ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ರುಚಿ ನೋಡಿ ತಮ್ಮ ಸ್ವಾರ್ಥ ಗೋಸ್ಕರ ಅಳಿಯ ಸಿದ್ಧಾರ್ಥನ ಕಾಫಿ ಡೇ ಆಕ್ರಮ ಆಸ್ತಿಯ ರಕ್ಣೆಗಾಗಿ ಮಾತೃಪಕ್ಷ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ತಿಳಿದುಕೊಂಡಿದ್ದೆ ಆದರೆ ಅವರು ಕಾಂಗ್ರೆಸ್ ಪಕ್ಕದಲ್ಲಿ ಅಧಿಕಾರ ಅನುಭವಿಸಿ ಉಂಡು ಮನೆಗೆ ದ್ರೋಹ ಬಗೆದು ಅವರಿಗೆ ಸ್ಥಾನ ಮಾನ ನೀಡಿದ ಪಕ್ಷಕ್ಕೆ ದ್ರೋಹ ಮಾಡಿ ಅವರನ್ನು ನಂಬಿದ ಕಾರ್ಯಕರ್ತರ ಮನ್ನಣೆಯನ್ನು ದಿಕ್ಕರಿಸಿ ಪಕ್ಷಾಂತರ ಮಾಡಿದ್ದಾರೆ ಎಂದು ಮುನವಳ್ಳಿ ಎಸ್ ಎಂ ಕೃಷ್ಣಾ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ
ಕಾಂಗ್ರೆಸ್ ನಲ್ಲಿ ಅಧಿಕಾರದ ರುಚಿ ನೋಡಿರುವ ಎಸ್ ಎಂ ಕೃಷ್ಣಾ ಈಗ ಬಿಜೆಪಿ ಸೇರಿದ್ದು ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಇವರು ಬಿಜೆಪಿ ಸೇರುವಾಗ ಆರ್ ಎಸ್ ಎಸ್ ನವರು ವಿರೋಧ ಮಾಡಬೇಕಿತ್ತು ಕಾಂಗ್ರೆಸ್ ಪಕ್ಷಕ್ಕೆ ಎಸ್ ಎಂ ಯಾವ ರೀತಿ ಮೋಸ ಮಾಡಿದ್ದಾರೆಯೋ ಅದೇ ರೀತಿ ಅವರು ಬಿಜೆಪಿಗೂ ದ್ರೋಹ ಬಗೆಯಲಿದ್ದಾರೆ ಎಂದು ಶಂಕರ ಮುನವಳ್ಳಿ ಭವಿಷ್ಯ ನುಡಿದರು
ಕಾರ್ಯಕರ್ತರು ಹಗಲಿರುಳೆನ್ನದೇ ದುಡಿದು ಹರಿಸಿದ ಬೆವರಿನ ಫಲವಾಗಿ ಹತ್ತಾರು ಹುದ್ದೆಗಳನ್ನು ಕೃಷ್ಣ ಅಲಂಕರಿಸಿದ್ದಾರೆ. ಕಾರ್ಯಕರ್ತರ ಮನವಿಯನ್ನು ದಿಕ್ಕರಿಸಿ ಅವರು ಕಾಂಗ್ರೆಸ್ ತೊರೆದಿದ್ದಾರೆ. ಕೃಷ್ಣಗೆ
ಕಾರ್ಯಕರ್ತ ಶಾಪ ತಟ್ಟುವಲ್ಲಿ ಸಂಶಯವೇ ಇಲ್ಲ ಎಂದು ಮುನವಳ್ಳಿ ಆಪಾದಿಸಿದರು.