ಬೆಳಗಾವಿ- ಬಸವ ತತ್ವದ ಮೇಲೆ ನಡೆಯವ ಮಠಗಳ ಬಗ್ಗೆ ಮಠಾಧೀಶರ ಬಗ್ಗೆ ಸಂಸದ ಸುರೇಶ ಅಂಗಡಿ ಅವಹೇಳನಕಾರಿ ಹೇಳಿಕೆ ನೀಡಿರುವದಕ್ಕೆ ಕೆಪಿಸಿಸಿ ಮಾಜಿ ಸದಸ್ಯ ಕರ ಮುನವಳ್ಳಿ ಖಂಡಿಸಿದ್ದಾರೆ
ಬೆಳಗಾವಿಯಲ್ಲಿ ಸುದ್ಧಿಗೋಷ್ಠಿ ನಡೆಸಿದ ಅವರು ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂದು ಸಮಾಜದ ಬಂಧುಗಳು ಒತ್ತಾಯವಾಗಿದೆ ಆದರೆ ಒಂದು ಸಮಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವಾಗಲಿ ಎಂದು ಬೇಡಿಕೆ ಇಟ್ಟಿದ ಬಿಜೆಪಿ ನಾಯಕರು ಇಂದು ಅಮೀತ ಶಾ ಸೂಚನೆ ಮೇರೆಗೆ ಪಲಾಯನ ವಾದ ಮಂಡಿಸುತ್ತಿದ್ದು ಲಿಂಗಾಯತ ನಾಯಕ ನಾನೇ ಎಂದು ಬಿಂಬಿಸಿಕೊಂಡಿದ್ದ ಯಡಿಯೂರಪ್ಪ ಅವರು ತುಟಿ ಬಿಚ್ಚುತ್ತಿಲ್ಲ ಎಂದು ಶಂಕರ ಮುನವಳ್ಳಿ ಆರೋಪಿಸಿದ್ದಾರೆ
ಬಿಜೆಪಿ ಹಿಂದೂ ಧರ್ಮಕ್ಕೆ ಅಂಟಿಕೊಂಡಿರಬಹುದು ಆದರೆ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ಮಠಾಧೀಶರು ಮುಂದಾಗಿದ್ದಾರೆ ಸಮಾವೇಶವನ್ನು ಆಯೋಜಿಸಿ ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಸ್ಥಾನಮಾನ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಣ್ಣು ತೆರೆಸುವ ಕೆಲಸವನ್ನು ಮಠಾಧೀಶರು ಮಾಡಿದ್ದು ಇಂತವರ ಬಗ್ಗೆ ಸುರೇಶ ಅಂಗಡಿ ಅವರು ಶ್ರೀಗಳ ಬಗ್ಗೆ ಮಠಗಳ ಬಗ್ಗೆ ಹಗುರವಾಗಿ ಮಾತನಾಡಿದ್ದು ಸಂಸದ ಸುರೇಶ ಅಂಗಡಿ ಬಹಿರಂಗವಾಗಿ ಕ್ಷಮೆ ಯಾಚಿಸಲಿ ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ
ಸಂಸದ ಸುರೇಶ ಅಂಗಡಿ ಅವರ ಹೇಳಿಕೆಯಿಂದ ಲಿಂಗಾಯತ ಸಮೂಹ ಕ್ಕೆ ನೋವಾಗಿದೆ ಅವರು ತಕ್ಷಣ ಕ್ಷಮೆಯಾಚನೆ ಮಾಡಬೇಕು ಲಿಂಗಾಯತ ಸಮುದಾಯದ ಬೇಡಿಕೆಗೆ ತಕ್ಕಂತೆ ಕೇಂದ್ರದ ಮೇಲೆ ಒತ್ತಡ ಹೇರಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ಸುರೇಶ ಅಂಗಡಿ ಮಾಡಲಿ ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದರು
ಪ್ರಭಾಕರ ಕೋರೆ ಅವರು ಲಿಂಗಾಯತ ಸಮಾವೇಶಕ್ಕೆ ಲಿಂಗರಾಜ ಮೈದಾನ ಕೊಡುತ್ತಿರಲಿಲ್ಲ ನಾನೇ ಮದ್ಯಸ್ಥಿಕೆ ವಹಿಸಿ ಮೈದಾನ ಕೊಡಿಸಿದ್ದೇನೆ ಎಂದು ಸುರೇಶ ಹೇಳುವ ಮೂಲಕ ಕೋರೆಯವರನ್ನು ವಿವಾದದಲ್ಲಿ ಸಿಲುಕಿಸಿದ್ದು ಸರಿಯಲ್ಲ ಕೋರೆಯವರು ಲಿಂಗಾಯತ ಸಂಸ್ಥೆಯನ್ನು ಚನ್ನಾಗಿ ನಡೆಸುತ್ತಿದ್ದು ಸುರೇಶ ಅಂಗಡಿ ಕೋರೆಯವರ ಬಗ್ಗೆ ಈ ರೀತಿ ಮಾತನಾಡುವದು ಸರಿಯಲ್ಲ ಎಂದು ಶಂಕರ ಮುನವಳ್ಳಿ ಆಕ್ರೋಶ ವ್ಯೆಕ್ತಪಡಿಸಿದರು