ಬೆಳಗಾವಿ
ಡಿ.ಕೆ.ಶಿವಕುಮಾರ ಅವರೇ ದೈರ್ಯದಿಂದ ಬೆಳಗಾವಿಗೆ ಬನ್ನಿ ಇದು ಜಾರಕಿಹೊಳಿ ಅವರ ಸ್ವತಲ್ಲ ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಗೆ ಬ್ಲ್ಯಾಕ್ ಮೇಲ್ ಮಾಡುವರನ್ನು ವಜಾ ಮಾಡಿ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಹೇಳಿದರು.
ಕಾಂಗ್ರೆಸ್ ಜಾರಕಿಹೊಳಿ ಸಹೋದರರ ಸ್ವತಲ್ಲ. ಪಕ್ಷದಲ್ಲಿದ್ದುಕೊಂಡು ರಾಹುಲ ಗಾಂಧಿ ಅವರನ್ನು ಪ್ರಧಾನಿ ಹುದ್ದೆಯಲ್ಲಿದ್ದ ಕೆಳಗಿಳಿಸುವ ಹುನ್ನಾರವನ್ನು ಜಾರಕಿಹೊಳಿ ಸಹೋದರರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಸಚಿವ ಡಿಕೆಶಿ ಅವರನ್ನು ಜಿಲ್ಲೆಯಿಂದ ಹೊರಗಿಟ್ಟು ಜಾರಕಿಹೊಳಿ ಸಹೋದರರು ಯಾವ ಸಾಧನೆ ಮಾಡುತ್ತಿದ್ದಾರೆ. ಡಿಕೆಶಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದಾರೆ. ನಾವು ಸಹ ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಏಳುವರೆ ಲಕ್ಷ ರು.ಗಳನ್ನು ನೀಡಿದ್ದೇನೆ ಎಂದರು.
ಜಿಲ್ಲಾ ಉಸ್ತುವಾರಿಸಚಿವ ಹಾಗೂ ಹೈಕಮಾಂಡ್ ಗೊಂದಲದಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ಣಾಮವಾಗಿದೆ ಎಂದರು.
ಜಾರಕಿಹೊಳಿ ಕುಟುಂಬ ನನ್ನಗೆ ಕೊಲೆ ಬೇದರಿಕೆ ಹಾಕಿದೆ. ನನಗೆ ನೀಡಿದ ಗನ್ ಮ್ಯಾನ್ ನನ್ನು ರಮೇಶ ಜಾರಕಿಹೊಳಿ ಷಡ್ಯಂತ್ರ ನಡೆಸಿ ಕಸೆದುಕೊಂಡರು. ಟಿ.ಬಿ.ಜಯಚಂದ್ರ ಹಾಗೂ ಕಾಗೋಡು ತಿಮ್ಮಪ್ಪ ಇವರಿಗೆ ಜಾರಕಿಹೊಳಿ ಸಹೋದರರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಅವರು ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾರಕಿಹೊಳಿ ಹಾಗೂ ಅವರ ಬೆಂಬಲಿಗರಿಂದ ನನ್ನ ಹತ್ಯೆಯಾಗಬಹದು. ಆದರೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ನಿರ್ಣಾಮವಾಗಲು ಬಿಡುವುದಿಲ್ಲ. ಬೆರಳೆಣಿಕೆಯಷ್ಟು ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ ಬ್ಲ್ಯಾಕ್ ಮಾಡುತ್ತಿರುವ ಇಂಥವರ ಮೇಲೆ ನೋಟಿಸ್ ನೀಡಿ ವಜಾ ಮಾಡಬೇಕು ಎಂದು ಹೇಳಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಣ್ಮೀ ಹೆಬ್ಬಾಳ್ಕರ್ ಗೆ ಕಾಂಗ್ರೆಸ್ ನ ರಕ್ತ ಇದೆ. ಅವರು ನಿಜವಾದ ಕಾಂಗ್ರೆಸಿಗೆ. ಆದರೆ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ದಕ್ಷಿಣ ಕ್ಷೇತ್ರದಲ್ಲಿ ಲಕ್ಷ್ಮೀ ನಾರಾಯಣ ತಂದು ನಿಲ್ಲಿಸುದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.