ಬೆಳಗಾವಿ- ಸ್ಮಶಾನದಲ್ಲಿ ದಲಿತರ ದೇವರು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುವ ಸಂಧರ್ಭದಲ್ಲಿ ಸ್ಮಶಾನದಲ್ಲಿ ಸಿಹಿ ಊಟ ಹಾಕಿಸಿ ಒಣ ಪ್ರತಿಷ್ಠೆಗೆ ಬಾಬಾ ಸಾಹೇರನ್ನು ಅವಮಾನಿಸುತ್ತಿರುವ ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಮೂಲ ಅಸ್ಪೃಶ್ಯರಲ್ಲ ಅವರು ದಲಿತರ ನಾಯಕನೂ ಅಲ್ಲ ಅಂತಾ ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಕಿಡಿಕಾರಿದ್ದಾರೆ
ಪತ್ರಿಕಾಗೋಷ್ಠಿ ನಡೆಸಿದ ಅವರು ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಅವರು ಅಗಲಿದ ದಿನ ದಲಿತ ಬಾಂಧವರು ಶೋಕ ಮಾಡುವ ದಿನ ಸ್ಮಶಾನದಲ್ಲಿ ಸಿಹಿ ಊಟ ಹಾಕಿಸಿ ಅಂಬೇಡ್ಕರ್ ಅವರನ್ನು ಅವಮಾನ ಮಾಡುವ ಸತೀಶ ಜಾರಕಿಹೊಳಿ ಅವರ ಮೌಡ್ಯ ವಿರೋಧಿ ಕಾರ್ಯಕ್ರಮವನ್ನು ನಾವು ಸಹಿಸುವದಿಲ್ಲ ಸತೀಶ ಜಾರಕಿಹೊಳಿ ಮೌಡ್ಯವಿರೋಧಿ ಕಾರ್ಯಕ್ರಮವನ್ನು ಸ್ಮಶಾನ ಬಿಟ್ಟು ಬೇರೆ ಸ್ಥಳದಲ್ಲಿ ಮಾಡಿದರೆ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಶಂಕರ ಮುನವಳ್ಳಿ ಹೇಳಿದ್ದಾರೆ
ಸತೀಶ ಜಾರಕಿಹೂಳಿ ಎಸ್ ಟಿ ಜನಾಂಗದ ನಾಯಕ ಅವರು ವಾಲ್ಮೀಕಿ ಅವರ ಭಾವಚಿತ್ರ ಸ್ಮಶಾನದಲ್ಲಿ ಇಟ್ಟು ಕಾರ್ಯಕ್ರಮ ಮಾಡಿದರೆ ಅವರ ಸಮಾಜದ ಜನ ಅವರಿಗೆ ಪಾಠ ಕಲಿಸುತ್ತಾರೆ ಅಂಬೇಡ್ಕರ್ ಅವರ ಭಾವಚಿತ್ರ ಬಳಿಸಿ ಅವರ ಭಾವ ಚಿತ್ರವನ್ನು ಸ್ಮಶಾನದಲ್ಲಿ ಇಟ್ಟು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಿ ದುಖದಲ್ಲಿರುವ ಜನಗಳ ಮುಂದೆ ಸಿಹಿ ಊಟ ಹಾಕಿಸುವ ಕಾರ್ಯಕ್ರಮಕ್ಕೆ ಮಠಾಧೀಶರು ಯಾವ ಪುರುಷಾರ್ಥ ಕ್ಕಾಗಿ ಭಾಗವಹಿಸುತ್ತಿದ್ದಾರೆ ತಿಳಿಯುತ್ತಿಲ್ಲ ಎಂದು ಶಂಕರ ಮುನವಳ್ಳಿ ಬೇಸರ ವ್ಯೆಕ್ತಪಡಿಸಿದರು
ಸತೀಶ ಜಾರಕಿಹೊಳಿ ಅವರು ಕೂಡಲೇ ಮೌಡ್ಯವಿರೋಧಿ ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡದಿದ್ದರೆ ಅವರ ವಿರುದ್ಧ ಕಾಂಗ್ರೆಸ್ ನಾಯಕರಿಗೆ ದೂರು ಕೊಡುವೆ ಅವರೂ ಕ್ರಮ ಕೈಗೊಳ್ಳದಿದ್ದರೆ ಗುಜರಾತ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಅವರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿರುವ ವಿಷಯವನ್ನು ಗುಜರಾತಿನ ಜನರ ಗಮನಕ್ಕೆ ತರುತ್ತೇನೆ ಈ ಕುರಿತು ಗುಜರಾತ ರಾಜ್ಯದ ಎಲ್ಲ ವಚನ ಪತ್ರಿಕೆಗಳಲ್ಲಿ ಜಾಹಿರಾತು ಕೊಡುತ್ತೇನೆ ಎಂದು ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ
ಸತೀಶ ಜಾರಕಿಹೊಳಿ ಅವರು ತಮ್ಮ ಬೆಂಬಲಿಗರ ಮೂಲಕ ಫೇಸ್ ಬುಕ್ ನಲ್ಲಿ ತಮಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಇಂತಹ ಗೊಡ್ಡು ಬೆದರಿಕೆಗೆ ನಾನು ಹೆದರುವದಿಲ್ಲ ನನ್ನ ಸಮಾಜಕ್ಕಾಗಿ ನಾನು ಜೀವ ಕೊಡಲೂ ಸಿದ್ಧನಾಗಿದ್ದೇನೆ ಈ ವಿಷಯವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ ಅವರ ಗಮನಕ್ಕೂ ತಂದಿದ್ದೇನೆ ದಲಿತ ಸಮಾಜದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪರಮೇಶ್ವರ್ ಅವರ ಗಮನಕ್ಕೂ ತಂದಿದ್ದೇನೆ ಕಾಂಗ್ರೆಸ್ ಹೈಕಮಾಂಡ್ ಸತೀಶ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಂಡು ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಕ್ತರು ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ವಿವಿಧ ದಲಿತ ಸಂಘಟನೆಗಳ ನಾಯಕರು ಭಾಗವಹಿಸಿದ್ದರು