Breaking News

ಲಿಂಗಾಯತ ಸಮಾಜಕ್ಕೆ ಶ್ಯಾಮನೂರ ಶಿವಶಂಕರಪ್ಪನವರ ಕೊಡುಗೆ ಏನು ? ಮುನವಳ್ಳಿ ಪ್ರಶ್ನೆ

ಬೆಳಗಾವಿ- ಲಿಂಗಾಯತ ಸಮಾಜದ ಹೆಸರಿನಲ್ಲಿ ಶ್ಯಾಮನೂರು ಶಿವಶಂಕರಪ್ಪ ತಮ್ಮ ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿಕೊಳ್ಳುವದರ ಜೊತೆಗೆ ರಾಜಕೀಯ ಲಾಭ ಪಡೆದುಕೊಂಡಿದ್ದಾರೆ ಲಿಂಗಾಯತ ಸಮಾಜಕ್ಕೆ ಅವರ ಕೊಡುಗೆ ಏನು ? ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಪ್ರಶ್ನಿಸಿದ್ದಾರೆ
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಲಿಂಗಾಯತ ಸಮಾಜದ ಮಠಾಧೀಶರು ಸಮಾಜದ ನಾಯಕರು ಸೇರಿಕೊಂಡು ಲಿಂಗಾಯತ ಧರ್ಮ ಘೋಷಣೆಗೆ ಹೋರಾಟ ಮಾಡುತ್ತಿರುವಾಗ ಶ್ಯಾಮನೂರ ಶಿವಶಂಕರಪ್ಪ ಅವರು ಸಚಿವ ಎಂ ಬಿ ಪಾಟೀಲರನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಧಮಕಿ ಹಾಕುವದು ಸರಿಯಲ್ಲ ಎಂ ಬಿ ಪಾಟೀಲ, ವಿನಯ ಕುಲಕರ್ಣಿ ಅವರು ಸೇರಿದಂತೆ ಲಿಂಗಾಯತ ಸಮಾಜದ ಮಠಾಧೀಶರು ಹೋರಾಟ ಮಾಡುತ್ತಿದ್ದು ಎಲ್ಲ ಹೋರಾಟಗಾರರಿಗೆ ಸರ್ಕಾರ ತಕ್ಷಣ ಭದ್ರತೆ ಒದಗಿಸಬೇಕು ಎಂದು ಶಂಕರ ಮುನವಳ್ಳಿ ಒತ್ತಾಯಿಸಿದರು

ಶ್ಯಾಮನೂರು ಶಿವಶಂಕರಪ್ಪ ಲಿಂಗಾಯತ ಸಮಾಜದ ಉಪಯೋಗ ಪಡೆದುಕೊಂಡು ರಾಜಕೀಯ ಸ್ಥಾನಮಾನ ಪಡೆದುಕೊಂಡಿದ್ದಾರೆ ಲಿಂಗಾಯತ ಸಮಾಜಕ್ಕೆ ಅವರ ಕೊಡುಗೆ ಏನೂ ಇಲ್ಲ ಶ್ಯಾಮನೂರ ಅವರು ಬಿಜೆಪಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರ ಸಮಂಧಿ ಯಾಗಿದ್ದಾರೆ ಹಾಗಾಗಿ ಶ್ಯಾಮನೂರ ಅವರು ಬಿಜೆಪಿಯ ಮರ್ಜಿ ಕಾಯಲು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದರು
ಲಿಂಗಾಯತ ಧರ್ಮ ಘೋಷಣೆಯ ಹೋರಾಟ ವಿರಾಟ ಸ್ವರೂಪವನ್ನು ಪಡೆದುಕೊಂಡಿದೆ ಮುಖ್ಯಮಂತ್ರಿ ಸಿದ್ರಾಮಯ್ಯ ಶ್ಯಾಮನೂರ ಅವರ ಬಾಯಿ ಮುಚ್ಚಿಸಬೇಕು ಎಂದು ಶಂಕರ ಮುನವಳ್ಳಿ ಒತ್ತಾಯ ಮಾಡಿದ್ದಾರೆ
ಸರ್ಕಾರ ಗೌರಿ ಲಂಕೇಶ ಅವರ ಹಂತಕರನ್ನು ಕೂಡಲೇ ಪತ್ತೇ ಮಾಡಿ ತನಿಖೆಯನ್ನು ಪೂರ್ಣಗೊಳಿಸಬೇಕು ಗೌರಿ ಲಂಕೇಶ ಅವರ ಹತ್ಯೆಯ ಹಿಂದೆ ಮತೀಯ ಶಕ್ತಿಗಳ ಕೈವಾಡ ಇರಬಹುದು ಎಂದು ಶಂಕರ ಮುನವಳ್ಳಿ ಶಂಕೆ ವ್ಯೆಕ್ತಪಡಿಸಿದರು
ಹತ್ಯೆ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸುವದು ಬೇಡ ರಾಜ್ಯದ ಪೋಲೀಸರು ತನಿಖೆಗೆ ಸಮರ್ಥರಾಗಿದ್ದಾರೆ ಎಂದು ಶಂಕರ ವಿಶ್ವಾಸ ವ್ಯೆಕ್ತಪಡಿಸಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *