Breaking News

ಬೆಳಗಾವಿ ಡಿಸಿ ಸತೀಶ ಜಾರಕಿಹೊಳಿ ಕೈಗೊಂಬೆ- ಮುನವಳ್ಳಿ ಆರೋಪ

ಬೆಳಗಾವಿ- ನಗರದ ಚರ್ಚ ಬಳಿ ತಮಗೆ ಸೇರಿದ ಜಾಗೆಗೆ ಸಮಂಧಿಸಿದಂತೆ ಕೆಎಟಿ ಯಿಂದ ತಡೆಯಾಜ್ಞೆ ಇರುವಾಗ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್ ಚಂದ್ರ ಕಂದಾಯ ಇಲಾಖೆಯ ರಮನ ರೆಡ್ಡಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಂ ಅವರು ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಪತ್ರ ವ್ಯೆವಹಾರ ನಡೆಸಿ ತಮಗೆ ಸೇರಿದ ಜಾಗೆಯನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಕೆಎಟೆ ಯಿಂದ ತಡೆಯಾಜ್ಞೆ ಇರುವಾಗ್ಯು ಮೂರು ಜನ ಅಧಿಕಾರಿಗಳು ಭೂ ಕಬಳಿಸಲು ಪತ್ರ ವ್ಯೆವಹಾರ ನಡೆಸಿದ್ದು ಸರ್ಕಾರ ಕೂಡಲೇ ಮೂರು ಜನ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ

ಬೆಳಗಾವಿ ಜಿಲ್ಲಾಧಿಕಾರಿ ಜಯರಾಮ ಅವರು ಸತೀಶ ಜಾರಕಿಹೊಳಿ ಅವರ ಸೇವಕರಂತೆ ನಡೆದುಕೊಳ್ಳುತ್ತಿದ್ದಾರೆ ಇವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಜಯರಾಂ ಅವರು ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಜಾಗೆಗೆ ಸಮಂಧಿಸಿದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕಾನೂನು ವ್ಯೆವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ

ಭೂಮಿ ಇಲ್ಲದವರ ಪರವಾಗಿ ಹೋರಾಟ ಮಾಡಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ನಿಜವಾಗಿಯೂ ಜನ ಸಾಮಾನ್ಯರ ಬಗ್ಗೆ ಕಾಳಜಿ ಇದ್ದರೆ ನ್ಯಾಯಾಲಯದ

ತಡೆಯಾಜ್ಞೆಯನ್ನು ಮೀರಿ ಪತ್ರ ವ್ಯೆವಹಾರ ನಡೆಸಿರುವ ಜಿಲ್ಲಾಧಿಕಾರಿ ಜಯರಾಂ ಅವರನ್ನು ವಜಾ ಗೊಳಿಸಬೇಕು ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಬೇಕು ಎಂದು ಶಂಕರ ಮುನವಳ್ಳಿ ಕಂದಾಯ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ

ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ನಗರದ ಮುಖ್ಯ ಪ್ರದೇಶದಲ್ಲಿರುವ ಕೃಷಿ ಜಮೀನು ಎಂದು ಬರೆದಿದ್ದು ಕೃಷಿ ಜಮೀನು ನಗರದ ಮಧ್ಯಭಾಗದಲ್ಲಿ ಇರುತ್ತದೆಯಾ? ಎಂದು ಶಂಕರ ಮುನವಳ್ಳಿ ಪ್ರಶ್ನಿಸಿದ್ದು ಶಾಸಕ ಸೇಠ ಜಾಗೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ನಗರದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *