕೂರಿನಿಂದ ಬೆಳಗಾವಿಗೆ ವಲಸೆ  ಬಂದ ಎಂಡಿ ಲಕ್ಷ್ಮೀನಾರಾಯಣ ಅವರಿಗೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲು ಹೊರಟಿದ್ದು ಬೆಳಗಾವಿಯಲ್ಲಿ ಪ್ರಬಲ ಅಭ್ಯರ್ಥಿಗಳು ಇದ್ದು ಕೂಡಲೇ ಲಕ್ಷ್ಮೀ ನಾರಾಯಣ ಅವರನ್ನು ಬೆಳಗಾವಿಯಿಂದ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ

ಪರಶಿಷ್ಟ ಜಾತಿಯಲ್ಲಿ 109 ಉಪಜಾತಿಗಳಿವೆ ಅದರಲ್ಲಿ ಕೇವಲ ಒಂಬತ್ತು ಜಾತಿಗಳ ನಾಯಕರಿಗೆ ಸ್ಥಾನ ಮಾನ ನೀಡಿರುವ ಕಾಂಗ್ರೆಸ್ ಪಕ್ಷ 92 ಜಾತಿಗಳ ನಾಯಕರಿಗೆ ಕಸದ ಬುಟ್ಟಿಗೆ ಹಾಕಿ ಅನ್ಯಾಯ ಮಾಡಿದ್ದು ತಮಗೆ ಬೆಳಗಾವಿ ದಕ್ಷಿಣದಿಂದ ಟಿಕೆಟ್ ಸಿಗಲಿ ಅಥವಾ ಬಿಡಲಿ ಅನ್ಯಾಯವಾದ ಸಮುದಾಯದ ನಾಯಕರಿಗೆ ನ್ಯಾಯ ಸಿಗದಿದ್ದರೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದು ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ

ನನಗೆ ಪಾರ್ಟಿಫಂಡ್ ಬೇಡ ನಾನು ಸಮರ್ಥನಾಗಿದ್ದೆನೆ ಎಂದು ಪಕ್ಷದ ನಾಯಕರಿಗೆ ಮನವರಿಕೆ ಆಗಿದ್ದರೆ ನನಗೆ ಟಿಕೆಟ್ ಕೊಡಲಿ ಗೆದ್ದು ತೋರಿಸುತ್ತೇನೆ ಎಂದು ಶಂಕರ ಮುನವಳ್ಳಿ ಹೇಳಿದ್ದಾರೆ

 

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *